More

    “ಯಾವುದೇ ರಾಜ್ಯವೂ ಸಂಪೂರ್ಣ ಲಾಕ್‌ಡೌನ್‌ ವಿಧಿಸುವುದಿಲ್ಲ”

    ಗಾಂಧಿನಗರ/ಕೊಲ್ಕತಾ : ದೇಶದಲ್ಲಿ ಕರೊನಾ ಪ್ರಕರಣಗಳು ಉಲ್ಬಣಿಸುತ್ತಿರುವ ಸಂದರ್ಭದಲ್ಲಿ ಮತ್ತೆ ಲಾಕ್​ಡೌನ್​ ವಿಧಿಸುವ ಬಗ್ಗೆ ಎಲ್ಲರಲ್ಲೂ ಆತಂಕ ಉಂಟಾಗುತ್ತಿದೆ. ಆದರೆ, ಈ ಎರಡು ರಾಜ್ಯಗಳಲ್ಲಿ ಲಾಕ್​ಡೌನ್ ಮಾಡುವ ಆಲೋಚನೆಗಳನ್ನು ಅಲ್ಲಿನ ಆಡಳಿತ ಪಕ್ಷದ ನಾಯಕರು ತಳ್ಳಿಹಾಕಿದ್ದಾರೆ. ಅಷ್ಟೇ ಅಲ್ಲ ಗುಜರಾತ್​​ನ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು “ಯಾವುದೇ ರಾಜ್ಯವೂ ಸಂಪೂರ್ಣ ಲಾಕ್‌ಡೌನ್‌ ವಿಧಿಸುವುದಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಲಾಕ್​ಡೌನ್​ ಅಥವಾ ರಾತ್ರಿ ಕರ್ಫ್ಯೂವಿನ ಸಾಧ್ಯತೆ ಇಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರಾಜ್ಯದಲ್ಲಿ ಎಲ್ಲಾ ಶಾಲೆಗಳನ್ನು ಮಾತ್ರ ಎರಡು ತಿಂಗಳ ಮಟ್ಟಿಗೆ ಮುಚ್ಚಲಾಗಿದ್ದು, ಬೇಸಿಗೆ ರಜೆಯನ್ನು ಘೋಷಿಸಲಾಗಿದೆ. ಮಾಲ್ಡಾದಲ್ಲಿ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬ್ಯಾನರ್ಜಿ, “ಬಂಗಾಳದಲ್ಲಿ ಸದ್ಯಕ್ಕೆ ಲಾಕ್​ಡೌನ್ ಮಾಡುವ ಯಾವುದೇ ಯೋಜನೆ ನಮ್ಮಲ್ಲಿಲ್ಲ. ಕೇವಲ ಲಾಕ್‌ಡೌನ್ ಸಮಸ್ಯೆಯನ್ನು ಪರಿಹರಿಸುತ್ತದೆ? ಜನರಿಗೆ ಸ್ವಲ್ಪ ಸಮಯ ನೀಡಬೇಕು. ಪ್ರಕರಣಗಳು ಹೆಚ್ಚುತ್ತಿವೆ ಏಕೆಂದರೆ ಸಾವಿರಾರು ಜನರು ಹೊರಗಿನಿಂದ ಬರುತ್ತಿದ್ದಾರೆ. ನಾವು ಲಾಕ್‌ಡೌನ್ ಹೇರಿದರೆ ಜನರು ತೊಂದರೆ ಅನುಭವಿಸುತ್ತಾರೆ” ಎಂದರು. ಜೊತೆಗೆ, “ರಾಜಕೀಯ ಮಾಲಿನ್ಯವನ್ನು ಕಡಿಮೆ ಮಾಡುವುದರತ್ತಲೂ ಗಮನ ಹರಿಸಬೇಕು” ಎಂದರು !

    ಇದನ್ನೂ ಓದಿ: ಪ್ರಭಾವಿಗಳಿಗೆ ಸುಸೂತ್ರ, ಸಾಮಾನ್ಯರಿಗೆ ದಂಡಾಸ್ತ್ರ ; ಕರೊನಾ ನಿಯಮ ಉಲ್ಲಂಘನೆ ದಂಡ ವಿಧಿಸುವಲ್ಲಿ ತಾರತಮ್ಯದ ಆರೋಪ

    ವೈಜ್ಞಾನಿಕ ಪುರಾವೆ ಇಲ್ಲ : ಇನ್ನು ಗುಜರಾತ್​ನ ಆರೋಗ್ಯ ಮಂತ್ರಿಯೂ ಆದ ಡೆಪ್ಯುಟಿ ಸಿಎಂ ನಿತಿನ್ ಪಟೇಲ್​ ಅವರು, “ಲಾಕ್​ಡೌನ್ ಮಾಡಿದರೆ ರೋಗ ಹರಡುವ ಸರಪಳಿಯನ್ನು ತುಂಡರಿಸಬಹುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ” ಎಂದು ಸಾರಾಸಗಟಾಗಿ ಹೇಳಿಬಿಟ್ಟಿದ್ದಾರೆ.

    ಗುಜರಾತಿನಲ್ಲಿ ಏಪ್ರಿಲ್​ 1 ಕ್ಕೆ 2,410 ಪ್ರಕರಣಗಳು, 9 ಸಾವುಗಳು ವರದಿಯಾಗಿದ್ದವು. ಅದೇ ನಿನ್ನೆ 11,403 ಹೊಸ ಪ್ರಕರಣಗಳೂ 117 ಸಾವುಗಳೂ ವರದಿಯಾಗಿವೆ. ಈ ಸಂದರ್ಭದಲ್ಲೂ ಲಾಕ್​ಡೌನ್​ ಮಾಡುವ ಯೋಜನೆ ಇಲ್ಲ ಎಂದಿರುವ ಸಿಎಂ ಪಟೇಲ್, “ಹಲವಾರು ರಾಜ್ಯಗಳು, ದೇಶಗಳು ಲಾಕ್‌ಡೌನ್ ವಿಧಿಸಿದ್ದರೂ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ಕಂಡಿವೆ. ಮೊದಲ ಅಲೆಯಲ್ಲಿ, ನಾವು ಲಾಕ್​ಡೌನ್​ನಿಂದ ಸೋಂಕಿನ ಸರಪಳಿಯನ್ನು ಮುರಿಯಬಹುದಾಗಿತ್ತು. ಆದರೆ ಈ ಎರಡನೇ ಅಲೆಯಲ್ಲಿ, ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ” ಎಂದಿದ್ದಾರೆ.

    “ನಾವು ರಾತ್ರಿ ಕರ್ಫ್ಯೂ ವಿಧಿಸಿದ್ದೇವೆ. ಏಕೆಂದರೆ ಬಹಳಷ್ಟು ಜನರು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಪಾನ್ ಸ್ಟಾಲ್‌ಗಳಿಗೆ ಹೋಗುತ್ತಾರೆ. ಹೌಸಿಂಗ್ ಸೊಸೈಟಿಗಳ ಆವರಣದಲ್ಲಿ ಸುತ್ತಾಡುತ್ತಾರೆ… ಇದರಿಂದ ಸೋಂಕಿನ ಸಾಧ್ಯತೆಗಳು ಹೆಚ್ಚುತ್ತಿವೆ… ಯಾವುದೇ ರಾಜ್ಯವೂ ಸಂಪೂರ್ಣ ಲಾಕ್‌ಡೌನ್‌ ವಿಧಿಸುವುದಿಲ್ಲ” ಎಂದು ಪಟೇಲ್ ಹೇಳಿದ್ದಾರೆ. (ಏಜೆನ್ಸೀಸ್)

    ಕೊಳೆಗೇರಿಗಳಲ್ಲಲ್ಲ, ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚು ಕರೊನಾ ಸೋಂಕು !

    18 ವರ್ಷ ಮೇಲ್ಪಟ್ಟವರಿಗೆಲ್ಲ ಮೇ 1ರಿಂದ ಕರೊನಾ ಲಸಿಕೆ ಲಭ್ಯ! ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts