More

    ಭದ್ರತಾಸೇವಾ ಕ್ಷೇತ್ರದ ಸಾಧಕ ಎನ್.ಜೆ.ಸುನೀಲ್

    ಭದ್ರತಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಗಮ್ಯ ಹೊಂದಿದ್ದ ಎನ್.ಜೆ. ಸುನೀಲ್, ಆರಂಭದಲ್ಲಿ ಎದುರಾದ ಅಡೆತಡೆಗಳನ್ನು ದಾಟಿ ಉದ್ಯಮದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ‘ಡಿಫೆಸಾ ಸೆಕ್ಯೂರಿಟಿ ಸರ್ವೀಸಸ್’ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಸಂಸ್ಥೆಯಿಂದ ಭದ್ರತೆಗಾಗಿ ಅಪಾರ್ಟ್​ವೆುಂಟ್, ಶೋರೂಂ, ಐಟಿ-ಬಿಟಿ ಕಂಪನಿ, ಶಾಲಾ-ಕಾಲೇಜು, ಮಂಗಳೂರು ಕೋಸ್ಟಲ್​ಗಾರ್ಡ್, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಿಗೆ ಸಾವಿರಕ್ಕೂ ಅಧಿಕ ಸಿಬ್ಬಂದಿ ನೇಮಿಸಿದ್ದಾರೆ. ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ದೇಶದ ಆರ್ಥಿಕತೆಯ ಭಾಗವಾಗಿದ್ದಾರೆ. ಭದ್ರತಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಎನ್.ಜೆ.ಸುನೀಲ್, ‘ವಿಜಯವಾಣಿ ಪತ್ರಿಕೆ’ ಕೊಡಮಾಡುವ ‘ಬೆಂಗಳೂರು ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಗ್ರಾಹಕರೊಂದಿಗೆ ದೀರ್ಘಾವಧಿ ಸಂಬಂಧ ಉಳಿಸಿಕೊಳ್ಳಲು ಉತ್ತಮ ಸೇವೆ ಬಹುಮುಖ್ಯ. ಗ್ರಾಹಕರು ಉತ್ತಮ ಸೇವೆಗೆ ಮಾತ್ರ ದೀರ್ಘಕಾಲ ನಮ್ಮೊಂದಿಗೆ ಇರುತ್ತಾರೆ. ಇಲ್ಲವಾದಲ್ಲಿ ವ್ಯವಹಾರ ಕಡಿತಗೊಳಿಸುತ್ತಾರೆ ಎಂಬುದು ಎನ್.ಜೆ. ಸುನೀಲ್ ಧ್ಯೇಯವಾಕ್ಯ. ಕೋರಮಂಗಲದಲ್ಲಿ ಡಿಫೆಸಾ ಸೆಕ್ಯೂರಿಟಿ ಸರ್ವೀಸಸ್ ಸಂಸ್ಥೆ ತೆರೆದು ಭದ್ರತಾ ಸೇವಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದೇಗನಹಳ್ಳಿ ಗ್ರಾಮದ ಎನ್.ಜೆ. ಸುನೀಲ್, ಭದ್ರತಾ ಸೇವಾ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಮಧ್ಯಮ ವರ್ಗದ ಕುಟುಂಬದಿಂದ ಬಂದ ಇವರು, ಮೊದಲು ಪೆಟ್ರೋಲಿಂಗ್ ಆಫೀಸರ್ ಆಗಿ ಕೆಲಸ ಮಾಡಿದರು. ನಂತರ ಕ್ಷೇತ್ರ ಅಧಿಕಾರಿ, ಕ್ಷೇತ್ರ ವ್ಯವಸ್ಥಾಪಕ, ಕಾರ್ಯಾಚರಣೆ ಮುಖ್ಯಸ್ಥ ಸೇರಿ ಹಲವು ಹುದ್ದೆಗಳನ್ನು ನಿಭಾಯಿಸಿದರು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕನಸು ಕಂಡಿದ್ದ ಇವರು, ಬೆಂಗಳೂರಿನ ಕೋರಮಂಗಲದಲ್ಲಿ ‘ಡಿಫೆಸಾ ಸೆಕ್ಯೂರಿಟಿ ಸರ್ವೀಸಸ್’ ಸಂಸ್ಥೆ ಸ್ಥಾಪಿಸಿದರು. ದೃಢ ನಿಶ್ಚಯದೊಂದಿಗೆ ಇಟ್ಟ ಹೆಜ್ಜೆ ಇಂದು ಸಾಧನೆಯ ಶಿಖರವೇರಿಸಿದೆ.

    ಭದ್ರತಾಸೇವಾ ಕ್ಷೇತ್ರದ ಸಾಧಕ ಎನ್.ಜೆ.ಸುನೀಲ್

    ಶಾಸನಬದ್ಧ ನಿಯಮ ಪಾಲನೆ: ಕರ್ನಾಟಕ ಸೆಕ್ಯೂರಿಟಿ ಸರ್ವೀಸಸ್ಸ್ ಅಸೋಸಿಯೇಷನ್ (ಕೆಎಸ್​ಎಸ್​ಎ), ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​ಕೆಸಿಸಿಐ) ಸದಸ್ಯರಾಗಿರುವ ಎನ್.ಜೆ. ಸುನೀಲ್, ಭದ್ರತಾ ಕ್ಷೇತ್ರದಲ್ಲಿ ಶಾಸನಬದ್ಧ ನಿಯಮ ಪಾಲಿಸಿಕೊಂಡು ಬಂದಿದ್ದಾರೆ. 2016ರಲ್ಲಿ ವಾಣಿಜ್ಯೋದ್ಯಮಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ. ಸಂಸ್ಥೆಯಿಂದ ಭದ್ರತಾ ಕಾರ್ಯಕ್ಕಾಗಿ ಬೇರೆ ಕಂಪನಿಗಳಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಇಎಸ್​ಐ, ಪಿಎಫ್ ಸೇರಿ ಇತರೆ ಸೌಲಭ್ಯ ನೀಡಿದ್ದಾರೆ. ಉತ್ತಮ ಕೆಲಸ ಮಾಡಿದವರನ್ನು ಗುರುತಿಸಿ ಬಹುಮಾನದ ಜತೆಗೆ ಪ್ರಮಾಣಪತ್ರವನ್ನು ನೀಡುತ್ತಿದ್ದಾರೆ. ಸಿಬ್ಬಂದಿಗೆ ವೈದ್ಯಕೀಯ ತುರ್ತು ಸುಧಾರಿತ ಕಿಟ್ ಒದಗಿಸುತ್ತಿದ್ದಾರೆ. ಉತ್ತರ ಭಾರತ, ದಕ್ಷಿಣ ಭಾರತ ಎಂಬ ಭೇದ ತೋರದೆ ಉದ್ಯೋಗಿಗಳನ್ನು ಸಮಾನವಾಗಿ ನೋಡಿಕೊಳ್ಳುತ್ತಿರುವುದು ವಿಶೇಷ. ಕೆಲಸಕ್ಕೆ ಬರುವ ಸಿಬ್ಬಂದಿಗೆ ಊಟ, ವಸತಿ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.

    ಸಮಾನ ಅವಕಾಶ: ಸೆಕ್ಯೂರಿಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇರುವುದರಿಂದ ಸಂಸ್ಥೆಯನ್ನು ಬೆಳೆಸಲು ಕಷ್ಟವಾಗಲಿಲ್ಲ. ಕೆಲವೊಮ್ಮೆ ಸವಾಲುಗಳು ಎದುರಾದರೂ ಅವುಗಳನ್ನು ಸಮರ್ಥವಾಗಿ ನಿಭಾಯಿಸಿದ್ದೆ. ಎಷ್ಟೋ ಸಲ ಈ ಕ್ಷೇತ್ರ ಬೇಡ ಅನಿಸುತ್ತದೆ. ಆದರೆ, ಇದೇ ಇಂಡೆಸ್ಟ್ರಿಯಿಂದ ಎತ್ತರದ ಸ್ಥಾನಕ್ಕೆ ಬಂದಿದ್ದೇನೆ. ಹೀಗಾಗಿ, ಸಂಸ್ಥೆಯನ್ನು ಇನ್ನಷ್ಟು ಬೆಳೆಸುವ ಕಾರ್ಯ ಮಾಡುತ್ತಿದ್ದೇನೆ ಎನ್ನುತ್ತಾರೆ ಎನ್.ಜೆ. ಸುನೀಲ್. ಹಾಸನ, ಮೈಸೂರು ಸೇರಿ ರಾಜ್ಯದ ಇತರೆ ಕಡೆಗಳಲ್ಲಿ ಸಂಸ್ಥೆಯ ಶಾಖೆಗಳಿವೆ. ಸಂಸ್ಥೆಯ ಕ್ಷೇತ್ರ ಅಧಿಕಾರಿ, ಕ್ಷೇತ್ರ ವ್ಯವಸ್ಥಾಪಕ, ಉಪ ಪ್ರಧಾನ ವ್ಯವಸ್ಥಾಪಕ, ಯುನಿಟಿ ಗಾರ್ಡ್ ಹಾಗೂ ಕಾರ್ಯಾಚರಣೆ ನಿರ್ವಹಣೆ ತಂಡ ಮೇಲ್ವಿಚಾರಣೆ ನಡೆಸುತ್ತಿದೆ. ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ಹಂಚಲಾಗಿದೆ. ಕೊಟ್ಟಿರುವ ಜವಾಬ್ದಾರಿಯನ್ನು

    ಸಿಬ್ಬಂದಿ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಇದರಿಂದಾಗಿ ನಮಗೆ ಯಾವುದೇ ಸಮಸ್ಯೆ ಉದ್ಬವಿಸಿಲ್ಲ. ಭದ್ರತಾ ಹುದ್ದೆಗೆ ಮೊದಲು ಕನ್ನಡಿಗರಿಗೆ ಆದ್ಯತೆ ನೀಡುತ್ತೇವೆ. ನಂತರ, ಅನ್ಯ ಭಾಷಿಕರಿಗೆ ಅವಕಾಶ ಕೊಡುತ್ತೇವೆ. ಒಟ್ಟಿನಲ್ಲಿ ನಾವು ಯಾವುದೇ ಭೇದ ಮಾಡದೆ ಸಮಾನವಾಗಿ ಕಾಣುತ್ತೇವೆ ಎನ್ನುತ್ತಾರೆ ಸುನೀಲ್.

    ea

    ಸರ್ಕಾರದ ನೀತಿ ಅನುಷ್ಠಾನ: ಖಾಸಗಿ ಭದ್ರತಾ ಏಜೆನ್ಸಿಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಕಾಲಕ್ಕೆ ತಕ್ಕಂತೆ ನೀತಿಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ದೇಶಾದ್ಯಂತ ಏಕೀಕೃತ ಡೇಟಾಬೇಸ್, ನಾಗರಿಕ ಮತ್ತು ವ್ಯಾಪಾರ ಕೇಂದ್ರಿತ ವೆಬ್​ಸೈಟ್ ಒದಗಿಸುವ ಮೂಲಕ ಹೆಚ್ಚಿನ ಪಾರದರ್ಶಕತೆ, ಭದ್ರತೆ, ಕಾರ್ಯಾಚರಣೆಗಳ ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಲು ಖಾಸಗಿ ಭದ್ರತಾ ಏಜೆನ್ಸಿಗಳ ಎಲೆಕ್ಟ್ರಾನಿಕ್ ನೋಂದಣಿಗೆ ಕೇಂದ್ರ ಉಪಕ್ರಮ ತೆಗೆದುಕೊಂಡಿದೆ. ನಿಯಂತ್ರಣ ಪ್ರಾಧಿಕಾರಗಳ ವಿವರಗಳು, ಪರವಾನಗಿ ಪಡೆದ ಖಾಸಗಿ ಭದ್ರತಾ ಏಜೆನ್ಸಿಗಳು, ಖಾಸಗಿ ಭದ್ರತಾ ತರಬೇತಿ ಸಂಸ್ಥೆಗಳು, ಖಾಸಗಿ ಭದ್ರತಾ ಏಜೆನ್ಸಿ ನೌಕರರ ಕುಂದು-ಕೊರತೆ ಪರಿಹಾರ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ಕೇಂದ್ರ ಒದಗಿಸುತ್ತದೆ. ಖಾಸಗಿ ಭದ್ರತಾ ಏಜೆನ್ಸಿಗಳೊಂದಿಗೆ ಸಂರ್ಪಸುವ ಮೂಲಕ ಮರು ಉದ್ಯೋಗದ ಅವಕಾಶ ನೀಡುತ್ತದೆ.

    ಕಂಪನಿ ಆರಂಭಿಸಲು ಮಾಹಿತಿ: ಏಜೆನ್ಸಿ ತೆರೆಯುವ ಬಗ್ಗೆ ಯಾರಾದರೂ ಕರೆ ಮಾಡಿದರೆ ತಕ್ಷಣ ಮಾಹಿತಿ ಕೊಡುತ್ತಾರೆ. ಕೆಲಸ ಮಾಡುವ ಬದಲು ಕಂಪನಿ ತೆರೆದು ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕೆಂದು ಯುವಕರನ್ನು ಹುರಿದುಂಬಿಸುತ್ತಾರೆ. ಅಲ್ಲದೆ, ದೇಶದಲ್ಲಿ ಅನೇಕ ಯುವಕರು ಉದ್ಯೋಗದ ಬದಲು ಹೊಸದಾಗಿ ಕಂಪನಿ ಆರಂಭಿಸುವ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ವಿಶೇಷವಾಗಿ ನಗರಗಳಲ್ಲಿ ಉದ್ಯಮಶೀಲತೆಯನ್ನು ವೃತ್ತಿಜೀವನದ ಆಯ್ಕೆ ಎಂದು ಪರಿಗಣಿಸಲಾಗಿದೆ. ಹಲವು ಭಾರತೀಯ ಉದ್ಯಮಿಗಳು ಕೋಟ್ಯಂತರ ರೂ. ಬಂಡವಾಳ ಹಾಕಿ ಕಂಪನಿ ಆರಂಭಿಸಿ ಯಶಸ್ವಿಯಾಗಿದ್ದಾರೆ. ಚಿಕ್ಕದಾಗಿ ಕಂಪನಿ ಆರಂಭಿಸಿ ಅವರಂತೆ ನೀವು ಯಶಸ್ವಿಯಾಗಬೇಕೆಂದು ಯುವಕರಿಗೆ ಕಿವಿಮಾತು ಹೇಳುತ್ತಾರೆ ಸುನೀಲ್.

    ಕೆಎಸ್​ಎಸ್​ಎ ತಜ್ಞರಿಂದ ತರಬೇತಿ: ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳು ನಮಗೆ ಪ್ರಮುಖ ಗ್ರಾಹಕರು. ಇಎಸ್​ಐ, ಆದಾಯ ತೆರಿಗೆ ಇಲಾಖೆ ಸೇರಿ ಇತರೆ ಪ್ರತಿಷ್ಠಿತ ಸಂಸ್ಥೆಗಳಿಗೆ ಭದ್ರತಾ ಸಿಬ್ಬಂದಿ ಒದಗಿಸಿದ್ದೇವೆ. ಸಣ್ಣ ಕ್ಲೈಂಟ್​ಗಳಿಗೂ ಭದ್ರತಾ ಸಿಬ್ಬಂದಿ ನೀಡಿದ್ದೇವೆ. ಭದ್ರತೆಗೆ ತುರ್ತಾಗಿ ಸಿಬ್ಬಂದಿ ಬೇಕೆಂದರೆ ತಕ್ಷಣ ಒದಗಿಸುತ್ತೇವೆ. ಎಸ್ಸೆಸ್ಸೆಲ್ಸಿ ಓದಿದವರನ್ನು ಭದ್ರತಾ ಹುದ್ದೆಗೆ ಸೇರಿಸಿಕೊಳ್ಳುತ್ತೇವೆ. ಮೊದಲಿಗೆ ಅವರಿಗೆ ಅಧಿಕಾರಿಗಳ ಜತೆ ಹೇಗೆ ವರ್ತಿಸಬೇಕು, ಹೇಗೆ ಮಾತನಾಡಬೇಕೆಂಬ ಕೌಶಲವನ್ನು ಹೇಳಿಕೊಡುತ್ತೇವೆ. ಮೆಟಲ್ ಡಿಟಕ್ಟರ್ ತಪಾಸಣೆ ಹಾಗೂ ಕಂಫ್ಯೂಟರ್ ಬಗ್ಗೆ ಕೆಎಸ್​ಎಸ್​ಎ ತಜ್ಞರಿಂದ ತರಬೇತಿ ಕೊಡಿಸುತ್ತೇವೆ. ಇದಕ್ಕಾಗಿ ಕೆಲ ಸಂಸ್ಥೆಗಳ ಜತೆ ಸಹಯೋಗ ಹೊಂದಿದ್ದೇವೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬಳಸಿಕೊಂಡು ಭದ್ರತಾ ಸೇವೆ ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ ಸುನೀಲ್. ಕ್ಲೈಂಟ್​ಗೆ ಒಳ್ಳೆಯ ಸೇವೆ ಮುಖ್ಯ ಕ್ಲೈಂಟ್ ಜತೆ ಧೀರ್ಘಾವಧಿ ಸಂಬಂಧ ಇರಬೇಕೆಂದರೆ ಉತ್ತಮ ಸೇವೆ ನೀಡುವುದು ಮುಖ್ಯ. ಒಳ್ಳೆಯ ಸೇವೆ ನೀಡಿದರೆ ಮಾತ್ರವೇ ಕ್ಲೈಂಟ್​ಗಳು ನಮ್ಮ ಜತೆ ದೀರ್ಘಕಾಲ ಇರುತ್ತಾರೆ. ಇಲ್ಲದಿದ್ದರೆ, ವ್ಯವಹಾರ ಕಡಿತಗೊಳಿಸುತ್ತಾರೆ ಎಂಬುದು ಸುನೀಲ್ ಅನುಭವದ ನುಡಿ.

    ಭದ್ರತಾಸೇವಾ ಕ್ಷೇತ್ರದ ಸಾಧಕ ಎನ್.ಜೆ.ಸುನೀಲ್

    ಯುವಕರಿಗೆ ಸ್ಪೂರ್ತಿ : ಹೊಸದಾಗಿ ಸೆಕ್ಯೂರಿಟಿ ಏಜೆನ್ಸಿ ತೆರೆಯುವ ಬಗ್ಗೆ ಸಾಕಷ್ಟು ಜನರಿಗೆ ಸುನೀಲ್ ಮಾಹಿತಿ ನೀಡಿದ್ದಾರೆ. ಕಂಪನಿಯನ್ನು ಮುನ್ನಡೆಸುವ ಬಗ್ಗೆಯೂ ಸಲಹೆ ಕೊಟ್ಟಿದ್ದಾರೆ. ಸೆಕ್ಯೂರಿಟಿ ಏಜೆನ್ಸಿ ತೆರೆಯಲು ಲೈಸೆನ್ಸ್ ಪಡೆಯಬೇಕು, ಜಿಎಸ್​ಟಿ, ಇಎಸ್​ಐ, ಇಪಿಎಫ್ ನೋಂದಣಿ ಮಾಡಿಸಬೇಕು. ಕಾರ್ವಿುಕ ಪರವಾನಗಿ, ಸಿಬ್ಬಂದಿ ನೇಮಿಸಿಕೊಳ್ಳುವಾಗ ಅಭ್ಯರ್ಥಿಗಳ ಗುರುತಿನ ಚೀಟಿ ಪಡೆಯಬೇಕು. ಪ್ರತಿವರ್ಷ ಲೈಸೆನ್ಸ್ ನವೀಕರಣಗೊಳಿಸಬೇಕು ಎಂದು ಮಾಹಿತಿ ನೀಡುವ ಸುನೀಲ್ ಹಲವು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ.

    ಸಮಾಜಮುಖಿ ಕಾರ್ಯಗಳು…: ತಾವು ದುಡಿದ ಆದಾಯದಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ವಾಪಸ್ ಕೊಡಬೇಕೆಂಬ ಉದ್ದೇಶದಿಂದ ಎನ್.ಜೆ. ಸುನೀಲ್, ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅದರಂತೆ, 2020ರಲ್ಲಿ ರೋಟರಿ ಎಚ್​ಎಸ್​ಆರ್ ಲೇಔಟ್ ಸಂಸ್ಥೆಗೆ ಸೇರಿಕೊಂಡರು. ಶಾಲಾ ಮಕ್ಕಳಿಗೆ ಸಾವಿರಾರು ರೂ. ಮೌಲ್ಯದ ಬ್ಯಾಗ್, ಪುಸ್ತಕಗಳನ್ನು ಉಚಿತವಾಗಿ ನೀಡಿದ್ದಾರೆ. ಕಷ್ಟವೆಂದು ಹೇಳಿಕೊಂಡು ಬರುವವರಿಗೆ ಸಹಾಯಹಸ್ತ ಚಾಚಿದ್ದಾರೆ. ಕೋರಮಂಗಲದಲ್ಲಿ ವಾಸಿಸುತ್ತಿರುವ ಇವರು, ಸ್ಥಳೀಯ ಜನರ ಸಹಯೋಗದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ರಕ್ತದಾನ ಶಿಬಿರ, ಕೃತಕ ಕಾಲು ಜೋಡಣೆ ಸೇರಿ ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಕಾಪೋರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್​ಆರ್) ನಿಧಿಯಡಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಟ್ಯಾಬ್​ಗಳನ್ನು ನೀಡಿದ್ದಾರೆ. ಶಿಕ್ಷಕರಿಗೆ ‘ನೇಷನ್ ಬಿಲ್ಡರ್ ಅವಾರ್ಡ್’ ಕೊಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದಾಗ ಅಲ್ಲಿನ ಸಂತ್ರಸ್ತರಿಗೆ ಸಾವಿರಾರು ರೂ. ವ್ಯಯಿಸಿ ಫುಡ್ ಕಿಟ್, ಹಣ್ಣು-ಹಂಪಲುಗಳನ್ನು ವಿತರಿಸಿದ್ದರು. ಜಾನುವಾರುಗಳಿಗೆ ಟ್ರಕ್​ನಲ್ಲಿ ಮೇವು ಕಳುಹಿಸಿದ್ದರು.

    ಭದ್ರತಾಸೇವಾ ಕ್ಷೇತ್ರದ ಸಾಧಕ ಎನ್.ಜೆ.ಸುನೀಲ್

    ರಾಜಕೀಯ ಸಹವಾಸ ಬೇಡ : ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ. ರಾಜಕೀಯ ಎಂಬುದು ಒಂದು ರೀತಿಯಲ್ಲಿ ಬಿಜಿನೆಸ್ ಆಗಿ ಮಾರ್ಪಟ್ಟಿದೆ. ದಿನೆದಿನೇ ರಾಜಕೀಯ ಮೌಲ್ಯ ನಶಿಸುತ್ತಿದೆ. ಹೀಗಿದ್ದಾಗ, ರಾಜಕೀಯ ಸಹವಾಸ ನಮಗೆ ಬೇಡವಾಗಿದೆ ಎನ್ನುತ್ತಾರೆ ಸುನೀಲ್. ಸೆಕ್ಯೂರಿಟಿ ಏಜೆನ್ಸಿ ನನಗೆ ಎಲ್ಲ ಕೊಟ್ಟಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ಗುರಿ ಹಾಕಿಕೊಂಡಿದ್ದೇನೆ. ಮತ್ತಷ್ಟು ಗುಣಮಟ್ಟದ ಸೇವೆ ನೀಡಲು ಬದ್ಧನಾಗಿದ್ದೇನೆ. ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ನೀಡುತ್ತಿದ್ದೇವೆ. ಐಟಿ-ಬಿಟಿ ಕಂಪನಿಗಳ ಭದ್ರತಾ ನಿಯೋಜನೆಗೆ ಬೇಸಿಕ್ ಇಂಗ್ಲಿಷ್ ಗೊತ್ತಿದ್ದವರನ್ನು ನಿಯೋಜಿಸುತ್ತೇವೆ. 5 ಸಾವಿರ ಸಿಬ್ಬಂದಿಗೆ ಉದ್ಯೋಗ ನೀಡಲು ಪಣ ತೊಟ್ಟಿದ್ದೇನೆ ಎಂದವರು ಹೇಳುತ್ತಾರೆ.

    ಸೋಮುಸುಂದರ ವನ: ಕೋರಮಂಗಲ ಮತ್ತು ಎಚ್​ಎಸ್​ಆರ್ ಲೇಔಟ್​ನಲ್ಲಿ ರೋಟರಿ ಸಂಸ್ಥೆ ಮೂಲಕ ಪ್ಲಾ್ಯಸ್ಟಿಕ್ ಬಳಸದಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿದ್ದೇವೆ. ರೋಟರಿ ಸಂಸ್ಥೆ ಮೂಲಕ ‘ಸೋಮು ಸುಂದರ ಪಾಳ್ಯ’ದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟಿದ್ದು, ಈಗ ಮರವಾಗಿ ಬೆಳೆದಿವೆ. ಸಸಿ ನೆಡುವ ಸಂದರ್ಭ ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರಿಗೆ ವಹಿಸಲಾಗಿತ್ತು. ಹೀಗಾಗಿ, ಉದ್ಯಾನವು ಸುಂದರ ವನವಾಗಿ ಗುರುತಿಸಿಕೊಂಡಿದೆ. ನೂರಾರು ಮಂದಿ ವಾಯು ವಿಹಾರಕ್ಕೆ ಬರುತ್ತಿದ್ದಾರೆ. ಉದ್ಯಾನ ನಿರ್ವಹಣೆಯನ್ನು ಸ್ಥಳೀಯರೇ ಮಾಡುತ್ತಿದ್ದಾರೆ. ‘ಒಂದು ಮರ ನಾಶ ಮಾಡಿದರೆ 10 ಗಿಡ ನೆಡಬೇಕು’ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಿದ್ದೇವೆ. ಪರಿಸರ ಪ್ರಾಮುಖ್ಯತೆ ಬಗ್ಗೆ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸುನೀಲ್ ವಿವರಿಸುತ್ತಾರೆ.

    ಸವಾಲಿನ ಕ್ಷೇತ್ರ: ನ್ಯಾಷನಲ್ ಬ್ಯೂರೋ ಆಫ್ ಕ್ರೖೆಮ್ ರೆಕಾರ್ಡ್ ಪ್ರಕಾರ, ವರ್ಷದಿಂದ ವರ್ಷಕ್ಕೆ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿವೆ. ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಕೇಸ್​ಗಳು ಏರುತ್ತಿವೆ. ಇದು ಮಹಾನಗರಗಳ ಜನರಲ್ಲಿ ಆತಂಕ ತಂದೊಡ್ಡಿದೆ. ಭದ್ರತೆಯ ಅಗತ್ಯವು ಹೆಚ್ಚಿದೆ ಮತ್ತು ಹೊಸ ಕಂಪನಿಗಳನ್ನು ಸ್ಥಾಪಿಸುವ ಸಂಖ್ಯೆಯು ಗಮನಾರ್ಹವಾಗಿ ಬೆಳೆದಿದೆ. ಭದ್ರತಾ ಉದ್ದೇಶಗಳಿಗಾಗಿ, ವ್ಯಕ್ತಿಗಳು ಖಾಸಗಿ ಮೂಲಗಳಿಂದ ಭದ್ರತಾ ಸಿಬ್ಬಂದಿ ನೇಮಿಸಿಕೊಳ್ಳಲು ಒಲವು ತೋರುತ್ತಾರೆ. ದೇಶಾದ್ಯಂತ ಹಲವಾರು ಖಾಸಗಿ ಭದ್ರತಾ ಕಂಪನಿಗಳು ನೆಲೆಗೊಂಡಿವೆ ಮತ್ತು ಅವರ ಭದ್ರತಾ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಿದೆ. ಕೇಂದ್ರ ಸರ್ಕಾರವು ಖಾಸಗಿ ಭದ್ರತಾ ಏಜೆನ್ಸಿಗಳ (ನಿಯಂತ್ರಣ) ಕಾಯ್ದೆ ಪರಿಚಯಿಸಿತ್ತು. ಈ ಖಾಸಗಿ ಭದ್ರತಾ ಏಜೆನ್ಸಿಗಳನ್ನು ಪರವಾನಗಿ ಪಡೆಯಲು ಕಡ್ಡಾಯ ಮಾಡಲಾಗಿದೆ. ಭದ್ರತಾ ಕ್ಷೇತ್ರ ಇತರ ಕ್ಷೇತ್ರಗಳಿಗಿಂತ ಭಿನ್ನವಾದದ್ದು. ಭದ್ರತಾ ವಿಷಯದಲ್ಲಿ ಸ್ವಲ್ಪ ಎಡವಿದ್ದರೂ ದೊಡ್ಡ ಬೆಲೆಯನ್ನೇ ತರಬೇಕಾಗುತ್ತದೆ. ಸೆಕ್ಯೂರಿಟಿ ಏಜೆನ್ಸಿಯವರು ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸುತ್ತಾ ಸೇವೆ ನೀಡುತ್ತಿರುವುದು ಎನ್.ಜೆ. ಸುನೀಲ್ ಅವರ ಹೆಗ್ಗಳಿಕೆ.

    ನನ್ನನ್ನು ಗುರುತಿಸಿ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿದ್ದಕ್ಕೆ ವಿಜಯವಾಣಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಂಪನಿಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ನನ್ನ ಮೇಲೆ ಜವಾಬ್ದಾರಿ ಹೆಚ್ಚಿದೆ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪ್ರತಿ ಸಿಬ್ಬಂದಿಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ಭದ್ರತಾ ಕ್ಷೇತ್ರದಲ್ಲಿ ಇನ್ನಷ್ಟು ಗುಣಮಟ್ಟ ಸೇವೆ ನೀಡಲು ಬದ್ಧರಾಗಿದ್ದೇವೆ.

    | ಎನ್.ಜೆ. ಸುನೀಲ್ ವ್ಯವಸ್ಥಾಪಕ ನಿರ್ದೇಶಕ, ಡಿಫೆಸಾ ಸೆಕ್ಯೂರಿಟಿ ಸರ್ವೀಸಸ್

    ಸುನೀಲ್ ಅವರು ಸೆಕ್ಯೂರಿಟಿ ಇಂಡಸ್ಟ್ರಿಯಲ್ಲಿ ಒಂದು ಉತ್ತಮವಾದ ಕಂಪನಿ ಕಟ್ಟಿ ಬೆಳೆಸಿದ್ದಾರೆ. ರಾಜ್ಯಾದ್ಯಂತ ಈ ಕಂಪನಿಯ ಶಾಖೆಗಳು ಇದ್ದು, ಉತ್ತಮ ಸೇವೆ ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರದ ವತಿಯಿಂದಲೂ ಗುತ್ತಿಗೆ ಇವರ ಕಂಪನಿಗೆ ಸಿಗುತ್ತಿದೆ. ರೋಟರಿ ಕ್ಲಬ್ ಸದಸ್ಯರಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾರೆ. ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಪ್ರೋತ್ಸಾಹ ನೀಡುತ್ತಾರೆ.

    | ಎ.ಎಂ. ಪ್ರವೀಣ್ ಡಿಫೆಸಾ ಸೆಕ್ಯೂರಿಟಿ ಸಂಸ್ಥೆಯ ಸಿಇಒ

    ಸುನೀಲ್ ಅವರೊಂದಿಗೆ 17 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಎಲ್ಲರನ್ನೂ ನಗು ಮೊಗದಿಂದ ಮಾತನಾಡಿಸುತ್ತಾರೆ. ಅವರ ಜತೆಗೆ ಕೆಲಸ ಮಾಡುವುದಕ್ಕೆ ತುಂಬಾ ಖುಷಿಯಾಗುತ್ತದೆ. ಸಿಬ್ಬಂದಿಗೆ ಹಣದ ಸಮಸ್ಯೆಯಾದರೆ ಸಹಾಯ ಮಾಡುತ್ತಾರೆ. ಮಾಲೀಕರಾದರೂ ಯಾವುದೇ ಅಹಂ ಇಲ್ಲ. ಬಹಳ ಸರಳವಾಗಿ ಇರುತ್ತಾರೆ. ಕಷ್ಟ ಅಂತ ಬಂದವರಿಗೆ ಸಹಾಯ ಮಾಡುತ್ತಾರೆ. ಅವರ ಸಮಾಜಮುಖಿ ಕಾರ್ಯ ಇದೇ ರೀತಿ ಮುಂದುವರಿಯಲಿ.

    | ಪಿ.ವಿ. ಕನ್ನಿಕಾ ಸಂಸ್ಥೆಯ ಸೀನಿಯರ್ ಅಕೌಂಟೆಂಟ್ ಮ್ಯಾನೇಜರ್

    ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟಿ ಅನುಷ್ಕಾ ಶೆಟ್ಟಿ..! ಈ ಪಕ್ಷದಿಂದ ಎಂಎಲ್​ಎ ಎಲೆಕ್ಷನ್‌ಗೆ ಸ್ಪರ್ಧೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts