More

    ನಾರ್ಬಟ್ ಸಾಲ್ದಾನ ಸೇವೆ ಮಾದರಿ

    ಮೂಡಿಗೆರೆ: ಮಾನವೀಯತೆಯೇ ಮನುಜ ಕುಲದ ಧರ್ಮ ಎಂದು ದಿ.ನಾರ್ಬಟ್ ಸಾಲ್ದಾನ ಬದುಕಿ ತೋರಿಸಿದ್ದಾರೆ ಎಂದು ಚೌಡೇಶ್ವರಿ ಮಹಿಳಾ ಸಂಘದ ಅಧ್ಯಕ್ಷೆ ದೇವಕಮ್ಮ ದರ್ಶನ ತಿಳಿಸಿದರು.
    ತಾಲೂಕಿನ ಕುಂದೂರು ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ದಿ.ನಾರ್ಬಟ್ ಸಾಲ್ದಾನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಸೇವೆ ಎಂಬುದು ಸಮಾಜದಲ್ಲಿ ಅತಿ ದೊಡ್ಡ ಕಾರ್ಯವಾಗಿದೆ. ಸಾರ್ವಜನಿಕರ ಸೇವೆಗಾಗಿ ಆಸ್ಪತ್ರೆ, ಕುಡಿಯುವ ನೀರು, ಶಾಲೆ, ರಸ್ತೆ, ವಸತಿ ಸೇರಿದಂತೆ ಈ ಭಾಗದ ಮೂಲ ಸೌಕರ್ಯಗಳಿಗೆ ಪ್ರಯತ್ನಿಸಿದ್ದರು. ಯಾವುದೇ ಅಧಿಕಾರವಿಲ್ಲದಿದ್ದರೂ ನಾರ್ಬಟ್ ಸಾಲ್ದಾನ ಅವರ ಸೇವೆ ಅನನ್ಯವಾಗಿದೆ. ಬಡವರು ಮತ್ತು ದೀನ ದಲಿತರ ಸೇವೆಗೆ ಸ್ವಂತ ಖರ್ಚಿನಲ್ಲಿ ಧನಸಹಾಯ ಮಾಡಿದ್ದಾರೆ ಎಂದರು.
    ಗ್ರಾಮದ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. ಮಹಿಳೆಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗ್ರಾಮದ ಪ್ರಮುಖರಾದ ಕೆ.ಬಿ.ರಾಮೇಗೌಡ, ಕೆ.ಆರ್.ಸುಂದರೇಶ್, ಆಶಾ ರುದ್ರಪ್ಪಗೌಡ, ಪುಷ್ಪಾ ಪ್ರಸನ್ನ, ಕಾವ್ಯಾ ಹರೀಶ್, ಉಷಾ ಗಣೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts