More

    ಕೇರಳ ಕರ್ನಾಟಕ ಗಡಿಯಲ್ಲಿ ಸಡಿಲವಾಯ್ತು ನಿಯಮ…ಏನು ಬೇಕು ಏನು ಬೇಡ?

    ಮಂಗಳೂರು: ಕೇರಳ-ಕರ್ನಾಟಕ ಗಡಿಯಲ್ಲಿ ಓಡಾಡುವ ಪ್ರಯಾಣಿಕರಿಗೊಂದು ಸಿಹಿಸುದ್ದಿ..
    ಇದುವರೆಗೆ ತಲಪಾಡಿ ಸಹಿತ ರಾಜ್ಯದ ಗಡಿಭಾಗಗಳಲ್ಲಿ ಹೊರರಾಜ್ಯಗಳಿಗೆ ಹೋಗಿ ಬರುವವರಿಗೆ ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ತೋರಿಸುವ ಅನಿವಾರ್ಯತೆ ಇತ್ತು. ಜಿಲ್ಲೆಯಲ್ಲೂ ತಲಪಾಡಿಯಲ್ಲಿ ಚೆಕ್‌ಪೋಸ್ಟ್‌ ಹಾಕಿ ತಪಾಸಣೆ ನಡೆಸಲಾಗುತ್ತಿತ್ತು.
    ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ಇಲ್ಲದಿದ್ದರೆ ಕೋವಿಡ್‌ ಪರೀಕ್ಷೆಗೆ ಗಡಿಯಲ್ಲಿ ಒಳಗಾಗಬೇಕಿತ್ತು.
    ಆದರೆ ಸರ್ಕಾರ ಈ ಕುರಿತು ಗುರುವಾರ ಸಭೆ ನಡೆಸಿದ್ದು ಈ ನೆಗೆಟಿವ್‌ ಸರ್ಟಿಫಿಕೇಟ್‌ ತೋರಿಸುವ ಪ್ರಕ್ರಿಯೆ ರದ್ದುಗೊಳಿಸಿ ಆದೇಶ ನೀಡಿದೆ. ಈ ಕುರಿತು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ನೀಡಿದ್ದು, ಗೋವಾ, ಕೇರಳ ರಾಜ್ಯದಿಂದ ವಾಯುಮಾರ್ಗ, ರೈಲ್ವೆ, ಭೂಸಾರಿಗೆ ಮತ್ತು ಸ್ವಂತ ವಾಹನಗಳಲ್ಲಿ ಸಂಚರಿಸುವವರು ನೆಗೆಟಿವ್‌ ಪ್ರಮಾಣಪತ್ರ ತೋರಿಸಬೇಕಾಗಿಲ್ಲ. ಆದರೆ ಅವರು ಕಡ್ಡಾಯವಾಗಿ ಎರಡು ಡೋಸ್‌ ಕೋವಿಡ್‌ ಲಸಿಕೆ ಹಾಕಿದ ಬಗ್ಗೆ ಪ್ರಮಾಣಪತ್ರ ಹೊಂದಿರತಕ್ಕದ್ದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
    ಳಿಗೆ ಸಂಚರಿಸುವವರು ರಾಜ್ಯದ ಗಡಿಭಾಗಗಳಲ್ಲಿ ಇನ್ನು ಮುಂದೆ ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ತೋರಿಸುವ ಅಗತ್ಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts