More

    ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ನಾಟಕ; ಬಿಜೆಪಿ ಸೇರುತ್ತಿಲ್ಲ ಎನ್​ಸಿಪಿಯ 12 ಶಾಸಕರು

    ನವದೆಹಲಿ: ರಾಜಸ್ಥಾನ ಮತ್ತು ಛತ್ತೀಸ್​ಗಢದ ನಂತರದಲ್ಲಿ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್​ ಅಗಡಿಯ (ಎಂವಿಎ) 12 ಶಾಸಕರು ಬಿಜೆಪಿಗೆ ಜಿಗಿದು ರಾಜಕೀಯ ಅಸ್ಥಿರತೆ ಮೂಡಿಸುವ ಹೊಸ ರಾಜಕೀಯ ನಾಟಕ ಆರಂಭವಾಗಿದೆ. ಆದರೆ, ಈ ನಾಟಕ ಸುಳ್ಳು ಎಂದು ನ್ಯಾಷನಲಿಸ್ಟ್​​ ಕಾಂಗ್ರೆಸ್​ ಪಾರ್ಟಿ (ಎನ್​ಸಿಪಿ) ಸ್ಪಷ್ಟಪಡಿಸಿದೆ.

    ಮಹಾರಾಷ್ಟ್ರ ರಾಜಕೀಯದ ನಾಟಕದಲ್ಲಿ ಎನ್​ಸಿಪಿಯ 12 ಶಾಸಕರು ಬಿಜೆಪಿ ಸೇರಲಿದ್ದಾರೆ. ತನ್ಮೂಲಕ ಶಿವಸೇನೆಯ ಉದ್ಧವ್​ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರವನ್ನು ಅಸ್ಥಿರಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇದು ಆಧಾರರಹಿತವಾದ ಹೇಳಿಕೆ. ನಮ್ಮ ಪಕ್ಷದ 12 ಶಾಸಕರು ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಸೇರುವುದಿಲ್ಲ ಎಂದು ಸಚಿವ ಹಾಗೂ ಎನ್​ಸಿಪಿ ಮುಖಂಡ ನವಾಬ್​ ಮಲಿಕ್​ ಸ್ಪಷ್ಟಪಡಿಸಿದ್ದಾರೆ.

    ವಾಸ್ತವದಲ್ಲಿ 2019ರ ವಿಧಾನಸಭಾ ಚುನಾವಣೆಗೂ ಮುನ್ನ ಎನ್​ಸಿಪಿಯಿಂದ ಬಿಜೆಪಿಗೆ ವಲಸೆ ಹೋಗಿರುವವರು ಇದೀಗ ಎನ್​ಸಿಪಿಗೆ ಮರಳಲು ಕಾತರಿಸುತ್ತಿದ್ದಾರೆ. ಹೀಗಿರುವಾಗ ಎನ್​ಸಿಪಿಯ ಶಾಸಕರು ಬಿಜೆಪಿಗೆ ಹೋಗುವ ಪ್ರಮೇಯ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಬಳ್ಳಾರಿಯಲ್ಲಿ ನಿಯಂತ್ರಣಕ್ಕೆ ಸಿಗದ ಕರೊನಾ; ರಾಜ್ಯದಲ್ಲಿ 10 ಸಾವಿರ ದಾಟಿದ ಎರಡನೇ ಜಿಲ್ಲೆ

    ಎನ್​ಸಿಪಿಯ 12 ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಯಾರೋ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ, ಇದೊಂದು ಆಧಾರರಹಿತವಾದ ಮತ್ತು ಕಲ್ಪಿತ ಮಾಹಿತಿಯಾಗಿದೆ. ಚುನಾವಣೆಗೂ ಮುನ್ನ ಎನ್​ಸಿಪಿಯಿಂದ ಬಿಜೆಪಿಗೆ ಹೋದವರು ಮಾತೃಪಕ್ಷಕ್ಕೆ ಮರಳಲು ಕಾತರಿಸುತ್ತಿದ್ದಾರೆ. ಅವರನ್ನು ವಾಪಸು ಕರೆಯಿಸಿಕೊಳ್ಳುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಇಂಥ ನಿರ್ಧಾರ ಕೈಗೊಂಡಾಗ ಖಂಡಿತವಾಗಿಯೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ಮಲಿಕ್​ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

    ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ಏಕೈಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಶಿವಸೇನೆ 56, ಎನ್​ಸಿಪಿ 54 ಮತ್ತು ಕಾಂಗ್ರೆಸ್​ 44 ಸ್ಥಾನಗಳೊಂದಿಗೆ ನಂತರದ ಸ್ಥಾನದಲ್ಲಿವೆ.
    ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಹೊಂದಿದ್ದವು. ಆದರೆ, ಸಿಎಂ ಪದವಿ ವಿಚಾರವಾಗಿ ಉಭಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದರಿಂದ, ಅಲ್ಲಿನ ರಾಜಕೀಯ ಸಮೀಕರಣ ಬದಲಾಗಿ, ಎನ್​ಸಿಪಿ ಮತ್ತು ಕಾಂಗ್ರೆಸ್​ ಬೆಂಬಲದೊಂದಿಗೆ ಶಿವಸೇನೆ ಸರ್ಕಾರ ರಚಿಸಿದೆ.

    ವಿರಾಟ್​ ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ, ಟೀಮ್​ ಇಂಡಿಯಾ ಜನಪ್ರಿಯ ತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts