More

    ಲಾಕ್​ಡೌನ್ ಅವಧಿಯಲ್ಲಿ ರಕ್ತದಾನ ಶಿಬಿರ ನಡೆಸುವುದಕ್ಕೆ ಇಲ್ಲ ಅಡ್ಡಿ: ನೀವೂ ರಕ್ತದಾನ ಮಾಡಿ

    ದ್ವಾರಕಾನಾಥ್ ಎಲ್.
    ಬೆಂಗಳೂರು: ನಿರಂತರವಾಗಿ ರಕ್ತಪೂರಣ ಮಾಡಿಸಿಕೊಳ್ಳಬೇಕಾದ ತಲಸ್ಸೇಮಿಯಾ ಪೀಡಿತರು, ಡಯಾಲಿಸಿಸ್​ಗೆ ಒಳಪಟ್ಟವರು, ಗರ್ಭಿಣಿಯರೂ ಸೇರಿ ರಾಜ್ಯದಲ್ಲಿ ಸಾವಿರಾರು ರೋಗಿಗಳಿಗೆ ರಕ್ತದ ಅಗತ್ಯವಿದೆ.

    ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹಾಗ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಪ್ರತಿ ತಿಂಗಳು ಶಿಬಿರಗಳನ್ನು ಏರ್ಪಡಿಸಿ ರಕ್ತ ಸಂಗ್ರಹಿಸುತ್ತಿದ್ದವು. ಆದರೆ, ಲಾಕ್​ಡೌನ್ ಪರಿಣಾಮ ರಕ್ತದಾನ ಶಿಬಿರಗಳಾಗುತ್ತಿಲ್ಲ. ಆದರೂ ಅವಶ್ಯಕತೆ ಇರುವವರಿಗಾಗಿ ರಕ್ತ ಪೂರೈಸಲು ರಕ್ತನಿಧಿ ಕೇಂದ್ರ ಡೋನರ್ ಪಾಸ್ ವ್ಯವಸ್ಥೆಯನ್ನು ಮಾಡಿವೆ. http://app.rashtrotthana.org/blood&donors&pass ವೆಬ್​ಸೈಟ್​ನಲ್ಲಿ ಪಡೆಯಬಹುದು. ವಿವರಕ್ಕೆ ದೂ. 080-29747870, 99452 99369 ಸಂರ್ಪಸಬಹುದು.

    100 ಯೂನಿಟ್ ಬೇಡಿಕೆ: ಕರೊನಾದಿಂದ ರಾಜ್ಯದಲ್ಲಿ ರಕ್ತದ ಕೊರತೆ ತೀವ್ರವಾಗಿದ್ದು, ರಕ್ತ ನೀಡುವುದಕ್ಕೆ ಆರೋಗ್ಯವಂತ ದಾನಿಗಳು ಮುಂದಾಗಬೇಕಿದೆ. ದಾನಿ ಗಳಿಗೆ ಈಗಾಗಲೇ ಪಾಸ್ ವ್ಯವಸ್ಥೆಯನ್ನು ರೆಡ್ ಕ್ರಾಸ್ ಮಾಡಿದೆ. ಬೆಂಗಳೂರು ಘಟಕದಲ್ಲಿಯೇ ನಿತ್ಯ 100 ಯೂನಿಟ್​ಗೆ ಬೇಡಿಕೆ ಇದೆ.

    ವಾಹನ ಸೌಲಭ್ಯ: 4ಕ್ಕಿಂತ ಹೆಚ್ಚು ಜನ ರಕ್ತದಾನಕ್ಕೆ ಸಿದ್ಧವಿದ್ದರೆ ಅವರನ್ನು ಕರೆತರಲು ವಾಹನ ಸೌಲಭ್ಯವನ್ನೂ ರೆಡ್​ಕ್ರಾಸ್ ಕಲ್ಪಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಶಿಬಿರದ ಮೂಲ ರಕ್ತ ಪಡೆಯಲಾಗುವುದು. ಆಸಕ್ತ ದಾನಿಗಳು ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ, ನಂ.26, ರೆಡ್​ಕ್ರಾಸ್ ಭವನ, ರೇಸ್​ಕೋರ್ಸ್ ರಸ್ತೆ, ಬೆಂಗಳೂರು. ದೂ: 080- 2226 8435, 90350 68435 ಇಲ್ಲಿ ಸಂರ್ಪಸಬಹುದು.

    ರಕ್ತದಾನದಿಂದ ಸಮಸ್ಯೆ ಇಲ್ಲ: ಲಾಕ್​ಡೌನ್ ನಡುವೆಯೂ ದಾನಿಗಳು ಮುಂದೆ ಬಂದು ರಕ್ತ ನೀಡುತ್ತಿರುವುದು ಶ್ಲಾಘನೀಯ. ರಕ್ತದಾನದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಬದಲಿಗೆ, ಮತ್ತಷ್ಟು ಆರೋಗ್ಯ ವೃದ್ಧಿಸುತ್ತದೆ. ಇದು ಮತ್ತೊಬ್ಬರಿಗೂ ಪ್ರೇರಣೆಯಾಗಬೇಕಿದೆ ಎನ್ನುತ್ತಾರೆ ಗವಿಪುರ ಗುಟ್ಟಹಳ್ಳಿಯಲ್ಲಿರುವ ರಾಷ್ಟ್ರೋತ್ಥಾನ ಕೇಂದ್ರದ ವ್ಯವಸ್ಥಾಪಕ ಕೆ.ಎಸ್. ನಾರಾಯಣ್. ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗುವವರು ಯಾವುದೇ ಅಳುಕಿಲ್ಲದೆ ಸೇವೆ ಮಾಡಬಹುದು ಎಂದು ತಿಳಿಸಿದ್ದಾರೆ.

    ಪ್ರತಿ ತಿಂಗಳು ಕಾಲೇಜ್ ಕ್ಯಾಂಪಸ್, ಕಾಪೋರೇಟ್ ಸಂಸ್ಥೆಗಳ ಮೂಲಕ ರಕ್ತ ಸಂಗ್ರಹಿಸಲಾಗುತ್ತಿತ್ತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಶಿಬಿರಗಳು ನಡೆಯುತ್ತಿಲ್ಲ. ಹೀಗಾಗಿ ನಿತ್ಯ 30ರಿಂದ 40 ಯೂನಿಟ್ ಸಂಗ್ರಹವಾಗುತ್ತಿದೆ. ಕರೊನಾ ಭೀತಿ ಬಿಟ್ಟು ಸ್ವಯಂಪೇರಿತರಾಗಿ ರಕ್ತದಾನಿಗಳು ಮುಂದಾಗಿ ಬಂದರೆ ಬೇಡಿಕೆ ಪೂರೈಸಬಹುದು.
    | ಪ್ರಶಾಂತಿ ಚಂದ್ರಶೇಖರ್ ಬೆಂಗಳೂರು ರೆಡ್​ಕ್ರಾಸ್ ಸಂಸ್ಥೆ ಸಹಾಯಕ ಕಾರ್ಯದರ್ಶಿ

    ನಾಳೆ ರಕ್ತದಾನ ಶಿಬಿರ: ಬೆಂಗಳೂರು: ಸುಂದರನಗರ ಲಯನ್ಸ್ ಕ್ಲಬ್ ಗುರುವಾರ (ಏ.30) ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆವರೆಗೆ ದೊಡ್ಡಬೊಮ್ಮಸಂದ್ರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ದಾನಿಗಳಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಹಿತಿಗೆ ಮೊ: 9341881052, 9535918539 ಸಂರ್ಪಸಬಹುದು.

    ಬೆಳ್ಳಂಬೆಳಗ್ಗೆಯೇ ಗುಡುಗು ಮಿಂಚಿನ ಸಹಿತ ಬೆಂಗಳೂರಿನಲ್ಲಿ ವರ್ಷಧಾರೆ: ರಾಜ್ಯದ ಹಲವೆಡೆ ಮಳೆಯಾದ ಬಗ್ಗೆ ವರದಿ

    VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts