More

    ಯಕ್ಷಗಾನ ಪ್ರದರ್ಶನ ಸ್ಥಗಿತ

    ಮಂಗಳೂರು/ಉಡುಪಿ: ಕೋವಿಡ್ ಲಾಕ್‌ಡೌನ್ ಈ ಬಾರಿಯೂ ಯಕ್ಷಗಾನ ಪ್ರದರ್ಶನದ ಸೀಸನ್‌ನ್ನು ಬಲಿ ತೆಗೆದುಕೊಂಡಿದೆ.

    ಕಳೆದ ವರ್ಷ ಮಾರ್ಚ್ 22ರ ಬಳಿಕದ ಲಾಕ್‌ಡೌನ್ ಜಾರಿಯಾಗಿತ್ತು. ಬಳಿಕದ ಕಠಿಣ ನಿಯಮಾವಳಿಗಳಿಂದ ಯಕ್ಷಗಾನ ಸೀಸನ್ ಶುರುವಾಗಿದ್ದೇ ತಡವಾಗಿ. ಹಲವು ಷರತ್ತುಗಳೊಂದಿಗೆ ಅನುಮತಿ ನೀಡಲಾಗಿತ್ತು. ಈ ಬಾರಿ ಪತ್ತನಾಜೆಗೆ ಮೊದಲೇ ಯಕ್ಷಗಾನ ಸ್ಥಗಿತಗೊಳ್ಳುವ ಸಾಧ್ಯತೆ ಗೋಚರಿಸಿದೆ.

    ಮೇ 11ರ ವರೆಗೂ ಲಾಕ್‌ಡೌನ್ ಇದ್ದು, ಆ ಬಳಿಕವೂ ಅನಿಶ್ಚಿತತೆ ಇದೆ. ಮೇ 24ರಂದು ಪತ್ತನಾಜೆ ಬರಲಿದ್ದು, ಅಂದು ಮೇಳಗಳು ಗೆಜ್ಜೆ ಕಳಚುವುದು ಸಂಪ್ರದಾಯ. ಹಾಗಾಗಿ ಒಂದು ತಿಂಗಳಿಗೂ ಅಧಿಕ ಕಾಲ ಯಕ್ಷಗಾನ ಪ್ರದರ್ಶನ ಸತತ ಎರಡನೇ ವರ್ಷವೂ ಕೋವಿಡ್‌ನಿಂದಾಗಿ ನಷ್ಟವಾಗಿದೆ.

    ಧರ್ಮಸ್ಥಳ ಮೇಳ ಈ ಬಾರಿಯ ಎಲ್ಲ ಪ್ರದರ್ಶನಗಳನ್ನೂ ರದ್ದುಗೊಳಿಸಿದೆ. ಇತರ ಮೇಳಗಳೂ ಅದೇ ಹಾದಿ ತುಳಿಯುವ ಸಾಧ್ಯತೆ ಅಧಿಕ.
    ‘ನೈಟ್ ಕರ್ಫ್ಯೂ ಆದೇಶದ ಬಳಿಕ ಕಲಾವಿದರಿಗೆ ತಾತ್ಕಾಲಿಕ ರಜೆ ನೀಡಲಾಗಿತ್ತು. ಮತ್ತೆ ಯಕ್ಷಗಾನಕ್ಕೆ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಐದು ಮೇಳಗಳಿಗೆ ನಿತ್ಯ ಪೂಜೆ ನಡೆಯುತ್ತಿದೆ. ಏಪ್ರಿಲ್, ಮೇ ಸೀಸನ್ ಆಗಿದ್ದು, ಈ ತಿಂಗಳಲ್ಲಿ ಹರಕೆ ಆಟಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ.

    ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ಹರಕೆ ಆಟಗಳು ಬಾಕಿಯಾಗಿದ್ದು, ಒಂದೊಂದು ಮೇಳದಿಂದ 20-30 ಆಟಗಳು ಬಾಕಿ ಇದೆ’ ಎಂದು ಐದು ಮೇಳಗಳ ಯಜಮಾನ ಕಿಶನ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts