More

    ಯಾರ ಮೇಲೂ ಯಾವುದೇ ಭಾಷೆಯನ್ನು ಹೇರುವುದಿಲ್ಲ ಎಂದ ರಮೇಶ್​ ಪೋಖ್ರಿಯಾಲ್​

    ನವದೆಹಲಿ: ಹೊಸದಾಗಿ ಜಾರಿಗೆ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್​ಇಪಿ) ಅನ್ವಯ ಯಾವುದೇ ರಾಜ್ಯದ ಮೇಲೆ, ಯಾರ ಮೇಲೂ ಯಾವುದೇ ಭಾಷೆಯನ್ನು ಹೇರುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್​ ಪೋಖ್ರಿಯಾಲ್​ ಸ್ಪಷ್ಟಪಡಿಸಿದ್ದಾರೆ.

    ಖಾಸಗಿ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ಸ್ಪಷ್ಟನೆ ನೀಡಿರುವ ಅವರು, ರಾಷ್ಟ್ರೀಯ ಏಕತೆ ದೃಷ್ಟಿಯಿಂದ ಬಹುಬಾಷೆ ಬಳಕೆಯನ್ನು ಉತ್ತೇಜಿಸಲಾಗುವುದು ಎಂದು ಹೇಳಿದರು.

    ದೇಶಾದ್ಯಂತ ತ್ರಿಭಾಷಾ ಸೂತ್ರ ಅನುಸರಿಸಲಾಗುತ್ತದೆ. ಈ ಸೂತ್ರ ಎಲ್ಲ ರಾಜ್ಯಗಳಿಗೂ ಒಗ್ಗಿಕೊಳ್ಳುವ ರೀತಿ ರೂಪುಗೊಂಡಿದೆ. ಯಾರ ಮೇಲೂ, ಯಾವುದೇ ಭಾಷೆಯನ್ನು ಹೇರುವುದಿಲ್ಲ. ತ್ರಿಭಾಷಾ ಸೂತ್ರದಲ್ಲಿ ಆಯಾ ರಾಜ್ಯಗಳು, ಪ್ರದೇಶಗಳು ಮತ್ತು ವಿಶೇಷವಾಗಿ ವಿದ್ಯಾರ್ಥಿಗಳು ಸ್ವತಃ ಭಾರತೀಯ ಮೂಲದ ಎರಡು ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮೂರನೇ ಭಾಷೆ ಭಾರತೀಯ ಮೂಲದ್ದಲ್ಲದೆ ಇರಬಹುದು. ಪ್ರಾದೇಶಿಕ ವೈವಿಧ್ಯತೆಯನ್ನು ಸಾರಲು ದ್ವಿಭಾಷಾ ನೀತಿ ಅನುಸರಿಸುವಂತೆ ಶಿಕ್ಷಕರನ್ನೂ ಉತ್ತೇಜಿಸಲಾಗುವುದು ಎಂದು ತಿಳಿಸಿದರು.

    ಇದನ್ನೂ ಓದಿ: ಉಕ್ಕಿ ಹರಿಯುತ್ತಿದ್ದ ತೊರೆಗೆ ಬಿದ್ದರೂ ಬದುಕುಳಿದ ಕಾಂಗ್ರೆಸ್​ ಶಾಸಕ

    ಆರಂಭದಲ್ಲಿ ಸಾಮಾನ್ಯವಾಗಿ ಮಕ್ಕಳು ಬಹುಭಾಷೆಯ ವಾತಾವರಣಕ್ಕೆ ತಮ್ಮನ್ನು ತಾವು ತೆರೆದುಕೊಂಡಿರುತ್ತವೆ. ಹಾಗಾಗಿ ಆರಂಭಿಕ ಶಿಕ್ಷಣದ ವಿಷಯದಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ. ಮಕ್ಕಳಿಗೆ ಎಲ್ಲಾ ಭಾಷೆಗಳನ್ನು ಅವರಿಗೆ ಇಷ್ಟವಾಗುವ ರೀತಿಯಲ್ಲಿ ಪರಸ್ಪರ ಸಂವಹನದ ರೂಪದಲ್ಲಿ ಕಲಿಸಲಾಗುತ್ತದೆ. ಆರಂಭಿಕ ಹಂತದಲ್ಲೇ ಮಾತೃಭಾಷೆಯಲ್ಲಿ ಓದುವಿಕೆ ಮತ್ತು ಬರವಣಿಗೆ ಪ್ರೋತ್ಸಾಹ ನೀಡಲಾಗುತ್ತದೆ. ತನ್ಮೂಲಕ ಮಾತೃಭಾಷೆ ಶಿಕ್ಷಣಕ್ಕೆ ಒತ್ತು ನೀಡಲಾಗುವುದು ಎಂದು ವಿವರಿಸಿದರು.

    3ನೇ ತರಗತಿ ಮತ್ತು ನಂತರದಲ್ಲಿ ಇತರೆ ಭಾಷೆಗಳ ಕಲಿಕೆ ಮತ್ತು ಬರವಣಿಗೆಗೆ ಒತ್ತು ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲ ಪ್ರಾದೇಶಿಕ ಭಾಷೆಯ ಬೋಧಕರ ನೇಮಕಾತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒತ್ತು ನೀಡಲಿವೆ. ಆಯಾ ರಾಜ್ಯಗಳು ಆಯ್ಕೆ ಮಾಡಿಕೊಳ್ಳುವ ತ್ರಿಭಾಷಾ ಸೂತ್ರದ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಶಿಕ್ಷಕರ ನೇಮಕಾತಿ ವಿಷಯದಲ್ಲಿ ರಾಜ್ಯಗಳು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.

    ಆಂಗ್ಲ ಮಾಧ್ಯಮ ಶಾಲೆಗಳ ಮೇಲಾಗುವ ಪರಿಣಾಮದ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ಸಚಿವರು, ತ್ರಿಭಾಷಾ ಸೂತ್ರದಡಿ ಇಂಗ್ಲಿಷ್​ನ ಜತೆಗೆ ಸ್ಥಳೀಯ ಎರಡು ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆದ್ದರಿಂದ, ವಿಜ್ಞಾನ ಮತ್ತು ಗಣಿತದ ಪಠ್ಯಪುಸ್ತಕವನ್ನು ದ್ವಿಭಾಷೆಯಲ್ಲಿ ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಂದರೆ ಮಾತೃಭಾಷೆ ಹಾಗೂ ಇಂಗ್ಲಿಷ್​ ಭಾಷೆಯಲ್ಲಿ ಪಠ್ಯಪುಸ್ತಕಗಳು ಮುದ್ರಣಗೊಳ್ಳಲಿವೆ ಎಂದು ಹೇಳಿದರು.

    ಸಿಎಂಗೆ ರಾಜ್ಯಪಾಲರ ಬುಲಾವ್, 10 ನಿಮಿಷ ಮಹತ್ವದ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts