More

    ಅಕ್ಷರ ದಾಸೋಹಿ ಡಾ. ದಂಡಿನ ಸೇವೆ ಅನನ್ಯ

    ಗದಗ: ಉತ್ತರ ಕರ್ನಾಟಕದಲ್ಲಿ ಐವತ್ತು ವರ್ಷಗಳಿಂದ ಅಕ್ಷರ ದಾಸೋಹವನ್ನೇ ಕಾಯಕವನ್ನಾಗಿಸಿಕೊಂಡ ಕನಕದಾಸ ಶಿಕ್ಷಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಫ್.ದಂಡಿನ ಅವರ ಸೇವೆ ಅನನ್ಯ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

    ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಬಿ.ಎಫ್.ದಂಡಿನ ದಂಪತಿಯನ್ನು ನಗರದ ತೋಂಟದಾರ್ಯಮಠದಲ್ಲಿ ಶುಕ್ರವಾರ ಸನ್ಮಾನಿಸಿ ಮಾತನಾಡಿದರು. ಈ ಭಾಗದ ಗ್ರಾಮೀಣ ಮಕ್ಕಳ, ಹಿಂದುಳಿದ ವರ್ಗಗಳ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಕಾಯಕ ಜೀವಿಗಳಾಗಿದ್ದಾರೆ. ಸಮಾಜಮುಖಿ ಕಾರ್ಯಗಳ ಮೂಲಕ 80 ವರ್ಷಗಳ ಸಾರ್ಥಕ ಜೀವನವನ್ನು ನಡೆಸಿ ಅವರೊಬ್ಬ ಆದರ್ಶ, ಆದರಣೀಯ ಹಾಗೂ ಅನುಕರಣಿಯ ಸಾಧಕರಾಗಿದ್ದಾರೆ ಎಂದರು.

    ದಂಡಿನ ಅವರ ಪತ್ನಿ ಶಕುಂತಲಾಬಾಯಿ ದಂಡಿನ, ರವಿ ದಂಡಿನ, ಕೆವಿಎಸ್​ಆರ್ ಮಹಾವಿದ್ಯಾಲಯದ ಪ್ರಾಚಾರ್ಯ ಅನಿಲ ವೈದ್ಯ, ಕೆ.ಎಸ್.ಎಸ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಂ. ಅಂಬಲಿಯವರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಸ್.ಎನ್. ವೆಂಕಟಾಪೂರ, ಪ್ರೊ.ಉಮೇಶ. ಹಿರೇಮಠ ಇದ್ದರು.

    ಅಮೂಲ್ಯ ಕೊಡುಗೆ: ರಾಮಣ್ಣ ಬ್ಯಾಟಿ ಅವರಲ್ಲಿನ ಸಾಹಿತ್ಯ ಚೇತನ ಅದಮ್ಯವಾದುದು. ಡಾ. ಅಂಬೇಡ್ಕರ್ ಅವರ ಪುರಾಣವನ್ನು ಭಾಮಿನಿ ಷಟ್ಪಧಿಯಲ್ಲಿ ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ವಿಪ ಮಾಜಿ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.

    ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಆಶುಕವಿ ರಾಮಣ್ಣ ಬ್ಯಾಟಿ ಹಾಗೂ ಡಾ. ಬಿ.ಎಫ್.ದಂಡಿನ ಅವರನ್ನು ಬೆಟಗೇರಿಯಲ್ಲಿ ಸನ್ಮಾನಿಸಿ ಮಾತನಾಡಿದರು. ರಾಮಣ್ಣ ಅವರ ಸಾಹಿತ್ಯ ಕೃಷಿಗೆ ರಾಜ್ಯೋತ್ಸವ ಪ್ರಶಸ್ತಿ ಇನ್ನಷ್ಟು ಸ್ಪೂರ್ತಿ ತುಂಬಲಿ ಎಂದರು. ಡಾ.ಬಿ.ಎಫ್. ದಂಡಿನ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು. ಹಿರಿಯ ಚಿತ್ರಕಲಾವಿದ ಕೆ.ವಿ. ಕುಂದಗೋಳ, ಡಾ.ಬಿ.ಎಲ್.ಚವ್ಹಾಣ, ಎನ್.ವಿ. ಜೋಶಿ ಇತರರು ಇದ್ದರು.

    ಖಾಸಗಿ ಶಿಕ್ಷಣ ಮಂಡಳಿ: ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಂಘದ ಪದಾಧಿಕಾರಿಗಳು ರಾಮಣ್ಣ ಬ್ಯಾಟಿ ಹಾಗೂ ಡಾ. ಬಿ.ಎಫ್.ದಂಡಿನ ಅವರನ್ನು ಸನ್ಮಾನಿಸಿದರು. ಗಣೇಶಸಿಂಗ್ ಬ್ಯಾಳಿ, ಡಾ. ಬಸವರಾಜ ಧಾರವಾಡ, ಡಿ.ಬಿ. ಹುಯಿಲಗೋಳ, ಎಸ್.ಎಂ. ಅಗಡಿ, ಸತೀಶ ಪಾಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಂ.ಎಚ್. ಪೂಜಾರ, ಎಸ್.ಜಿ. ಕೋಲ್ಮಿ, ಎಂ.ಎಂ. ಡಾಲಾಯತ್ ಇದ್ದರು. ಕೆ.ಬಿ. ಭಜಂತ್ರಿ ನಿರ್ವಹಿಸಿದರು.

    ದೇವಾಂಗ ಸಮಾಜ: ರಾಮಣ್ಣ ಬ್ಯಾಟಿ ಅವರನ್ನು ದೇವಾಂಗ ಸಮಾಜದ ಯುವಕರು ಸನ್ಮಾನಿಸಿದರು. ನಗರಸಭೆ ಮಾಜಿ ಸದಸ್ಯ ದಶರಥರಾಜ ಕೊಳ್ಳಿ, ಅಶೋಕ ಹೊನ್ನಳ್ಳಿ, ಪ್ರಭು ನೀಲಗುಂದ, ಸುಭಾಸ ಗಂಜಿ, ವಿನಾಯಕ ಕಂಗೂರಿ, ವೀರಭದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts