More

    ಚಿಕ್ಕವರಿಗಿಲ್ಲ ಇನ್ನೂ ಮೂರು ತಿಂಗಳು ಶಾಲೆ, ದೊಡ್ಡವರಿಗೆ ಪಾಳಿ ಪದ್ಧತಿ; ಕೇಂದ್ರ ಸಿದ್ಧಪಡಿಸುತ್ತಿದೆ ಪುನರಾರಂಭದ ಮಾರ್ಗಸೂಚಿ

    ನವದೆಹಲಿ: ಎರಡು ತಿಂಗಳ ಹಿಂದಿನ ಕರೊನಾ ಪ್ರಕರಣಗಳನ್ನು ಪರಿಗಣಿಸಿದರೆ ಭಾರತ ವಿಶ್ವಮಟ್ಟದಲ್ಲಿ ಲೆಕ್ಕಕ್ಕೆ ಇರಲಿಲ್ಲ., ಅಂದರೆ ತೀರಾ ಕಡಿಮೆ ಇತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ಹೆಚ್ಚು ಪ್ರಕರಣಗಳಿರುವ ದೇಶಗಳ ಪೈಕಿ ಭಾರತ 10ನೇ ಸ್ಥಾನಕ್ಕೆ ಏರಿದೆ. ಕೋವಿಡ್​ ದಿನೇದಿನೇ ಆತಂಕ ಹೆಚ್ಚಿಸುತ್ತಿದೆ.

    ಈ ನಡುವೆ, ಕರೊನಾ ನಿಯಂತ್ರಣಕ್ಕೆ ಬರಲಿದೆ ಎಂಬ ಭರವಸೆಯೊಂದಿಗೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳ ದಿನಾಂಕ ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆ ಕೂಡ ನಿಗದಿಯಾಗಿದೆ. ಆದರೆ, ಹೆಚ್ಚುತ್ತಿರುವ ಕೋವಿಡ್​ನಿಂದಾಗಿ ಅದಕ್ಕೂ ವಿರೋಧ ವ್ಯಕ್ತವಾಗುತ್ತಿದೆ.

    ಶೈಕ್ಷಣಿಕ ಚಟುವಟಿಕೆಗಳ ಮರು ಆರಂಭದ ಬಗ್ಗೆ ಹೆಚ್ಚು ವಿಶ್ವಾಸವಿದ್ದವರು ಈಗ ಏನಪ್ಪ ಎಂದು ಚಿಂತೆ ಮಾಡುವಂತಾಗಿದೆ. ಈ ನಡುವೆಯೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (NCERT) ಜತೆ ಸೇರಿ ಶಾಲೆ ಪುನರಾರಂಭದ ಬಗ್ಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ.

    ಇದನ್ನೂ ಓದಿ; ಈ ವರ್ಷ ನರ್ಸರಿ ಸ್ಕೂಲ್​ ತೆರೆಯಲ್ವಾ…? ಆಡ್ಮಿಷನ್​ ಮಾಡಿಸ್ಬೇಕೋ ಬೇಡ್ವೋ? 

    ಅದರಂತೆ, ದೊಡ್ಡ ಮಕ್ಕಳಿಗೆ ಅಂದರೆ ಹೈಸ್ಕೂಲ್ ಹಾಗೂ ಪಿಯು ತರಗತಿಗಳು ಮೊದಲಿಗೆ ಆರಂಭವಾಗಲಿವೆ. ಅಂದರೆ, ಜುಲೈನಲ್ಲಿ ಶುರುವಾಗುವ ಸಾಧ್ಯತೆಗಳಿದ್ದು, ಪಾಳಿ ಪದ್ಧತಿಯಲ್ಲಿ ತರಗತಿಗಳು ನಡೆಯಲಿವೆ. ಇನ್ನು ಚಿಕ್ಕಮಕ್ಕಳ ಅಂದರೆ 1ರಿಂದ 5ನೇ ತರಗತಿಯವರು ಅಥವಾ 10 ವರ್ಷದೊಳಗಿನವರಿಗೆ ಇನ್ನೂ ಮೂರು ತಿಂಗಳು ತರಗತಿ ಆರಂಭ ಅನುಮಾನ ಎನ್ನಲಾಗಿದೆ.

    ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದು ಹಾಗೂ ಸ್ವಚ್ಛತಾ ಕ್ರಮಗಳ ನಿಯಮಗಳನ್ನು ಪಾಲಿಸುವುದು ದೊಡ್ಡವರಿಗೆ ಅಷ್ಟೊಂದು ಕಷ್ಟದಾಯಕವಾಗದು. ಹೀಗಾಗಿ ಈ ಮಕ್ಕಳ ತರಗತಿ ಮೊದಲಿಗೆ ಶುರುವಾಗಲಿದೆ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಕಡ್ಡಾಯವಾಗದಿದ್ದರೂ, ಭವಿಷ್ಯದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಹೇಗಿರಲಿವೆ ಎಂಬುದಕ್ಕೆ ದಿಕ್ಸೂಚಿಯಾಗಿರಲಿವೆ.

    ಇದನ್ನೂ ಓದಿ; ಆಘಾತಕಾರಿ… 100 ಸ್ಮಾರ್ಟ್​ ಸಿಟಿ ಯೋಜನೆಗಳಲ್ಲಿ ಆರೋಗ್ಯ ಕ್ಷೇತ್ರ ಲೆಕ್ಕಕ್ಕೇ ಇಲ್ಲ 

    ಹೈಸ್ಕೂಲ್​ ಅಥವಾ ಪಿಯು ವಿದ್ಯಾರ್ಥಿಗಳನ್ನು ಒಂದೇ ಬಾರಿಗೆ ಕರೆಸಲಾಗುವುದಿಲ್ಲ. ಒಂದೊಂದು ತರಗತಿಗೆ ಒಂದೊಂದು ಸಮಯ ನಿಗದಿಯಾಗಬಹುದು. ದಿನ ಬಿಟ್ಟು ದಿನ ಅಥವಾ ಬ್ಯಾಚ್​ಗಳಲ್ಲಿ ಕರೆಸಬಹುದು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳ ನಡುವೆ ಕನಿಷ್ಠ ಆರು ಅಡಿ ಅಂತರವಿರುವಂತೆ ಆಸನ ವ್ಯವಸ್ಥೆಗೆ ಸಲಹೆ ನೀಡಬಹುದು. ಹೀಗಾದಾಗ ಒಂದೇ ತರಗತಿಯ ಅಥವಾ ಕ್ಲಾಸ್​ನ ಎಲ್ಲ ಮಕ್ಕಳು ಒಟ್ಟಿಗೆ ಒಂದೇ ಕೊಠಡಿಯಲ್ಲಿ ಕೂರುವುದು ಅಸಾಧ್ಯವಾಗಲಿದೆ. ಹೀಗಾಗಿ ಒಂದೇ ತರಗತಿ ಅಥವಾ ಸೆಕ್ಷನ್​ಅನ್ನು 15ರಿಂದ 20 ವಿದ್ಯಾರ್ಥಿಗಳ ಬ್ಯಾಚ್​ ಆಗಿ ವಿಂಗಡಿಸಲು ಕೇಂದ್ರ ಸೂಚಿಸಬಹುದು.

    ಈ ಅಂಶವೇ ಶಾಲೆಗಳಿಗೆ ಹೊರೆಯಾಗಿ ಪರಿಣಮಿಸಬಹುದು. ಏಕೆಂದರೆ, ನಗರ ಪ್ರದೇಶದ ಶಾಲೆಗಳಲ್ಲಿ ಸ್ಥಳಾವಕಾಶದ ಕೊರತೆ ಇರುತ್ತದೆ. ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಾದರೆ ಒಂದೊಂದು ತರಗತಿಗೆ ಒಂದೊಂದು ದಿನ ತರಗತಿ ನಡೆಸಬೇಕಾದ ಸಂದರ್ಭ ಬರಬಹುದು. ಇದಲ್ಲದೇ ಶಾಲಾ ಚಟುವಟಿಕೆಗಳ ಬಗ್ಗೆಯೂ ನಿರ್ದೇಶನ ಹೊರಬೀಳಲಿದೆ.

    ಭಾರತಕ್ಕೂ ಬಂದಿದೆ ‘ಬಾಳೆ ಕರೊನಾ’, ಫಾರಂ​ ಕ್ವಾರಂಟೈನ್​ವೊಂದೇ ಪರಿಹಾರ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts