More

    ಬ್ಯಾನ್​ ಮಾಡಲು ಭಾರತದ ಉತ್ಪನ್ನಗಳೇ ಇಲ್ಲ, ಚೀನಾದ ಲೇವಡಿಗೆ ಆನಂದ್​ ಮಹೀಂದ್ರಾ ಕೊಟ್ಟ ಉತ್ತರವೇನು?

    ನವದೆಹಲಿ: ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆ ಎದುರಾಗಿದೆ. ಭಾರತದಲ್ಲಿ ಚೀನಾ ವಿರೋಧಿ ಮನೋಭಾವ ಹೆಚ್ಚಾಗುತ್ತಿದ್ದು, ಚೀನಾ ಮೂಲದ ಆ್ಯಪ್​ಗಳನ್ನು ಈಗಾಗಲೆ ನಿರ್ಬಂಧಿಸಲಾಗಿದೆ. ಇದೀಗ ಅಲ್ಲಿನ ಉತ್ಪನ್ನಗಳ ಬಳಕೆಯನ್ನು ನಿಲ್ಲಿಸಲು ಜನರು ನಿರ್ಧರಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ಕೂಡ ಭಾರತ ವಿರೋಧಿ ಮನೋಭಾವ ದಟ್ಟವಾಗುತ್ತಿದೆ. ಆದರೆ, ಬಳಕೆಯನ್ನು ನಿಷೇಧಿಸಲು ಚೀನಾದಲ್ಲಿ ಭಾರತದ ಯಾವುದೇ ಉತ್ಪನ್ನಗಳು ಇಲ್ಲ ಎಂದು ಸ್ಥಳೀಯ ವ್ಯಾಪಾರಸ್ಥರು ಲೇವಡಿ ಮಾಡಿದ್ದಾರೆ.

    ಚೀನಾ ಮೂಲದ 59 ಆ್ಯಪ್​ಗಳ ಬಳಕೆಯನ್ನು ನಿಷೇಧಿಸುವ ಭಾರತ ಸರ್ಕಾರದ ನಿರ್ಧಾರವನ್ನು ಉಲ್ಲೇಖಿಸಿ ಹ್ಯು ಕ್ಸಿಜಿನ್​ ಎಂಬುವರು, ಚೀನಾದ ಜನತೆ ಬ್ಯಾನ್​ ಮಾಡಲು ಬಯಸಿದರೂ ಚೀನಾ ಮಾರುಕಟ್ಟೆಯಲ್ಲಿ ಭಾರತದ ಯಾವುದೇ ವಸ್ತುಗಳು ಕಾಣುತ್ತಿಲ್ಲ. ಭಾರತೀಯ ಮಿತ್ರರೇ, ರಾಷ್ಟ್ರೀಯವಾದ, ರಾಷ್ಟ್ರಪ್ರೇಮಕ್ಕಿಂತಲೂ ಮಿಗಿಲಾದದ್ದನ್ನು ಹೊಂದುವುದು ಮುಖ್ಯ ಎಂದು ಟ್ವೀಟ್​ ಮಾಡಿ ಸ್ವಾಭಿಮಾನವನ್ನು ಕೆಣಕಿದ್ದಾರೆ.

    ಈ ಟ್ವೀಟ್​​ ಅನ್ನು ಉಲ್ಲೇಖಿಸಿರುವ ಭಾರತದ ಪ್ರತಿಷ್ಠಿತ ವಾಣಿಜ್ಯೋದ್ಯಮಿ ಆನಂದ್​ ಮಹೀಂದ್ರಾ, ಈ ರೀತಿ ಲೇವಡಿ ಮಾಡಿದ್ದಕ್ಕಾಗಿ ಧನ್ಯವಾದಗಳು. ನಾವು ಈ ಪರಿಸ್ಥಿತಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಪುಟಿದೇಳುತ್ತೇವೆ ಎಂದು ಪ್ರತಿಟ್ವೀಟ್​ ಮಾಡಿದ್ದಾರೆ.

    ನಿನ್ನ ಈ ವ್ಯಂಗ್ಯಭರಿತ ಟ್ವೀಟ್​ ನಮ್ಮ ನಾಡಿನವರ ಅದರಲ್ಲೂ ಭಾರತೀಯ ವಾಣಿಜ್ಯೋದ್ಯಮದ ಪ್ರತಿಯೊಬ್ಬರ ಮೇಲೂ ಭಾರಿ ಪರಿಣಾಮ ಉಂಟು ಮಾಡುವ ಜತೆಗೆ ಸ್ಫೂರ್ತಿ ಉಕ್ಕಿಸುತ್ತದೆ ಎಂಬ ನಂಬಿಕೆ ನನಗಿದೆ. ಇಂಥ ಟ್ವೀಟ್​ ಮೂಲಕ ನಮ್ಮಲ್ಲಿನ ಸ್ವಾಭಿಮಾನವನ್ನು ಕೆಣಕಿದ್ದಕ್ಕಾಗಿ ಧನ್ಯವಾದಗಳು. ನಾವೆಲ್ಲರೂ ಒಟ್ಟಾಗಿ ಪರಿಸ್ಥಿತಿ ಸೂಕ್ತವಾಗಿ ಸ್ಪಂದಿಸಿ ಪುಟಿದೇಳುತ್ತೇವೆ, ನಮ್ಮತನವನ್ನು ಕಾಯ್ದುಕೊಳ್ಳುತ್ತೇವೆ ಎಂದು ಆನಂದ್​ ಮಹೀಂದ್ರಾ ಹೇಳಿದ್ದಾರೆ.

    ಈ ಕುಗ್ರಾಮದ ಪ್ರತಿ ಮನೆಯ ಪ್ರತಿ ಮಹಿಳೆಯ ವಿರುದ್ಧ ಪೊಲೀಸ್​ ಕೇಸ್​, ಕಾರಣ ತೀರಾ ಕ್ಷುಲ್ಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts