More

    ಸಾಲ ಪಡೆಯಲು ನಿರ್ಬಂಧಗಳಿಲ್ಲ : ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಾರೆಡ್ಡಿ ಮಾಹಿತಿ

    ಬಾಗೇಪಲ್ಲಿ: ಸಹಕಾರ ಸಂಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಬ್ಯಾಂಕ್‌ನ ಪ್ರತಿ ನಿರ್ದೇಶಕರು ಪ್ರಾವಾಣಿಕ ಪ್ರಯತ್ನ ಮಾಡಬೇಕೆಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ನರಸಿಂಹಾರೆಡ್ಡಿ ಹೇಳಿದರು.

    ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ವಾತನಾಡಿ, ಬ್ಯಾಂಕ್‌ನ ಅಭಿವೃದ್ಧಿ ದೃಷ್ಟಿಯಿಂದ ಸಾಲಗಾರರು ಕಾನೂನು ಪಾಲಿಸಬೇಕಾಗುತ್ತದೆ. ಸಾಲ ಪಡೆದುಕೊಳ್ಳುವ ವೇಳೆ ತೋರುವ ಆಸಕ್ತಿಯನ್ನೆ ಮರುಪಾವತಿ ಸಮಯದಲ್ಲಿ ತೋರಿಸಿದರೆ ವಾತ್ರ ಬ್ಯಾಂಕ್ ಅಭಿವೃದ್ಧಿಪಥದತ್ತ ಸಾಗಲಿದೆ ಎಂದರು.

    ಸಾಲ ಪಡೆದುಕೊಳ್ಳಲು ಯಾವುದೇ ನಿರ್ಬಂಧಗಳಿಲ್ಲ. ಆದರೆ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ನಿರ್ದೇಶಕರಾಗಿ ಅಯ್ಕೆಗೊಂಡಿರುವ ಕಾರಣ ಅವರಿಗೆ ವಾಹಿತಿ ನೀಡಿ ಸಾಲ ಮಂಜೂರಾತಿ ವಾಡುವುದು ಸಾವಾನ್ಯ ವಿಷಯ. ಇಂತಹ ರೈತರಿಗೇ ಸಾಲ ನೀಡಬೇಕೆಂಬ ನಿರ್ಬಂಧ ಬ್ಯಾಂಕ್‌ನಲ್ಲಿ ಇಲ್ಲ ಎಂದು ನರಸಿಂಹಾರೆಡ್ಡಿ ಸ್ಪಷ್ಟನೆ ನೀಡಿದರು.

    ಬ್ಯಾಂಕ್‌ನ ನಿರ್ದೆಶಕರ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನದ ಹಕ್ಕು ಪಡೆದುಕೊಳ್ಳಲು 5 ವರ್ಷದ ಅವಧಿಯಲ್ಲಿ ಕನಿಷ್ಠ 3 ಸಾವಾನ್ಯ ಸಭೆಗಳಿಗೆ ಹಾಜರಾಗುವುದು, ಕನಿಷ್ಠ 2 ಸಾವಿರ ರೂ. ವ್ಯವಹಾರ ನಡೆಸುವುದು ಕಡ್ಡಾಯವಾಗಿದೆ ಎಂದು ನಿರ್ದೇಶಕ ಕೆ.ಆರ್.ಅಂಜಿನಪ್ಪ ಕೇಳಿದ ಪ್ರಶ್ನೆಗೆ ಅಧ್ಯಕ್ಷ ಎಸ್.ನರಸಿಂಹಾರೆಡ್ಡಿ ವಾಹಿತಿ ನೀಡಿದರು. ವ್ಯವಸ್ಥಾಪಕ ಕೆ.ಪಿ.ಶಶಿಧರ, ಸಿಬ್ಬಂದಿ ಕರಿಮುಲ್ಲಾಸಾಬ್, ಆರ್.ಧರ್ಮಿಣಿ, ಎನ್.ಗಂಗರಾಜು, ರತ್ನಮ್ಮ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts