More

    ಬಾಲಿವುಡ್​ನಲ್ಲಿ ನನಗೆ ಸ್ನೇಹಿತರು ಯಾರೂ ಇಲ್ಲ ಎಂದ ಕಂಗನಾ: ಕಾರಣ ಹೇಳಿದ್ದು ಹೀಗೆ

    ಮುಂಬೈ: ಬಾಲಿವುಡ್ ಅನ್ನು ಮತ್ತೊಮ್ಮೆ ಕೆದಕಿರುವ ನಟಿ ಕಂಗನಾ ರನೌತ್​​ ನನಗೆ ಇಲ್ಲಿ ಯಾರೂ ಸ್ನೇಹಿತರಿಲ್ಲ, ಅಂತಹ ಯೋಗ್ಯತೆ ಯಾರಿಗೂ ಇಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

    ಧಾಕಡ್​ ಸಿನಿಮಾ ಪ್ರಚಾರದ ವೇಳೆ ಬಾಲಿವುಡ್​ ವಿರುದ್ಧ ಮತ್ತೊಮ್ಮೆ ಕಿಡಿ ಕಾರಿದ್ದಾರೆ. ಆಗ್ಗಾಗ್ಗೆ ಬಾಲಿವುಡ್​ ಒಳಮುಖವನ್ನು ಪರಿಚಯಿಸುವ ನಟಿ ಕಂಗನಾಗೆ ಬಾಲಿವುಡ್​​ನಲ್ಲಿ ಅಷ್ಟಾಗಿ ಯಾರೂ ಗೆಳೆಯರಿಲ್ಲ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

    ನೇರ ಮಾತಿನಿಂದಲೇ ಖ್ಯಾತಿಯಾಗಿರುವ ಕಂಗನಾ ಬಾಲಿವುಡ್​ನ ಹಲವು ಕರಾಳತೆಯನ್ನು ಬಿಚ್ಚಿಡುತ್ತಾ ಬಂದಿದ್ದಾರೆ. ಈ ಬಾರಿಯೂ ಬಾಲಿವುಡ್​ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

    ನನಗೆ ಬಾಲಿವುಡ್​​ನಲ್ಲಿ ಯಾರೂ ಸ್ನೇಹಿತರಿಲ್ಲ, ನನ್ನ ಮನೆಯಲ್ಲಿ ನನ್ನ ಆತಿಥ್ಯ ಸ್ವೀಕರಿಸೋಕೆ ಯಾರಿಗೂ ಅರ್ಹತೆ ಇಲ್ಲ. ನನ್ನ ಸ್ನೇಹಿತರಾಗೋಕೆ ಯಾರೂ ಲಾಯಕ್ಕಿಲ್ಲ ಎಂದು ಹೇಳಿದ್ದಾರೆ.

    ಯಾವ ಮೂರು ಬಾಲಿವುಡ್​ ತಾರೆಯರನ್ನು ನೀವು ಭಾನುವಾರ ನಿಮ್ಮ ಮನೆಗೆ ಊಟಕ್ಕೆ ಕರೆಯುತ್ತೀರಿ ಎಂಬ ಪ್ರಶ್ನೆಗೆ ಕಂಗನಾ ಈ ರೀತಿ ಉತ್ತರಿಸಿದ್ದಾರೆ. ನಾನು ಮನೆಗೆ ಯಾರನ್ನೂ ಕರೆಯುವುದಿಲ್ಲ. ಹೊರಗಡೆ ಅಷ್ಟೇ ಭೇಟಿ ಮಾಡುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)

    ದುಬಾರಿ ಉಡುಗೊರೆ ಕೊಟ್ಟ ಮೈಸೂರಿನ ಹೊಸ ಬಾಯ್​ಫ್ರೆಂಡ್​​ ಪರಿಚಯಿಸಿದ ರಾಖಿ ಸಾವಂತ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts