More

    ನಾಯಕತ್ವ ವಿಚಾರದಲ್ಲಿ ಗೊಂದಲವಿಲ್ಲ… ಅಪಸ್ವರ ಎತ್ತಿದವರ ವಿರುದ್ಧ ಕ್ರಮ : ಸಿಎಂ ಯಡಿಯೂರಪ್ಪ

    ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಯಾರೋ ಒಬ್ಬಿಬ್ಬರು ಮೊದಲಿನಿಂದಲೂ ಮಾತನಾಡುತ್ತಿದ್ದಾರೆ. ಅವರಿಗೆ ಉಸ್ತುವಾರಿ ಭೇಟಿಗೆ ಅವಕಾಶ ನೀಡಲಾಗಿಲ್ಲ. ಅವರ ಮೇಲೆ ನಮ್ಮ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತೆ ಎಂದು ಸಿಎಂ.ಬಿ.ಎಸ್.ಯಡಿಯೂರಪ್ಪ ಹೇಳಿದರು.

    ಇಂದು ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪ್ರವಾಹ, ರಾಜಕೀಯ ಪರಿಸ್ಥಿತಿಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಮಳೆ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳ ಜೊತೆ ನಾಳೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತೇವೆ ಎಂದು ಹೇಳಿದರು.

    ಇದನ್ನೂ ಓದಿ: ಯೋಗೇಶ್ವರ್​ ಹೇಳಿದ್ದು ಸತ್ಯ, ವಿಜಯೇಂದ್ರ ಹಸ್ತಕ್ಷೇಪ ಇದೆ, ನಾಯಕತ್ವ ಬದಲಾವಣೆ ಆಗ್ಲೇಬೇಕು…

    ಮೇಕೆದಾಟು ವಿವಾದ : ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಮೇಕೆದಾಟು ವಿಚಾರವಾಗಿ ಒಂದು ಸುಯೋ ಮೋಟೋ ಕೇಸ್ ಆಗಿದೆ. ಚೆನ್ನೈ ಎನ್.ಜಿ.ಟಿ. ಕೋರ್ಟ್ ತೆಗೆದುಕೊಂಡಿತ್ತು. ಈಗ ನ್ಯಾಷನಲ್ ಎನ್.ಜಿ.ಟಿ. ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಮೂವರು ಸದಸ್ಯರ ಕಮಿಟಿ ತೀರ್ಮಾನ ಮಾಡಲಿದೆ. ನಿನ್ನೆ ವಾದ ಮಂಡನೆ ಆಗಿದೆ. ನಾವು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಸುಪ್ರೀಂ ಕೋರ್ಟಿನಲ್ಲಿ ಕೇಸ್ ನಡೆಯುತ್ತಿದೆ. ರಾಜ್ಯದ ಹಿತಾಸಕ್ತಿ ರಕ್ಷಣೆಯನ್ನು ನಾವು ಬದ್ಧತೆಯಿಂದ ಮಾಡುತ್ತೇವೆ ಎಂದರು.

    ರಾಜ್ಯದಲ್ಲಿನ ಕರೊನಾ ನಿರ್ಬಂಧಗಳ ಬದಲಾವಣೆ ಕುರಿತ ಪ್ರಶ್ನೆಗೆ, ಕರೊನಾ ಮೂರನೇ ಅಲೆ ಸಂಭವವಿದೆ. ಇದರ ನಡುವೆಯೂ ರಾಜ್ಯದಲ್ಲಿ ಕೆಲವೊಂದು ವಿನಾಯಿತಿ ನೀಡಬೇಕಾಗುತ್ತದೆ. ಶನಿವಾರ ಸಂಜೆ ಅನ್​​ಲಾಕ್ ವಿಚಾರವಾಗಿ ಸಭೆ ಇದೆ. ಅಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

    ‘ವಿಶ್ವನಾಥ್ ಬಗ್ಗೆ ಮಾತಾಡಿದರೆ ನನ್ನ ಬಾಯಿ ಹೊಲಸು’ – ಹಳ್ಳಿ ಹಕ್ಕಿಗೆ ಕುಟುಕಿದ ರೇಣುಕಾಚಾರ್ಯ

    ಮೂರನೇ ಅಲೆ ಬೇಗ ಅಪ್ಪಳಿಸುತ್ತೆ : ಸರ್ಕಾರಕ್ಕೆ ಹೈಕೋರ್ಟ್​ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts