More

    ಉತ್ತರ ಪ್ರದೇಶ ಸರ್ಕಾರ ವಜಾಗೊಳಿಸಿ

    ಚನ್ನಮ್ಮ ಕಿತ್ತೂರು : ಉತ್ತರ ಪ್ರದೇಶದಲ್ಲಿ ಯುವತಿ ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿ ಹಾಗೂ ಸ್ಥಳೀಯ ಸರ್ಕಾರ ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸೇನಾ ತಾಲೂಕು ಘಟಕದ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

    ಯುವತಿಯ ಶವವನ್ನು ಕುಟುಂಬಕ್ಕೆ ನೀಡದೇ ಅಂತ್ಯಕ್ರಿಯೆ ನಡೆಸಿದ್ದು, ಅಮಾನುಷ ಘಟನೆ. ಸಾಕ್ಷಿನಾಶಪಡಿಸುವ ಉದ್ದೇಶದಿಂದ ಪೊಲೀಸರು ಈ ಕೃತ್ಯ ಮಾಡಿದ್ದಾರೆ. ಸ್ಥಳೀಯರಿಗೆ ರಕ್ಷಣೆ ನೀಡುವಲ್ಲಿ ಯೋಗಿ ಸರ್ಕಾರ ನಿರ್ಲಕ್ಷೃ ತೋರುತ್ತಿದೆ. ಯುಪಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಜಿಪಂ ಸದಸ್ಯೆ ರಾದಾಶ್ಯಾಮ ಕಾದ್ರೊಳ್ಳಿ, ಸಂಜೀವ ಲೋಕಾಪುರ, ರಾಜು ಜಾಂಗಟಿ, ಮಡಿವಾಳಪ್ಪ ವಕ್ಕುಂದ, ಕೀರಪ್ಪ ಜಾಂಗಟಿ, ಸುರೇಶ ಜಾಂಗಟಿ, ತಾಲೂಕು ಘಟಕದ ಅಧ್ಯಕ್ಷ ಸುಧೀರ ದೊಡಮನಿ, ಮೋಹನ ಹಂಚಿನಮನಿ, ಪಿ.ಬಿ.ತಳವಾರ, ಸೋಮು ಮುತ್ತೆಣ್ಣವರ, ರಾಜು ಮನ್ನಪ್ಪನವರ, ಬಸವರಾಜ ಹಂಚಿನಮನಿ, ಮಹಾದೇವಿ ಮಣ್ಣವಡ್ಡರ, ಕೀರ ಬಡ್ಲಿ ಇತರರಿದ್ದರು.

    ಕಡಬಿ ವರದಿ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಯುವತಿಯ ಅತ್ಯಾಚಾರ ಖಂಡಿಸಿ ಸಮೀಪದ ಯರಝರ್ವಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಸಂಘಟನೆಗಳು ಸೇರಿ ದೀಪ ಬೆಳಗಿಸಿ ಮೃತ ಯುವತಿಗೆ ಸಂತಾಪ ಸೂಚಿಸಿದರು. ಕರವೇ ಅಧ್ಯಕ್ಷ ಸುರೇಶ ಮುರಗೋಡ ಮಾತನಾಡಿ, ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಲಕ್ಕಪ್ಪ ದೇವರಮನಿ, ಸಿದ್ದಪ್ಪ ದಾಸಪ್ಪನವರ, ದೇಮಪ್ಪ ಕಳಸಿ, ದುರಗವ್ವ ಹರಿಜನ, ವಾಲ್ಮೀಕಿ ಮಂಡಳದ ಸರ್ವ ಸದಸ್ಯರು, ವಾಲ್ಮೀಕಿ ಮಹಿಳಾ ಸಂಘದ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts