More

    ಸರ್ಬಿಯಾಕ್ಕೆ 90 ಟನ್​ ಮಾಸ್ಕ್​, ಶಸ್ತ್ರಚಿಕಿತ್ಸಾ ಕೈಗವಸು ರಫ್ತು ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ ನೆಟ್ಟಿಗರು; ಆದರೆ ವಾಸ್ತವ ಬೇರೇನೇ ಇದೆ…

    ನವದೆಹಲಿ: ಕರೋನಾ ವೈರಸ್​ ಚಿಕಿತ್ಸೆಗೆ ಸಂಬಂಧಪಟ್ಟ 90 ಟನ್​​ಗಳಷ್ಟು ವೈದ್ಯಕೀಯ ಮತ್ತು ರಕ್ಷಣಾ ಸಾಧನಗಳನ್ನು ಭಾರತ ಮಾ.29ರಂದು ಸರ್ಬಿಯಾಕ್ಕೆ ರಫ್ತು ಮಾಡಿದೆ ಎಂದು ಹೇಳಲಾಗಿತ್ತು.

    ವಿಶ್ವಸಂಸ್ಥೆ ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಾಲಯದ ಸರ್ಬಿಯಾದಲ್ಲಿರುವ ಕಚೇರಿ(ಯುಎನ್​ಡಿಪಿ)ಯೇ ಟ್ವೀಟ್​ ಮೂಲಕ ಇದನ್ನು ತಿಳಿಸಿತ್ತು. ಹಾಗೇ ಕೊಚ್ಚಿನ್​ ಬಂದರಿನ ಮೂಲಕವೂ 35 ಲಕ್ಷ ಜತೆ ಶಸ್ತ್ರಚಿಕಿತ್ಸಾ ಕೈಗವಸುಗಳನ್ನು ಕಳಿಸಿದ್ದಾಗಿ ಕೊಚ್ಚಿನ್​ ಕಸ್ಟಮ್ಸ್​ ಟ್ವೀಟ್​ ಮಾಡಿತ್ತು.

    ಈ ಸುದ್ದಿ ವೈರಲ್​ ಆಗುತ್ತಿದ್ದಂತೆ ಅನೇಕ ಭಾರತೀಯರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರತದಲ್ಲಿ ಕರೊನಾ ವೈರಸ್​ ಸೋಂಕು ದಿನೇದಿನೆ ಹೆಚ್ಚುತ್ತಿದೆ. ಇಲ್ಲಿನ ಅನೇಕ ವೈದ್ಯರಿಗೇ ರಕ್ಷಣಾ ಸಾಧನಗಳು ಸಿಗುತ್ತಿಲ್ಲ. ಹೆಚ್ಚುತ್ತಿರುವ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಉಪಕರಣ, ಸವಲತ್ತುಗಳು ನಮ್ಮ ದೇಶಕ್ಕೇ ಅತ್ಯಗತ್ಯವಾಗಿ ಬೇಕು. ಹೀಗಿರುವಾಗ ಸರ್ಬಿಯಾಕ್ಕೆ ರಫ್ತು ಮಾಡುವ ಅಗತ್ಯ ಏನಿತ್ತು? ಇದು ಭಾರತ ಸರ್ಕಾರದ ಬೇಜವಬ್ದಾರಿ ನಡೆ ಎಂದು ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದರು.

    ಆದರೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳನ್ನು ಮಾಧ್ಯಮವೊಂದು ಈ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಸ್ಪಷ್ಟನೆಯೂ ಸಿಕ್ಕಿದೆ.
    ಮಾನವೀಯತೆ ದೃಷ್ಟಿಯಿಂದ ಸರ್ಬಿಯಾಕ್ಕೆ ವೈದ್ಯಕೀಯ ಸಲಕರಣೆಗಳನ್ನು, ರಕ್ಷಣಾ ಸಾಧನಗಳನ್ನು ಕಳಿಸಲಾಗಿದೆ. ಇದರಿಂದ ಭಾರತಕ್ಕೆ ಏನೂ ತೊಂದರೆಯಾಗುವುದಿಲ್ಲ. ಕೊರತೆಯೂ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
    ಸದ್ಯ ಭಾರತದಲ್ಲಿ 33 ಶಸ್ತ್ರಚಿಕಿತ್ಸಾ ಕೈಗವಸು ತಯಾರಿಕಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ತಿಂಗಳಿಗೆ 10 ಕೋಟಿ ಜೊತೆ ಗ್ಲೌವ್ಸ್​ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿವೆ.

    ಮಾರುಕಟ್ಟೆ ಪರಿಸ್ಥಿತಿ ಪ್ರತಿಕೂಲವಾಗಿರುವುದರಿಂದ ಅವುಗಳ ಸಾಮರ್ಥ್ಯದ ಬಳಕೆ 20-30% ರಷ್ಟಿದೆ. ನಮ್ಮಲ್ಲಿ ಕೈಗವಸು ತಯಾರಿಕೆಗೆ ಬೇಕಾದಂತಹ ರಬ್ಬರ್​ ಲ್ಯಾಟೆಕ್ಸ್​ನ ಕೊರತೆಯೂ ಇಲ್ಲ. ರಫ್ತು ಮಾಡುವುದರಿಂದ ಬಡ ರಬ್ಬರ್​ ಬೆಳೆಗಾರರಿಗೆ ಸಹಾಯವಾಗುತ್ತದೆ. ಅವರ ಆದಾಯವೂ ಹೆಚ್ಚುತ್ತದೆ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.

    ಚೀನಾದಲ್ಲಿ ಕರೊನಾ ವೈರಸ್​ ಕಾಣಿಸಿಕೊಂಡು ಪರಿಸ್ಥಿತಿ ಕೈಮೀರುತ್ತಿದ್ದಾಗ ಭಾರತ ಆ ದೇಶಕ್ಕೆ 2.11 ಕೋಟಿ ರೂ.ಮೌಲ್ಯದ 15 ಟನ್​​ಗಳಷ್ಟು ವೈದ್ಯಕೀಯ ಉಪಕರಣಗಳನ್ನು ರಫ್ತು ಮಾಡಿದೆ. ಪ್ರತಿಯಾಗಿ ಚೀನಾ ಕೂಡ ಭಾರತಕ್ಕೆ ಏನೇ ಸಹಾಯ ಬೇಕಿದ್ದರೂ ಮಾಡುವುದಾಗಿ ಹೇಳಿದೆ. (ಏಜೆನ್ಸೀಸ್​)

    ಭಾರತದಿಂದ ಸರ್ಬಿಯಾಕ್ಕೆ 90 ಟನ್​ಗಳಷ್ಟು ವೈದ್ಯಕೀಯ ಉಪಕರಣಗಳು, ರಕ್ಷಣಾ ಸಾಧನಗಳು ರಫ್ತು; ನಮಗೇನೂ ಗೊತ್ತಿಲ್ಲ ಎಂದ ಆರೋಗ್ಯ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts