More

    ಜು.6ರಿಂದ ಕೊಲ್ಕತ್ತಕ್ಕೆ ಪ್ರವೇಶ ಮಾಡುವಂತಿಲ್ಲ ಈ ಆರು ಮಹಾನಗರಗಳ ವಿಮಾನಗಳು…

    ದೇಶದಲ್ಲಿ ಕರೊನಾ ವೈರಸ್​ ಹರಡುತ್ತಿರುವ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ಕೊಲ್ಕತ್ತ ಏರ್​ಪೋರ್ಟ್​ ಒಂದು ಪ್ರಮುಖ ನಿರ್ಧಾರ ಕೈಗೊಂಡಿದೆ.

    ಒಟ್ಟು ಆರು ಮಹಾನಗರಗಳಿಂದ ಬರುವ ವಿಮಾನಗಳ ಪ್ರವೇಶಕ್ಕೆ ಜು.6ರಿಂದ 9ರವರೆಗೆ ನಿರ್ಬಂಧ ಹೇರಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೊಲ್ಕತ್ತ ಏರ್​ಪೋರ್ಟ್​ ಅಥಾರಿಟಿ, ದೆಹಲಿ, ಮುಂಬೈ, ಚೆನ್ನೈ, ಪುಣೆ, ನಾಗ್ಪುರ, ಅಹ್ಮದಾಬಾದ್ ವಿಮಾನಗಳಿಂಗೆ ಜು.6ರಿಂದ ಕೊಲ್ಕತ್ತ ಏರ್​​ಪೋರ್ಟ್​ಗೆ ಪ್ರವೇಶ ಇರುವುದಿಲ್ಲ. ಈ ನಿರ್ಬಂಧ ಜುಲೈ 19ರವರೆಗೂ ಮುಂದುವರಿಯಲಿದೆ ಎಂದು ತಿಳಿಸಿದೆ.

    ಕೊವಿಡ್​-19 ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಕರೊನಾ ಹಾಟ್​ಸ್ಫಾಟ್​ ನಗರಗಳಿಂದ ಹಾರಾಡುವ ವಿಮಾನಗಳನ್ನು ರದ್ದುಗೊಳಿಸಿ ಎಂದು ಎರಡು ದಿನಗಳ ಹಿಂದಷ್ಟೇ ಪಶ್ಚಿಮಬಂಗಾಳ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.
    ಇದೀಗ ಕೊಲ್ಕತ್ತಕ್ಕೆ ಆರು ನಗರಗಳಿಂದ ಆಗಮಿಸುವ ವಿಮಾನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದ್ದರೂ, ಕೊಲ್ಕತ್ತದಿಂದ ಹೊರಡುವ ಯಾವ ವಿಮಾನಗಳ ಹಾರಾಟವೂ ರದ್ದುಗೊಂಡಿಲ್ಲ. ದೆಹಲಿ, ಮುಂಬೈ, ಚೆನ್ನೈ, ಪುಣೆ, ನಾಗ್ಪುರ, ಅಹ್ಮದಾಬಾದ್​​ಗಳಿಗೂ ಕೊಲ್ಕತ್ತದಿಂದ ವಿಮಾನ ಹಾರಾಟ ಹಾಗೆಯೇ ಇರಲಿದೆ. ಇದನ್ನೂ ಓದಿ: 10 ಕರೊನಾ ರೋಗಿಗಳಲ್ಲಿ ಒಬ್ಬರಿಗೆ ಕಳೆದು ಹೋದದ್ದು ತಿಂಗಳಾದ್ರೂ ಮರಳಿ ಬಾರದು!

    ಆರೂ ನಗರಗಳಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಹಾಗೇ ಪಶ್ಚಿಮಬಂಗಾಳದಲ್ಲೂ ಸೋಂಕಿನ ಪ್ರಮಾಣ ಅಧಿಕವಾಗುತ್ತಿದೆ. ಹಾಗಾಗಿ ಕೊವಿಡ್​-19 ಹಾಟ್​ಸ್ಫಾಟ್​ ನಗರಗಳ ವಿಮಾನ ಪ್ರವೇಶ ನಿಷೇಧಿಸಿದ್ದಾಗಿ ಏರ್​ಪೋರ್ಟ್ ಮಾಹಿತಿ ನೀಡಿದೆ.
    ಜೂನ್​ 30ರಂದು ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದ ಕಾರ್ಯದರ್ಶಿ ರಾಜೀವ್​ ಸಿನ್ಹಾ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು ಜು.6ರಿಂದ 19ರವರೆಗೆ, ದೆಹಲಿ, ಮುಂಬೈ, ಪುಣೆ, ನಾಗಪುರ, ಚೆನ್ನೈ, ಇಂಧೋರ್​, ಅಹ್ಮದಾಬಾದ್, ಸೂರತ್​ನಿಂದ ಕೊಲ್ಕತ್ತಕ್ಕೆ ಯಾವುದೇ ವಿಮಾನಗಳನ್ನು ಶೆಡ್ಯೂಲ್​ ಮಾಡಬೇಡಿ ಎಂದು ಮನವಿ ಮಾಡಿದ್ದರು. (ಏಜೆನ್ಸೀಸ್​)

    ಕೊವಿಡ್​-19 ಸೋಂಕಿಗೆ ಒಳಗಾದ ತನ್ನ 80 ವರ್ಷದ ತಾಯಿಗೆ ಈ ಮಗ ಕೊಟ್ಟಿದ್ದು ಕ್ರೂರ ಶಿಕ್ಷೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts