More

    15 ನಿಮಿಷದಲ್ಲಿ ಕರೊನಾ ಪರೀಕ್ಷೆ ಫಲಿತಾಂಶ ನೀಡುವ ‘ನಿರ್ವಾಣ’

    ನ್ಯೂಯಾರ್ಕ್ : ಕರೊನಾ ವೈರಸ್ ಸೋಂಕು ತಗುಲಿದೆಯೇ ಎಂದು ಪರೀಕ್ಷಿಸುವುದರೊಂದಿಗೆ ರೂಪಾಂತರಿ ವೈರಸ್​ ಉಪಸ್ಥಿತಿಯನ್ನು ಪತ್ತೆ ಹಚ್ಚಲು ಸೀಕ್ವೆಂನ್ಸಿಂಗ್ ಕೂಡ ಮಾಡಬಲ್ಲ ಹೊಸತೊಂದು ಪೋರ್ಟಬಲ್ ಆದ ಟೆಸ್ಟ್​ ಕಿಟ್​​ಅನ್ನು ಅಮೆರಿಕದ ಸಂಶೋಧನಾ ಸಂಸ್ಥೆ ಕಂಡುಹಿಡಿದಿದೆ.

    ಈ ಪರೀಕ್ಷೆಗೆ ಒಳಪಟ್ಟರೆ ಕರೊನಾ ಸೋಂಕು ತಗುಲಿದೆಯೋ ಇಲ್ಲವೋ ಮಾತ್ರ ತಿಳಿಯುವುದಿಲ್ಲ. ಅದೇ ರೀತಿಯ ರೋಗಲಕ್ಷಣಗಳನ್ನು ತರಿಸಿ ತಪ್ಪು ಕಲ್ಪನೆಗೆ ದಾರಿ ಮಾಡುವ ಇನ್​ಫ್ಲುಯೆಂಜಾ ಇತ್ಯಾದಿ ವೈರಸ್​ ಇದೆಯೇ ಎಂಬುದೂ ತಿಳಿಯುತ್ತದೆ. ದುಬಾರಿ ಮೂಲಸೌಕರ್ಯಗಳ ಅಗತ್ಯವಿಲ್ಲದೆ ಸರಳವಾಗಿ ಪಾಕೆಟ್​ ಸೈಜ್ ಉಪಕರಣದಿಂದ ಪರೀಕ್ಷೆ ನಡೆಸಬಹುದಾಗಿದೆ ಎಂದು ಆವಿಷ್ಕಾರ ನಡೆಸಿರುವ ಅಮೆರಿಕದ ಸಾಲ್ಕ್ ಇನ್ಸ್​ಟಿಟ್ಯೂಟ್ ಫಾರ್ ಬಯಲಾಜಿಕಲ್ ಸ್ಟಡೀಸ್​ನ ವಿಜ್ನಾನಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ಮೆಡ್​ ಎಂಬ ಜರ್ನಲ್​ನಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ ‘ನಿರ್ವಾಣ’ ಎಂದು ಹೆಸರಿಸಲಾಗಿರುವ ಈ ಪುಟ್ಟ ಉಪಕರಣವು ಒಂದೇ ಬಾರಿಗೆ 96 ಸ್ಯಾಂಪಲ್​ಗಳನ್ನು ಪರೀಕ್ಷಿಸಬಲ್ಲದು. ಜೊತೆಗೆ ಕೋವಿಡ್-19, ಇನ್​ಫ್ಲುಯೆಂಜಾ ಎ, ಹ್ಯೂಮನ್ ಅಡಿನೋವೈರಸ್ ಮತ್ತು ನಾನ್-ಸಾರ್ಸ್-ಕೋವ್-2 ಹ್ಯೂಮನ್ ಕರೊನಾ ವೈರಸ್​ಗಳ ಪರೀಕ್ಷೆಯನ್ನು ಒಮ್ಮೆಲೇ ಮಾಡಬಲ್ಲದು. ಕೇವಲ 15 ನಿಮಿಷಗಳಲ್ಲಿ ಪಾಸಿಟೀವ್ ಇಲ್ಲ ನೆಗೆಟೀವ್ ಫಲಿತಾಂಶ ಬರುತ್ತದೆ. ಮೂರು ಗಂಟೆಯ ಒಳಗೆ ಎಲ್ಲಾ ವೈರಸ್​ನ ಸಾಧ್ಯತೆಯ ಬಗ್ಗೆ ಫಲಿತಾಂಶ ನೀಡುತ್ತದೆ ಎನ್ನಲಾಗಿದೆ.

    ಈ ಟೆಸ್ಟ್​ನ ಉಪಯುಕ್ತತೆಯನ್ನು ಅದಾಗಲೇ ಪ್ರಾಯೋಗಿಕವಾಗಿ ಕಂಡುಕೊಳ್ಳಲಾಗುತ್ತಿದೆ. ಈಗ ಎರಡು ಅಥವಾ ಮೂರು ಬಾರಿ ಬೇರೆ ಬೇರೆ ಉಪಕರಣಗಳನ್ನು ಬಳಸಿ ಮಾಡುತ್ತಿರುವ ಪರೀಕ್ಷೆಗಳನ್ನು ಒಂದೇ ಪೋರ್ಟಬಲ್ ಟೆಸ್ಟ್​​ ಕಿಟ್​ನಿಂದ ಮಾಡಬಹುದು ಎಂದು ಪ್ರೊ. ಜುವಾನ್ ಕಾರ್ಲೋಸ್ ಇಜ್ಪಿಸುವಾ ಬೆಲ್ಮೊಂಟೆ ಹೇಳಿದ್ದಾರೆ. ಹೀಗಾಗಿ ಶಾಲೆಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಇದರ ಬಳಕೆಗೆ ಅವಕಾಶವಿದೆ ಎಂದಿದ್ದಾರೆ.

    ಇದನ್ನೂ ಓದಿ: ನಾಳೆಯಿಂದ 45 ತುಂಬಿದ ಎಲ್ಲರಿಗೂ ಲಸಿಕೆ : ಸಮರ್ಪಕ ಕಾರ್ಯಾಚರಣೆಗೆ ಕೇಂದ್ರದ ಸೂಚನೆ

    ಹಾಲಿ ಬಳಕೆಯಲ್ಲಿರುವ ಪಿಸಿಆರ್ ಟೆಸ್ಟ್​ನಲ್ಲಿ, ಕರೊನಾ ರೀತಿಯ ರೋಗಲಕ್ಷಣಗಳು ಕಂಡುಬಂದವರ ಸ್ವಾಬ್​ ಪರೀಕ್ಷೆ ನಡೆಸಿದಾಗ ನೆಗೆಟೀವ್ ವರದಿ ಬಂದರೆ, ಮತ್ತೆ ಬೇರೆ ಯಾವ ವೈರಸ್​ನಿಂದ ಈ ಲಕ್ಷಣಗಳು ಕಂಡುಬರುತ್ತಿವೆ ಎಂದು ತಿಳಿಯಲು ಬೇರೆಯೇ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಆದ್ದರಿಂದ ‘ನಿರ್ವಾಣ’ ಆಲ್-ಇನ್-ಒನ್ ಪರೀಕ್ಷೆಗಾಗಿ ಉಪಯುಕ್ತವಾಗಲಿದೆ ಎಂದಿದ್ದಾರೆ. (ಏಜೆನ್ಸೀಸ್)

    ಈ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ !

    ಜಮ್ಮುವಿನಲ್ಲಿ ತಿಮ್ಮಪ್ಪನ ದೇವಾಲಯ ! 25 ಹೆಕ್ಟೇರ್ ಭೂಮಿ ಮಂಜೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts