More

    ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ಮನೆಗಳಲ್ಲೇ ವಿದ್ಯುತ್ ದೀಪ ಬೆಳಗಲ್ಲ!; ಕಚೇರಿಗಳಲ್ಲೂ ನಾಳೆ ರಾತ್ರಿ ಒಂದು ಗಂಟೆ ಎಲೆಕ್ಟ್ರಿಕ್​ ಲೈಟ್​ ಆಫ್!

    ಬೆಂಗಳೂರು: ನಾಳೆ ಎಂದರೆ ಶನಿವಾರ ರಾತ್ರಿ ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ವರ್ಗದವರ ಮನೆಗಳಲ್ಲೇ ವಿದ್ಯುತ್ ದೀಪ ಬೆಳಗುವುದಿಲ್ಲ. ರಾತ್ರಿ 9ರಿಂದ 10ರವರೆಗೆ ಬೆಸ್ಕಾಂ-ಅಧಿಕಾರಿ ಸಿಬ್ಬಂದಿ ಮಾತ್ರವಲ್ಲದೆ ಬೆಸ್ಕಾಂ ಕಚೇರಿಗಳಲ್ಲೂ ವಿದ್ಯುತ್ ದೀಪ ಆರಿರುತ್ತದೆ. ಇಂಥದ್ದೊಂದು ವಿದ್ಯಮಾನಕ್ಕೆ ಬೆಸ್ಕಾಂ ಅಧಿಕಾರಿ-ಸಿಬ್ಬಂದಿ ವರ್ಗ ಈಗಾಗಲೇ ಮಾನಸಿಕವಾಗಿ ಸಜ್ಜಾಗಿದ್ದಾರೆ.

    ಅಷ್ಟಕ್ಕೂ ಒಂದು ಅಭಿಯಾನದ ಸಲುವಾಗಿ ಇವೆಲ್ಲ ನಡೆಯಲಿವೆ. ಹವಾಮಾನ ಬದಲಾವಣೆ ವಿರುದ್ಧ ವಿಶ್ವದ ಅತಿದೊಡ್ಡ ಪರಿಸರ ಆಂದೋಲನ ‘ಅರ್ಥ್ ಅವರ್’ ಅಂಗವಾಗಿ ಶನಿವಾರ ರಾತ್ರಿ ಬೆಸ್ಕಾಂ ಕಚೇರಿಗಳಲ್ಲಿ 1 ಗಂಟೆ ವಿದ್ಯುತ್ ಬಳಕೆ ಸ್ಥಗಿತಗೊಳ್ಳಲಿದೆ.
    ಜಾಗತಿಕ ತಾಪಮಾನ ಏರಿಕೆ ಸೇರಿ ಇನ್ನಿತರ ವಿಷಯಗಳ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಲವು ಅಭಿಯಾನ ಕೈಗೊಳ್ಳಲಾಗುತ್ತಿದೆ. ಅದರಂತೆ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ವಾತಾವರಣ ಬದಲಾವಣೆ ವಿರುದ್ಧದ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ. ಈ ವರ್ಷ ಮಾ. 27ರಂದು ವರ್ಲ್ಡ್ ವೈಲ್ಡ್ ಫಂಡ್ ಸಂಸ್ಥೆ ‘ಅರ್ಥ್ ಅವರ್’ ಆಂದೋಲನ ಆಯೋಜಿಸಿದೆ.

    ಅದರ ಪ್ರಕಾರ ರಾತ್ರಿ 8.30ರಿಂದ 9.30ರವರೆಗೆ ವಿದ್ಯುತ್ ದೀಪ ಬಳಕೆ ಸ್ಥಗಿತಗೊಳಿಸುವ ಮೂಲಕ ಅಭಿಯಾನ ಆಚರಿಸಲಾಗುತ್ತಿದೆ. ಈ ಕುರಿತಂತೆ ಬೆಸ್ಕಾಂನ ಎಲ್ಲ ಕಚೇರಿಗಳು ನಿಗದಿತ ಅವಧಿಯಲ್ಲಿ ವಿದ್ಯುತ್ ಬಳಕೆ ಮಾಡದಂತೆ ಸೂಚಿಸಲಾಗಿದೆ. ಅದರ ಜತೆಗೆ ಬೆಸ್ಕಾಂನ ಅಧಿಕಾರಿಗಳು, ಸಿಬ್ಬಂದಿ ಕೂಡ ತಮ್ಮ ಮನೆಗಳಲ್ಲೂ ವಿದ್ಯುತ್ ಬಳಕೆ ಮಾಡದಿರಲು ಮನವಿ ಮಾಡಿಕೊಳ್ಳಲಾಗಿದೆ.

    ವರ್ಷದ ಹಿಂದಷ್ಟೇ ಮದ್ವೆಯಾಗಿದ್ದ ಮಗಳ ಜತೆ ಮಗನನ್ನು ಕೊಂದು ನೇಣಿಗೆ ಶರಣಾದ ದಂಪತಿ..!

    ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts