More

    ಲಡಾಖ್​ನಲ್ಲಿ ಮುಂದುವರಿದ ಉದ್ವಿಗ್ನ ಪರಿಸ್ಥಿತಿ, ಬಿಕ್ಕಟ್ಟು ಪರಿಹಾರದ ಲಕ್ಷಣಗಳು ಇಲ್ಲ

    ನವದೆಹಲಿ: ಲಡಾಖ್​ ಪ್ರದೇಶದ ವಾಸ್ತವ ಗಡಿರೇಖೆ (ಎಲ್​ಎಸಿ) ಬಳಿ ಭಾರತ ಮತ್ತು ಚೀನಾ ನಡುವೆ ಉಂಟಾಗಿರುವ ಬಿಕ್ಕಟ್ಟು ಸದ್ಯಕ್ಕೆ ಪರಿಹಾರವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ಜಾರಿಯಲ್ಲಿ ಇರುವುದಾಗಿ ಉಭಯ ರಾಷ್ಟ್ರಗಳು ಹೇಳಿಕೊಳ್ಳುತ್ತಿವೆ. ವಾಸ್ತವದಲ್ಲಿ ಅದು ಫಲಪ್ರದವಾಗುವ ಸಾಧ್ಯತೆಗಳು ಕಂಡುಬರುತ್ತಿಲ್ಲ.

    ಆಸೆ ಬತ್ತಿಲ್ಲ: ಈ ಹಿಂದೆ ಕೂಡ ಭಾರತ ಮತ್ತು ಚೀನಾ ನಡುವೆ ಡೊಕ್ಲಾಂ ಮತ್ತು ಡೆಪ್​ಸಾಂಗ್​ ಬಿಕ್ಕಟ್ಟುಗಳು ಉಂಟಾಗಿದ್ದವು. 70 ದಿನಗಳ ನಿರಂತರ ಪ್ರಯತ್ನದ ಬಳಿಕ ಡೊಕ್ಲಾಂ ಬಿಕ್ಕಟ್ಟು ಪರಿಹಾರವಾಗಿತ್ತು. ಅಂತೆಯೇ ಡೆಪ್​ಸಾಂಗ್​ ಬಿಕ್ಕಟ್ಟು ಪರಿಹಾರಗೊಳ್ಳಲು ಸಾಕಷ್ಟು ಸಮಯವಾಗಿತ್ತು.

    ಇವುಗಳ ರೀತಿಯಲ್ಲೇ ಲಡಾಖ್​ ಬಿಕ್ಕಟ್ಟು ಕೂಡ ಪರಿಹಾರವಾಗಲಿದೆ. ಆದರೆ ಇದಕ್ಕೆ ತುಂಬಾ ಸಮಯ ಬೇಕಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಪಾತಾಳಕ್ಕೆ ಕುಸಿದಿರೋ ದೇಶದ ಆರ್ಥಿಕತೆ ಮೇಲೆತ್ತಲು ಕರ್ನಾಟಕ ಸೇರಿದಂತೆ 5 ರಾಜ್ಯಗಳೇ ಆಧಾರ!

    ಮೂಡಿದ ಆಶಾಕಿರಣ: ಮೂರು ವಾರಗಳಿಂದ ಗಲ್ವಾನ್​ ಕಣಿವೆಯಲ್ಲಿ ಮೂರು ಕಡೆ ಮತ್ತು ಪ್ಯಾಂಗಾಂಗ್​ ತ್ಸೊ ಸರೋವರದ ಬಳಿ ಒಂದು ಕಡೆ ಎರಡೂ ರಾಷ್ಟ್ರಗಳ ಯೋಧರು ಬಿರುಗಣ್ಣಿನ ನೋಟ ಬೀರಿಕೊಂಡು ಎದುರುಬದುರು ಕುಳಿತಿದ್ದರು. ಇದರಿಂದಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಆಗಿಯೇ ಬಿಡುತ್ತದೆ ಎಂಬ ಭಾವ ಮೂಡಿತ್ತು.

    ಆದರೆ, ಮಂಗಳವಾರದಂದು ಉಭಯ ರಾಷ್ಟ್ರಗಳು ಸಣ್ಣ ಪ್ರಮಾಣದಲ್ಲಿ ಯೋಧರನ್ನು ಹಿಂದಕ್ಕೆ ಪಡೆದುಕೊಂಡಿವೆ. ಇದರಿಂದಾಗಿ ಪರಿಸ್ಥಿತಿ ತಿಳಿಗೊಳ್ಳುವ ಆಶಾಕಿರಣ ಮೂಡಿದೆ.

    ಯಥಾಸ್ಥಿತಿಗೆ ತಿಂಗಳುಗಳೇ ಬೇಕು: ಒಂದು ವೇಳೆ ಮಾತುಕತೆಗಳು ಸಫಲವಾಗಿ ಬಿಕ್ಕಟ್ಟು ಪರಿಹಾರವಾಗಿ ಉಭಯ ರಾಷ್ಟ್ರಗಳು ತಮ್ಮ ಸೇನಾಪಡೆಗಳನ್ನು ಹಿಂದೆಕರೆಸಿಕೊಂಡರೂ ಈ ನಾಲ್ಕು ಪ್ರದೇಶಗಳಲ್ಲಿನ ಪರಿಸ್ಥಿತಿ ಏಪ್ರಿಲ್​ನಲ್ಲಿ ಇದ್ದ ಸ್ಥಿತಿಗೆ ಮರಳಲು ಕೆಲವು ತಿಂಗಳುಗಳೇ ಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಮರಳಿನಲ್ಲಿ ಅರಳಿತು ಸೋನು ಸೂದ್​ ಕಲಾಕೃತಿ; ಸುದರ್ಶನ್​ ಪಟ್ನಾಯಕ್ ಕಲಾನಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts