More

    ಅಮರಗೋಳದಲ್ಲಿ ಓಕುಳಿಯಾಟ ನಿಷೇಧ, ಗ್ರಾಮದೇವಿ ಜಾತ್ರಾ ಮಹೋತ್ಸವ ಹಿನ್ನೆಲೆ

    ಹುಬ್ಬಳ್ಳಿ: ತಾಲೂಕಿನ ಅಮರಗೋಳ ಗ್ರಾಮದ ಗ್ರಾಮದೇವಿಯರ ಜಾತ್ರಾ ಮಹೋತ್ಸವ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಈ ವರ್ಷ ಹೋಳಿ ಹುಣ್ಣಿಮೆ ಅಂಗವಾಗಿ ಆಚರಿಸಲಾಗುವ ಓಕುಳಿಯಾಟವನ್ನು ನಿಷೇಧಿಸಲಾಗಿದೆ.

    ಮಾರ್ಚ್ 23 ಹುಣ್ಣಿಮೆ ಆಚರಣೆ, ಮಾ. 24ರಂದು ಹೋಳಿ ಹಬ್ಬ ಇತ್ತು.

    20 ವರ್ಷಗಳ ನಂತರ ಗ್ರಾಮದೇವಿ ಜಾತ್ರೆ ನಿಶ್ಚಯವಾಗಿದೆ. ಏಪ್ರಿಲ್ 19ರಿಂದ 23ರ ವರೆಗೆ ಐದು ದಿನಗಳವರೆಗೆ ಜಾತ್ರೆ ನಡೆಯಲಿದ್ದು, ವಿವಿಧ ಧಾಮಿರ್ಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

    ಈಗಾಗಲೇ ಗ್ರಾಮದೇವಿಯ ಮೂತಿರ್ಗಳನ್ನು ಬಣ್ಣದ ಕಾರ್ಯಕ್ಕೆ ಕಳುಹಿಸಲಾಗಿದೆ. ಈ ಮಧ್ಯೆ ಹೋಳಿ ಹುಣ್ಣಿಮೆ ಆಚರಣೆ ಬಂದಿದೆ. ಹಾಗಾಗಿ, ಓಕುಳಿ ಆಡದೇ ಇರಲು ಗ್ರಾಮದ ಗುರು ಹಿರಿಯರು ನಿರ್ಧರಿಸಿದ್ದಾರೆ.

    ಹಾಗಾಗಿ ಅಮರಗೋಳ ಹಾಗೂ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ಈ ಆಚರಣೆಯನ್ನು ಪಾಲಿಸುವಂತೆ ಕೋರಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts