More

    ನಾಳೆಯಿಂದ ನಾಮಪತ್ರ ಸಲ್ಲಿಕೆ; ಗುರುವಾರ ಅಧಿಸೂಚನೆ | ಆಯೋಗದಿಂದ ಸಿದ್ಧತೆ

    ಬೆಂಗಳೂರು: ವಿಧಾನಸಭೆ ಚುನಾವಣೆಯ ಸಮರಕ್ಕೆ ಹುರಿಯಾಳುಗಳು ಯಾರೆಂಬುದು ಸ್ಪಷ್ಟವಾಗುವ ಪ್ರಕ್ರಿಯೆ ಗುರುವಾರ (ಏ.13) ಆರಂಭವಾಗಲಿದೆ. 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಇದರ ಪೂರ್ವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ. ನಾಮಪತ್ರ ಸ್ವೀಕರಿಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಆಯೋಗದ ತಯಾರಿ

    • 58,282 ಬೂತ್​ಗಳನ್ನು ಗುರುತಿಸಿದ್ದು, ಮತದಾರರ ಪಟ್ಟಿಗೆ ಸೇರ್ಪಡೆ ಕಾರ್ಯ ಮುಂದುವರಿಸಲಾಗಿದೆ.
    • 80 ವರ್ಷ ಮೇಲ್ಪಟ್ಟವರಿಗೆ 3 ದಿನ ಮುಂಚೆಯೇ ಮನೆಯಲ್ಲೇ ಮತದಾನಕ್ಕೆ ಅವಕಾಶಕ್ಕೆ ತಯಾರಿ
    • ಮತದಾನ ಜಾಗೃತಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಹಿಳೆ, ದಿವ್ಯಾಂಗರಿಗೆ ಪ್ರತ್ಯೇಕ ಮತಗಟ್ಟೆ ವ್ಯವಸ್ಥೆ

    ವೇಳಾಪಟ್ಟಿ

    • ಗೆಜೆಟ್ ಅಧಿಸೂಚನೆ: ಏ.13 ಗುರುವಾರ
    • ನಾಮಪತ್ರ ಸಲ್ಲಿಕೆ ಆರಂಭ: ಏ.13ರಿಂದ
    • ನಾಮಪತ್ರ ಸಲ್ಲಿಕೆ ಕೊನೆ ದಿನ: ಏ.20
    • ನಾಮಪತ್ರ ಪರಿಶೀಲನೆ: ಏ.21
    • ನಾಮಪತ್ರ ಹಿಂಪಡೆಯಲು ಕೊನೆ ದಿನ: ಏ.24
    • ಮತದಾನ : ಮೇ 10
    • ಮತ ಎಣಿಕೆ : ಮೇ 13
    • ಚುನಾವಣಾ ಪ್ರಕ್ರಿಯೆ ಮುಕ್ತಾಯ: ಮೇ 15

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts