More

    ಭಾರಿ ಅಸ್ಪ್ರಶ್ಯತೆ: ಪಂಚಾಯತ್ ಅಧ್ಯಕ್ಷ ದಲಿತ ಆಗಿದ್ರೆ ಧ್ವಜಾರೋಹಣ ಮಾಡುವಂತಿಲ್ಲ, ಕುರ್ಚಿಯಲ್ಲಿ ಕೂರುವಂತಿಲ್ಲ..

    ಚೆನ್ನೈ: ದೇಶ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವನ್ನು ಆಚರಿಸುತ್ತಿದ್ದರೆ, ಇಲ್ಲೊಂದು ಕಡೆ ಅಸ್ಪ್ರಶ್ಯತೆಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ. ಇಲ್ಲಿ ಅಸ್ಪ್ರಶ್ಯತೆ ಎಷ್ಟರಮಟ್ಟಿಗಿದೆ ಎಂದರೆ, ಪಂಚಾಯತ್ ಅಧ್ಯಕ್ಷ ದಲಿತನಾಗಿದ್ದರೆ ಧ್ವಜಾರೋಹಣ ಮಾಡುವಂತಿಲ್ಲ, ಕುರ್ಚಿಯಲ್ಲಿ ಕೂರುವಂತೆಯೂ ಇಲ್ಲ..!

    ತಮಿಳುನಾಡಿನಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ತಮಿಳುನಾಡು ಅನ್​ಟಚೇಬಿಲಿಟಿ ಎರಾಡಿಕೇಷನ್​ ಫ್ರಂಟ್ (ಟಿಎನ್​ಯುಇಎಫ್​) ಈ ಸಮೀಕ್ಷೆಯನ್ನು ನಡೆಸಿದೆ. ಇದು ಇಲ್ಲಿನ 24 ಜಿಲ್ಲೆಗಳ 386 ಪಂಚಾಯತ್​ಗಳಲ್ಲಿ ಸಮೀಕ್ಷೆ ನಡೆಸಿದ್ದು, ಆ ಪೈಕಿ 22 ಪಂಚಾಯತ್​ಗಳಲ್ಲಿ ಅಸ್ಪ್ರಶ್ಯತೆ ಇರುವುದು ಕಂಡುಬಂದಿದೆ.

    ದಲಿತರು ಪಂಚಾಯತ್ ಅಧ್ಯಕ್ಷ ಆಗಿರುವ ಕೆಲವೆಡೆ ಅವರು ರಾಷ್ಟ್ರಧ್ವಜ ಆರೋಹಣ ನಡೆಸುವಂತಿಲ್ಲ. ಇನ್ನು ಕೆಲವಡೆ ಅವರು ಕಚೇರಿಯ ಕುರ್ಚಿಯಲ್ಲಿ ಕುಳಿತುಕೊಳ್ಳುವಂತಿಲ್ಲ. ಮತ್ತೆ ಕೆಲವು ಕಡೆ ಅವರು ಕಚೇರಿ ದಾಖಲೆಗಳನ್ನು ಮುಟ್ಟುವಂತಿಲ್ಲ, ಇನ್ನು ಕೆಲವು ಕಡೆಯಂತೂ ಅವರು ಕಚೇರಿಗೇ ಪ್ರವೇಶ ಮಾಡುವಂತಿಲ್ಲ ಎಂಬುದನ್ನು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸಮೀಕ್ಷೆಯ ನೇತೃತ್ವ ವಹಿಸಿದ್ದ, ಟಿಎನ್​ಯುಇಎಫ್ ಅಧ್ಯಕ್ಷ ಕೆ. ಸ್ಯಾಮ್ಯುವಲ್ ರಾಜ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ಆ. 15ರಂದು ಪಂಚಾಯತ್​ಗಳಲ್ಲಿನ ದಲಿತ ಅಧ್ಯಕ್ಷರಿಗೂ ರಾಷ್ಟ್ರಧ್ವಜ ಆರೋಹಣ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಳ್ಳಲಿದ್ದಾರೆ.

    ಊರಲ್ಲಿ ಸ್ಮಶಾನ ಇಲ್ಲದ್ದರಿಂದ ಗ್ರಾಮ ಪಂಚಾಯತ್ ಆವರಣದಲ್ಲೇ ಶವಸಂಸ್ಕಾರಕ್ಕೆ ಸಜ್ಜಾದ ಗ್ರಾಮಸ್ಥರು!

    ಭ್ರಷ್ಟ ರಾಜಕಾರಣಿಯತ್ತ ಶೂ ತೋರಿ ‘ಕಳ್ಳ ಕಳ್ಳ’ ಎಂದು ಕೂಗಿದ ಜನರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts