More

    ಲಡಾಖ್​ ಉದ್ವಿಗ್ನತೆ ಕುರಿತು ಮೋದಿ-ಟ್ರಂಪ್​ ಮಾತುಕತೆ ನಡೆಸಿಲ್ಲ

    ನವದೆಹಲಿ: ಲಡಾಖ್​ನ ವಾಸ್ತವ ಗಡಿರೇಖೆಯಲ್ಲಿ ಚೀನಾದೊಂದಿಗೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸರ್ಕಾರದ ಉನ್ನತಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ವೈಟ್​ಹೌಸ್​ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಲಡಾಖ್​ ಉದ್ವಿಗ್ನ ಪರಿಸ್ಥಿತಿ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದೇನೆ. ಚೀನಾದ ಜಗಳಗಂಟ ಮನೋಭಾವದ ಬಗ್ಗೆ ಅವರು ತುಂಬಾ ಬೇಸರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ವಿಗ್ನತೆ ಶಮನ ಮಾಡಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಪುನರುಚ್ಚರಿಸಿದ್ದಾಗಿ ಹೇಳಿದ್ದರು.

    ಆದರೆ, ಈ ವಿಷಯವನ್ನು ಅಲ್ಲಗಳೆದಿರುವ ಸರ್ಕಾರದ ಉನ್ನತಾಧಿಕಾರಿಗಳು, ಉಭಯ ನಾಯಕರು ಏಪ್ರಿಲ್​ 4ರಂದು ಮಾತುಕತೆ ನಡೆಸಿದ್ದೇ ಕೊನೆ. ಆ ಸಂದರ್ಭದಲ್ಲಿ ಹೈಡ್ರೋಕ್ಲೋರೋಕ್ವೀನ್​ ಮಾತ್ರೆಗಳನ್ನು ಸರಬರಾಜು ಮಾಡುವ ವಿಷಯಕ್ಕೆ ಮಾತುಕತೆ ಸೀಮಿತವಾಗಿತ್ತು. ಆನಂತರದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕರ್ನಾಟಕಕ್ಕೂ ಮಿಡತೆಗಳು ದಾಂಗುಡಿ ಇಡುವುದು ಖಚಿತ: ಕೇಂದ್ರದ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts