More

    ಗ್ಲಾಮರ್ ಪ್ರಿಯರಿಗೆ ಈ ಸಲವೂ ನಿರಾಸೆ ತರಲಿದೆ ಐಪಿಎಲ್!

    ಮುಂಬೈ: ಐಪಿಎಲ್ ಎಂದರೆ ಸಿಕ್ಸರ್-ಬೌಂಡರಿಗಳ ದರ್ಬಾರ್ ಹೇಗೆಯೋ ಅದೇ ರೀತಿ ಅದ್ದೂರಿ ಆರಂಭೋತ್ಸವವೂ ಸಾಕಷ್ಟು ಗಮನಸೆಳೆಯುತ್ತಿತ್ತು. ಆದರೆ ಇತ್ತೀಚೆಗೆ ಐಪಿಎಲ್‌ನಲ್ಲಿ ಉದ್ಘಾಟನಾ ಸಮಾರಂಭವೇ ಮರೆಯಾಗಿದೆ. ಈ ಸಲದ ಐಪಿಎಲ್ 15ನೇ ಆವೃತ್ತಿಯಲ್ಲೂ ಯಾವುದೇ ಆರಂಭೋತ್ಸವ ಇರದೆ, ಮಾರ್ಚ್ 26ರಂದು ನೇರವಾಗಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಕೋಲ್ಕತ ನೈಟ್‌ರೈಡರ್ಸ್‌ ನಡುವಿನ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ.

    ಐಪಿಎಲ್‌ನಲ್ಲಿ 2008ರಿಂದ 2018ರವರೆಗೂ ಬಾಲಿವುಡ್ ತಾರೆಯರು, ಪಾಪ್ ಸ್ಟಾರ್‌ಗಳಿಂದ ಕೂಡಿದ ಹಾಡು-ನರ್ತನಗಳ ಗ್ಲಾಮರಸ್-ವರ್ಣರಂಜಿತ ಆರಂಭೋತ್ಸವಗಳು ನಡೆಯುತ್ತಿದ್ದವು. 2019ರಲ್ಲಿ ಬಿಸಿಸಿಐನಲ್ಲಿ ಸಿಒಎ (ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತಾಧಿಕಾರಿಗಳ ಸಮಿತಿ) ಅಧಿಕಾರದಲ್ಲಿ ಇದ್ದಾಗ ಮೊದಲ ಬಾರಿ ಆರಂಭೋತ್ಸವಕ್ಕೆ ಬ್ರೇಕ್ ಬಿದ್ದಿತ್ತು ಮತ್ತು ಅದಕ್ಕೆ ವ್ಯಯಿಸಬೇಕಾಗಿದ್ದ 20 ಕೋಟಿ ರೂ. ಮೊತ್ತವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬ ಮತ್ತು ಸೇನಾ ಕ್ಷೇಮಾಭಿವೃದ್ಧಿ ನಿಧಿಗೆ ಹಂಚಲಾಗಿತ್ತು.

    ನಂತರ 2020-21ರಲ್ಲಿ ಕರೊನಾ ಹಾವಳಿಯ ನಡುವೆ ಟೂರ್ನಿ ನಡೆಸುವುದೇ ದುಸ್ತರವಾಗಿತ್ತು. ಹೀಗಾಗಿ ಆರಂಭೋತ್ಸವ ಸಂಘಟಿಸಿದರೆ ಬಯೋಬಬಲ್ ಬ್ರೇಕ್ ಆಗುವ ಅಪಾಯವಿತ್ತು. ಈ ಬಾರಿ ಕರೊನಾ ಭೀತಿ ತಗ್ಗಿದ್ದರೂ, ಸೌರವ್ ಗಂಗೂಲಿ ಸಾರಥ್ಯದ ಬಿಸಿಸಿಐ ಯಾವುದೇ ಅಪಾಯ ಎದುರಾಗದಿರಲಿ ಎಂಬ ಕಾರಣಕ್ಕೆ ಉದ್ಘಾಟನಾ ಸಮಾರಂಭ ಆಯೋಜಿಸುತ್ತಿಲ್ಲ.

    ಹೊಸ ಪಾತ್ರದಲ್ಲಿ ಐಪಿಎಲ್‌ಗೆ ಮರಳುತ್ತಿದ್ದಾರೆ ಸುರೇಶ್ ರೈನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts