More

    ಕೃಷಿಯೇತ್ತರ ಚಟುವಟಿಕೆಯಲ್ಲಿ ಭಾಗಿಯಾಗಿ

    ಅಳವಂಡಿ: ರೈತರು ಕೃಷಿಯ ಜತೆಗೆ ಕೃಷಿಯೇತ್ತರ ಚಟುವಟಿಕೆಯಲ್ಲಿ ಪಾಲ್ಗೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಜೇನು ಕೃಷಿಕ ಏಳುಕೋಟೇಶ ಕೋಮಲಾಪುರ ತಿಳಿಸಿದರು.

    ಇದನ್ನೂ ಓದಿ: ಕೃಷಿ ಜಮೀನು ಬೈಪಾಸ್‌ಗಾಗಿ ಒತ್ತುವರಿ: ಸಿಎಂ ಎದುರು ಅಳಲು ತೋಡಿಕೊಂಡ ವೃದ್ಧ

    ಸಮೀಪದ ಹನಕುಂಟಿ ಗ್ರಾಮದಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಕೃಷಿ ವಿಸ್ತರಣಾ ಕಾರ್ಯಕ್ರಮದಡಿ ನಡೆದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

    ಜೇನು ಕೃಷಿಯಿಂದ ಆಹಾರ ಮತ್ತು ಆದಾಯ ಸಿಗಲಿದೆ. ಜೇನಿನಿಂದ ವಿವಿಧ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯ. ಹೀಗಾಗಿ ಇದರ ಬೇಡಿಕೆ ಹೆಚ್ಚು. ಸರ್ಕಾರ ಜೇನು ಸಾಕಾಣೆಕೆಗೆ ಸಹಾಯಧನವನ್ನು ನೀಡುತ್ತಿದ್ದು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು. ಕೃಷಿ ಮೇಲ್ವಿಚಾರಕ ಅಶೋಕ, ಲಿಂಗರಾಜ, ಎಸ್‌ಪಿ ಜ್ಯೋತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts