VIDEO | ನೀತಾ ಅಂಬಾನಿಯ ನೃತ್ಯ ನೋಡಿ ಮನಸೋತ ಬಾಲಿವುಡ್ ಮಂದಿ!

blank

ಮಹಾರಾಷ್ಟ್ರ: ನೀತಾ ಮುಖೇಶ್ ಅಂಬಾನಿ ಅವರ ಮಹತ್ವಾಕಾಂಕ್ಷೆಯ ಕಲ್ಚರಲ್ ಸೆಂಟರ್ (ಎನ್‌ಎಂಎಸಿಸಿ) ಶುಕ್ರವಾರ ರಾತ್ರಿ ಅದ್ಧೂರಿಯಾಗಿ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಭರತನಾಟ್ಯಂ ಶೈಲಿಯಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

blank

ನೀತಾ ಅಂಬಾನಿ ಅವರ ಭರತನಾಟ್ಯ ನೃತ್ಯ ಎಲ್ಲರ ಗಮನ ಸೆಳೆದಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್‌, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕರಣ್ ಜೋಹರ್‌ ಸೇರಿದಂತೆ ಅನೇಕ ಮಂದಿ ಬಾಲಿವುಡ್ ಸಿನಿತಾರೆಯರು ಭಾಗಿಯಾಗಿದ್ದರು.

ರಘುಪತಿ ರಾಘವ್ ರಾಜಾ ರಾಮ್ ಹಾಡಿಗೆ ಭರತನಾಟ್ಯಂ ಶೈಲಿಯಲ್ಲಿ ನೀತಾ ಅಂಬಾನಿ ಅವರು ನೃತ್ಯ ಮಾಡಿದ್ದಾರೆ. ವೃತ್ತಿಪರ ನೃತ್ಯಗಾರ್ತಿಯಂತೆ ಡ್ಯಾನ್ಸ್ ಮಾಡಿದ್ದು, ವೇದಿಕೆ ಮುಂಭಾಗದಲ್ಲಿದ್ದ ಎಲ್ಲರೂ ಒಂದು ಕ್ಷಣ ಬೆರಗಾಗಿದ್ದಾರೆ. ಸದ್ಯ ನೀತಾ ಅಂಬಾನಿ ಅವರ ನೃತ್ಯಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ನೀತಾ ಅಂಬಾನಿ ಅವರು ತಮ್ಮ 6ನೇ ವಯಸ್ಸಿನಿಂದಲೂ ನೃತ್ಯ ಮಾಡಲು ಆರಂಭಿಸಿದ್ದಾರೆ. ಹೀಗಾಗಿ ನೃತ್ಯ ಎನ್ನುವುದು ಅವರ ಹೃದಯದಲ್ಲೇ ಇದೆ ಎಂದು ವೈರಲ್ ಆಗಿರುವ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ. ನೀತಾ ಅಂಬಾನಿ ಅವರ ನೃತ್ಯ ವಿಡಿಯೋವನ್ನು ಗಾಯಕಿ ಶ್ರೇಯಾ ಘೋಷಾಲ್ ಸೇರಿದಂತೆ ಅನೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

Share This Article
blank

ಹನಿ-ಹನಿ ಮೂತ್ರ ಬರುತ್ತಿದ್ರೆ ಈ ಅಂಗಕ್ಕೆ ಹಾನಿಯಾಗಿದೆ ಎಂದರ್ಥ!; ಅನಿಯಂತ್ರಿತ ಮೂತ್ರದ ಸಮಸ್ಯೆಗೆ ಕಾರಣ ಏನು? | Urinary

Urinary : ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಮೂತ್ರ ಸಂಬಂಧಿತ ಸಮಸ್ಯೆಗಳು ಭಾಧಿಸುತ್ತವೆ. ಅನೇಕ ಜನರಿಗೆ ಮೂತ್ರ…

ಕಣ್ಣಿನ ಪೊರೆ ತುಂಬಾ ಹಾನಿಕಾರಕವೇ? ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… Cataract

Cataract : ಕಣ್ಣಿನ ಪೊರೆಯು ಸಾಮಾನ್ಯವಾಗಿ ಕಂಡುಬರುವ ಕಣ್ಣಿನ ಕಾಯಿಲೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ವಯಸ್ಸಾದಂತೆ ಇದು…

blank