More

    ಮುಂದೆ ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ಮಾಜಿ ಪ್ರಧಾನಿ ದೇವೇಗೌಡ 

    ಬೆಂಗಳೂರು: ಜೆಡಿಎಸ್ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮದು ಪ್ರಾದೇಶಿಕ ಪಕ್ಷ. ಈ ಪಕ್ಷ ಉಳಿಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

    ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರು, ಶಾಸಕರು ಎಲ್ಲ ಸೇರಿ ಕೆಲಸ ಮಾಡಬೇಕು. ಅದಕ್ಕಾಗಿಯೇ ಮಾ.20ರಂದು ಎಲ್ಲರನ್ನು ಕರೆದು ಸಭೆ ನಡೆಸಲು ನಿರ್ಧರಿಸಲಾಗಿದೆ. ಈ ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಹೋರಾಟದ ಕುರಿತು ರ್ಚಚಿಸಿ, ಕಾರ್ಯಕ್ರಮ ರೂಪಿಸುತ್ತೇವೆ. ಈ ವೇಳೆ ಎಲ್ಲರಿಗೂ ಒಂದಿಷ್ಟು ಜವಾಬ್ದಾರಿ ಕೊಡಲಾಗುತ್ತದೆ. ಆ ಮೂಲಕ ಮುಂಬರುವ ಚುನಾವಣೆಗಳು ಹಾಗೂ ಪಕ್ಷ ಬಲವರ್ಧನೆಗೆ ಒತ್ತು ನೀಡಲಾಗುತ್ತದೆ. ಎರಡು ಜಿಲ್ಲೆಗಳಿಗೆ ಒಂದರಂತೆ ಸಮಾವೇಶ ಮಾಡಲು ತೀರ್ವನಿಸುತ್ತೇವೆ ಎಂದರು.

    ಯಾವುದೇ ಮೈತ್ರಿ ಇಲ್ಲ: ಮುಂಬರುವ ಚುನಾವಣೆಯಲ್ಲಿ ಎರಡು ಪಕ್ಷಗಳ ವಿರುದ್ಧ ನಾವು ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಯಾವುದೇ ಮೈತ್ರಿ ಇಲ್ಲ. ಏಕಾಂಗಿಯಾಗಿ ಹೋರಾಡುತ್ತೇವೆ. ಬಿಜೆಪಿ ಜತೆ ಹೋದರೆ ನಗೆಪಾಟಲು. ಅವರು ನಮ್ಮ ಹಲವಾರು ಸೀಟು ಗೆದ್ದಿದ್ದಾರೆ. ಬಿಜೆಪಿಯಿಂದ ನಮ್ಮ ಸೀಟುಗಳು ಕೈ ಬಿಟ್ಟು ಹೋಗಿವೆ. ಅದಕ್ಕಾಗಿ ಹೋರಾಟ ಮಾಡುತ್ತೇವೆ. ಜನರ ಮುಂದೆ ಹೋಗಿ ಮಾಡಿದ ಕೆಲಸ ಹೇಳುತ್ತೇನೆ ಎಂದ ಎಚ್​ಡಿಡಿ, ನಮ್ಮ ಪಕ್ಷದಿಂದ ಯಾರೋ ಒಬ್ಬಿಬ್ಬರು ಬೇರೆ ಪಕ್ಷಕ್ಕೆ ಹೋಗಬಹುದು. ಅವರನ್ನು ಕಟ್ಟಿ ಹಿಡಿದುಕೊಳ್ಳಲು ಆಗುವುದಿಲ್ಲ. ಹೋಗುವವರು ಹೋಗಲಿ. ನಾವು ಹೆದರುವುದಿಲ್ಲ ಎಂದು ಹೇಳಿದರು.

    ಮೋದಿ ಗುಣಗಾನ ಮಾಡಿದ ಗೌಡ: ಪಂಜಾಬ್ ಹೊರತುಪಡಿಸಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಬಂದಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವರ ಗೆಲುವನ್ನು ನಿಲ್ಲಿಸಲು ಆಗಲಿಲ್ಲ. ಮೋದಿ ನಿಷ್ಠೆಯಿಂದ ಚುನಾವಣೆ ಮಾಡುತ್ತಾರೆ. ನಾಲ್ಕು ದಿಕ್ಕಿನಲ್ಲಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ಮಾಡಿದ್ದಾರೆ. ಇದು ವಾಸ್ತವಿಕ ವಿಚಾರ. ಈ ಭಾವನೆ ನಮ್ಮಲ್ಲೂ ಬರಬೇಕು ಎಂದು ಗುಣಗಾನ ಮಾಡಿದರು.

    ಕಾರ್ಮಿಕರಿಗೆ ಬೇಸರದ ಸಂಗತಿ: ಇಪಿಎಫ್​ಗೆ 40 ವರ್ಷಗಳಲ್ಲೇ ಅತಿ ಕಡಿಮೆ ಬಡ್ಡಿ!

    ಧಗಧಗನೆ ಹೊತ್ತಿ ಉರಿದ ಮನೆ, ಒಳಗೇ ಸುಟ್ಟು ಕರಕಲಾಗಿ ಹೋದ ದೇಹ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts