More

    ದೆಹಲಿಯಲ್ಲಿ ವಿದ್ಯುತ್ ಕೊರತೆ ಇಲ್ಲ! ವಿದ್ಯುತ್ ಪೂರೈಕೆಯ ಫ್ಯಾಕ್ಟ್​ಶೀಟ್​ ಪ್ರಕಟಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಆಮ್​ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ದೂರು ಹೇಳುವ ಒಂದೂ ಅವಕಾಶವನ್ನು ಬಿಡುವುದಿಲ್ಲ. ಇದೀಗ ದೇಶದ ಕೆಲವು ರಾಜ್ಯಗಳಿಗೆ ಕಲ್ಲಿದ್ದಲಿನ ಪೂರೈಕೆ ಕಡಿಮೆಯಾಗಿ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಈ ಸಂದರ್ಭದಲ್ಲಿ ಕೇಜ್ರಿವಾಲ್​ ಕೂಡ ವಿದ್ಯುತ್​ ಉತ್ಪಾದಕ ಘಟಕಗಳಿಗೆ ಕೇಂದ್ರದಿಂದ ಕಲ್ಲಿದ್ದಲು ಪೂರೈಕೆ ಕಡಿಮೆ ಆಗಿ ದೆಹಲಿಗೆ ವಿದ್ಯುತ್​ ಅಭಾವ ಎದುರಾಗುವ ಚಿಂತಾಜನಕ ಸ್ಥಿತಿ ಇದೆ ಎಂದು ಹೇಳಿಕೆ ನೀಡಿದ್ದಾರೆ.

    ಕೇಜ್ರಿವಾಲ್​ರ ಈ ಮಾತಿಗೆ ಪ್ರತಿಕ್ರಿಯೆ ಎಂಬಂತೆ ಕೇಂದ್ರ ಸರ್ಕಾರ ದೆಹಲಿಯ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಗಳ ಬಗೆಗಿನ ಫ್ಯಾಕ್ಟ್​ಶೀಟ್​ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ವಿದ್ಯುತ್​ ಅಭಾವವಿಲ್ಲ, ವಿದ್ಯುತ್​ ಪೂರೈಕೆಯಲ್ಲಿ ಕಡಿತ ಉಂಟಾಗುತ್ತಿಲ್ಲ ಎಂದಿರುವ ಸರ್ಕಾರ, ದೆಹಲಿ ವಿದ್ಯುತ್​ ಸರಬರಾಜು ಕಂಪೆನಿಗಳು(ಡಿಸ್ಕಾಮ್ಸ್​) ನಗರದ ಪೀಕ್​ ಬೇಡಿಕೆಗೆ ತಕ್ಕಂತೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಾ ಬಂದಿವೆ ಎಂದಿದೆ.

    ಇದನ್ನೂ ಓದಿ: ಪಹಣಿ ಹೆಸರು ಬದಲಾಯಿಸಲು ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

    ಕೇಂದ್ರ ವಿದ್ಯುತ್​ ಸಚಿವಾಲಯ ಪ್ರಕಟಿಸಿರುವ ಫ್ಯಾಕ್ಟ್​ಶೀಟ್​ನಲ್ಲಿ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 10 ರವರೆಗಿನ ದೆಹಲಿಯ ವಿದ್ಯುತ್ ಪೂರೈಕೆ ಅಂಕಿಅಂಶಗಳನ್ನು ಒದಗಿಸಲಾಗಿದೆ. ಅ.10 ರಂದು ದೆಹಲಿಯ ವಿದ್ಯುತ್​ ಅಗತ್ಯ 96.2 ಎಂಯುಗಳಾಗಿದ್ದು, ಅಷ್ಟೂ ಪೂರೈಕೆಯಾಗಿದೆ. ಪೀಕ್​ ಬೇಡಿಕೆಯು 4536 ಮೆಗಾ ವಾಟ್​ಗಳಷ್ಟಿದ್ದರೆ, ಪೂರೈಕೆಯೂ 4536 ಮೆಗಾವಾಟ್​ನಷ್ಟೇ ಆಗಿದೆ ಎಂದು ಅಂಕಿಅಂಶಗಳು ತೋರಿಸಿವೆ. (ಏಜೆನ್ಸೀಸ್)

    ಸಿದ್ದರಾಮಯ್ಯಂಗೆ ಪಾಠ ಕಲಿಸೋದೇ ನನ್ನ ಉದ್ದೇಶ ಎಂದ ಎಚ್​ಡಿಕೆ

    ಸರ್ಕಾರಿ ಶಾಲಾ ಶಿಕ್ಷಕರಿಗೇಕೆ ಈ ಕಷ್ಟ? ಸಿಎಂ ಬೊಮ್ಮಾಯಿಗೆ ವಿದ್ಯಾರ್ಥಿನಿ ಪ್ರಶ್ನೆ

    ಸರಗಳ್ಳನನ್ನು ಬೆನ್ನಟ್ಟಿ ಹೋಗಿ ಹಿಡಿದ ಆಟೋ ಡ್ರೈವರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts