More

    ಸಂದೇಶವೇನು ಇಲ್ಲ, ನಾವು ಉತ್ತರ ಕೊಡೋಕೆ ಸಜ್ಜಾಗಿದ್ದೇವೆ; ಚೀನಾಗೆ ವಾಯುಸೇನೆ ಎಚ್ಚರಿಕೆ

    ನವದೆಹಲಿ: ಲಡಾಖ್​ ಗಡಿಯಲ್ಲಿ ಭಾರತ- ಚೀನಾ ಸಂಘರ್ಷದ ಹಿನ್ನೆಲೆಯಲ್ಲಿ ವಾಯುಸೇನಾ ಮುಖ್ಯಸ್ಥ ಆರ್​ಕೆಎಸ್​ ಭದೂರಿಯಾ ಲೇಹ್​ ಹಾಗೂ ಶ್ರೀನಗರದ ವಾಯುನೆಲೆಗಳಲ್ಲಿ ವೈಮಾನಿಕ ಸನ್ನದ್ಧತೆಯ ಅವಲೋಕನ ನಡೆಸಿದ್ದಾರೆ.

    ಚೀನಾದೊಂದಿಗೆ ಭಾರತ ಯುದ್ಧವನ್ನು ಬಯಸುವುದಿಲ್ಲ. ಆದರೆ, ಪ್ರಸ್ತುತ ಉಂಟಾಗಿರುವ ಬಿಕ್ಕಟ್ಟಿನಿಂದ ಎದುರಾಗಬಹುದಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.

    ಹೈದರಾಬಾದ್​ ಹೊರವಲಯದಲ್ಲಿರುವ ದಂಡಿಗಲ್​ನಲ್ಲಿ ವಾಯುಪಡೆ ಯೋಧರ ನಿರ್ಗಮನ ಪಥ ಸಂಚಲನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಸೇನೆಯ ಹಿಡಿತದಲ್ಲಿದೆ. ಇದಕ್ಕೆ ಪೂರಕವಾಗಿ ವಾಯುಸೇನೆಯು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲು ಮೂಲಕ ಸೇನೆಯ ಪ್ರಯತ್ನಗಳಿಗೆ ಬಲ ತುಂಬಲಿದೆ ಎಂದು ಹೇಳಿದರು.

    ಇದನ್ನೂ ಓದಿ; ಭಾರತದ ವಿರುದ್ಧ ಚೀನಾ ಸೈಬರ್​ ದಾಳಿ; ಬ್ಯಾಂಕಿಂಗ್​ ವ್ಯವಸ್ಥೆ, ಎಟಿಎಂಗಳೇ ಗುರಿ

    ಶ್ರೀನಗರ ಮತ್ತು ಲೇಹ್​ನಲ್ಲಿ ಹೆಚ್ಚಿನ ಯುದ್ಧ ವಿಮಾನಗಳನ್ನು ನಿಯೋಜಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವೆರಡು ಸ್ಥಳಗಳಲ್ಲಿ ಮಾತ್ರವಲ್ಲದೇ, ಇತರ ವ್ಯೂಹಾತ್ಮಕ ಸ್ಥಳಗಳಲ್ಲೂ ವಾಯು ನೆಲೆಗಳಿವೆ. ಎಲ್ಲೆಡೆಯೂ ಅಗತ್ಯಕ್ಕೆ ತಕ್ಕಂತೆ ನಿಯೋಜನೆ ಮಾಡಲಾಗಿದೆ ಎಂದು ಉತ್ತರಿಸಿದರು.

    ಗಡಿಯಲ್ಲಿ ತಂಟೆ ಮಾಡುತ್ತಿರುವವರಿಗೆ ನೀವೇನಾದರೂ ಸಂದೇಶ ನೀಡುತ್ತೀರಾ ಎಂಬುದಕ್ಕೆ ಉತ್ತರಿಸಿದ ಭದೂರಿಯಾ, ನಾವು ಯಾವುದೇ ಸಂದೇಶವನ್ನು ನೀಡಲು ಬಯಸುವುದಿಲ್ಲ. ಆದರೆ, ನಮ್ಮ ಭೂಪ್ರದೇಶವನ್ನು ರಕ್ಷಿಸಿಕೊಳ್ಳಲು ಎಲ್ಲ ರೀತಿಯಿಂದಲೂ ಸಜ್ಜಾಗಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು. ಜತೆಗೆ, ನಾವೇಕೆ ಅವರಿಗೆ ಸಂದೇಶ ನೀಡಬೇಕು ಎಂದೂ ಪ್ರಶ್ನಿಸಿದರು.

    ಇದನ್ನೂ ಓದಿ; ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ 

    ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪಥ ಸಂಚಲನ ವೀಕ್ಷಿಸಲು ಇದೇ ಮೊದಲ ಬಾರಿಗೆ ಕಡೆಟ್​ಗಳ ಪಾಲಕರಿಗೂ ಅವಕಾಶ ಕಲ್ಪಿಸಿರಲಿಲ್ಲ.

    ಅಂತಿಮ ವರ್ಷ, ಸೆಮಿಸ್ಟರ್​ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲವೆಂದ ವಿಶ್ವವಿದ್ಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts