More

    ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಯಾರಿಗೂ ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್

    ನವದೆಹಲಿ: ದೇಶದಲ್ಲಿ ಜಗತ್ತಿನ ಬೃಹತ್ ಲಸಿಕೆ ಅಭಿಯಾನ ಆರಂಭಗೊಂಡಾಗಿನಿಂದಲೂ ಇದೊಂದು ವಿಷಯ ಆಗಾಗ ಚರ್ಚೆಗೆ ಬರುತ್ತಲೇ ಇದ್ದು, ಈ ಸಂಬಂಧ ಸುಪ್ರೀಂಕೋರ್ಟ್​ ಮತ್ತೊಮ್ಮೆ ನಿರ್ದೇಶನ ನೀಡಿದೆ.

    ಲಸಿಕೆ ಕಡ್ಡಾಯ ವಿಚಾರವಾಗಿ ಸುಪ್ರೀಂಕೋರ್ಟ್ ಈ ಹಿಂದೆಯೂ ಸೂಚನೆಗಳನ್ನು ನೀಡಿದ್ದರೂ ಇಂದು ಮತ್ತೊಮ್ಮೆ ಆ ವಿಷಯವಾಗಿ ನಿರ್ದೇಶನ ನೀಡಿದೆ. ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲೇಬೇಕು ಎಂದು ಯಾರಿಗೂ ಒತ್ತಾಯಿಸುವಂತಿಲ್ಲ ಎಂದು ಅದು ತಿಳಿಸಿದೆ. ನ್ಯಾಯಮೂರ್ತಿಗಳಾದ ಎಲ್​. ನಾಗೇಶ್ವರ ರಾವ್ ಮತ್ತು ಬಿ.ಆರ್​.ಗವಾಯಿ ಅವರಿದ್ದ ಪೀಠ ಇಂದು ಈ ನಿರ್ದೇಶನವನ್ನು ನೀಡಿದೆ.

    ಸರ್ಕಾರದ ಕೆಲವು ಸಂಸ್ಥೆಗಳು ಲಸಿಕೆ ತೆಗೆದುಕೊಂಡಿರದ ಕೆಲವು ವ್ಯಕ್ತಿಗಳ ಮೇಲೆ ನಿಯಂತ್ರಣ ಹೇರುತ್ತಿರುವುದು ಕಂಡುಬಂದಿದೆ. ಸದ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದರಿಂದ ಸರ್ಕಾರ ಅಂಥ ನಿಯಂತ್ರಣಗಳನ್ನು ತೆಗೆದುಹಾಕಬೇಕು.

    ದೈಹಿಕ ಸಮಗ್ರತೆ ಮತ್ತು ಸ್ವಾಯತ್ತತೆ ಸಾಂವಿಧಾನಿಕ ಹಕ್ಕು. ಹೀಗಾಗಿ ಯಾವುದೇ ವ್ಯಕ್ತಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯ ಮಾಡುವ ಹಾಗಿಲ್ಲ. ಅದರಲ್ಲೂ ಸರ್ಕಾರದ ಸದ್ಯದ ಕೋವಿಡ್-19 ಪಾಲಿಸಿ ನಿರಂಕುಶವಾದುದಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

    ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ: ಎಲ್ಲೆಲ್ಲಿ ಹೇಗೆ? ಇಲ್ಲಿದೆ ಹವಾಮಾನ ಮುನ್ಸೂಚನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts