More

    ಜಾತಿ -ಮತ ಬೇಡ, ಹಾಕಿ ಒಂದೇ ಮತ..

    ದಾವಣಗೆರೆ: ಬೇಡ ಜಾತಿ-ಮತ, ಹಾಕಿ ಒಂದೇ ಮತ, ಎಲ್ಲರೂ ಒಂದೇ ಮತ, ಭಾರತದ ಭವಿಷ್ಯ ನಿಮ್ಮ ಬೆರಳ ತುದಿಯಲ್ಲಿದೆ, ಪವಿತ್ರ ಮತದಾನ ಮಾಡಿ.. ಯುವ ಮತದಾರರೇ ನಿಮ್ಮ ಮೊದಲ ಮತವನ್ನು ಚಲಾಯಿಸಿ..

    ನಗರಪಾಲಿಕೆ ಕಾಂಪೌಂಡ್ ಮೇಲೆ ಸುಮಾರು 100 ಮೀ ಉದ್ದದ ಬಟ್ಟೆ ಮೇಲೆ ಬರೆದ ಮತದಾನ ಜಾಗೃತಿಯ ಚಿತ್ರಗಳ ಜತೆಗೆ ಕಂಡುಬಂದ ಗಮನ ಸೆಳೆದ ಘೋಷಣೆಗಳಿವು.

    ಸ್ವೀಪ್ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಕುಂಚದಲ್ಲಿ ಅರಳಿಸಿದ 50ಕ್ಕೂ ಹೆಚ್ಚು ಜಾಗೃತಿ ಚಿತ್ರಗಳು ನೋಡುಗರ ಗಮನ ಸೆಳೆದವು. ಪಾಲಿಕೆ ಆವರಣದಲ್ಲಿ ‘ಚುನಾವಣೆ ಸಂತೆಯಲ್ಲ, ಮತ ಮಾರಾಟಕ್ಕಿಲ್ಲ’ ಎಂಬ ಬೀದಿನಾಟಕವನ್ನು ಅಂಗನವಾಡಿ ಕಾರ್ಯಕರ್ತೆಯರು ಪ್ರದರ್ಶಿಸಿದರು.

    ಜಿಪ್‌ಲೈನ್ ರೋಮಾಂಚನ

    ಹಿಮಾಲಯ ಅಡ್ವೆಂಚರ್ ಗ್ರೂಪ್‌ನ 100ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲಿಕೆ ಆವರಣದಲ್ಲಿ ಜಿಪ್‌ಲೈನ್ ಸಾಹಸ ಕ್ರೀಡೆ ಪ್ರದರ್ಶಿಸಿ ರೋಮಾಂಚನಗೊಳಿಸಿದರು. ಹುಕ್ ಸಾಧನದಿಂದ 50 ಮೀ ಉದ್ದದ ಹಗ್ಗವನ್ನು ಹಿಡಿದು ಭೂಮಿಯಿಂದ 35 ಅಡಿ ಎತ್ತರದಲ್ಲಿ ಮುಂದೆ ಸಾಗಿ ಜಾಗೃತಿ ಮೂಡಿಸಿದರು.

    ಗಾಳಿಪಟಗಳ ಚಿತ್ತಾರ

    ಜಿಲ್ಲಾ ಕ್ರೀಡಾಂಗಣದಲ್ಲಿ ಮತದಾನ ಜಾಗೃತಿ ಸಂಬಂಧ ಆಯೋಜಿಸಿದ್ದ ಗಾಳಿಪಟಗಳ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ಬಣ್ಣಬಣ್ಣದ ಗಾಳಿಪಟಗಳನ್ನು ಆಕಾಶದೆತ್ತರಕ್ಕೆ ಹಾರಿಸಲು ಯತ್ನಿಸಿದರು.
    ಜಿಪಂ ಸಿಇಒ ಸುರೇಶ್ ಇಟ್ನಾಳ್, ಜಿಪಂ ಉಪಕಾರ್ಯದರ್ಶಿ ಮಲ್ಲಾನಾಯ್ಕ, ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ, ಡಯಟ್ ಪ್ರಾಚಾರ್ಯೆ ಗೀತಾ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ಎಂ. ನೆಲವಿಗಿ, ಹಿಮಾಲಯ ಅಡ್ವೆಂಚರ್ ಅಕಾಡೆಮಿಯ ಎನ್.ಕೆ. ಕೊಟ್ರೇಶ್, ಕ್ರೀಡಾರೋಹಣ ತರಬೇತುದಾರ ಅಶ್ಫತ್ ಉಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts