More

    ಅತ್ಯಂತ ಕಡಿಮೆ ಅವಧಿಯಲ್ಲಿ ಬಜೆಟ್​ ಮಂಡನೆ! ಇಲ್ಲಿದೆ ವಿತ್ತ ಸಚಿವರ ಹಿಂದಿನ ದಾಖಲೆಗಳ ಕಂಪ್ಲೀಟ್​ ವಿವರ…

    ಹೊಸದಿಲ್ಲಿ: ಇಂದು ಹೊಸ ಸಂಸತ್ತಿನಲ್ಲಿ ನಡೆದ ಮಧ್ಯಂತರ ಬಜೆಟ್ 2024 ಅನ್ನು ಅತ್ಯಂತ ಕಡಿಮೆ ಅವಧಿಯೊಳಗೆ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಕೇವಲ 58 ನಿಮಿಷಗಳಲ್ಲಿ ಈ ಬಾರಿಯ ಬಜೆಟ್​ ಮಂಡಿಸಿದ್ದಾರೆ. ಈ ಮೂಲಕ ಬಜೆಟ್​ ಭಾಷಣದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ ಹಣಕಾಸು ಸಚಿವೆ, ಈ ಹಿಂದಿನ ವರ್ಷಗಳಲ್ಲಿ ಎಷ್ಟು ಅವಧಿಯಲ್ಲಿ ಬಜೆಟ್​ ಮಂಡಿಸಿದ್ದಾರೆ ಎಂಬುದರ ಕಂಪ್ಲೀಟ್​ ವಿವರ ಇಲ್ಲಿದೆ ಗಮನಿಸಿ.

    ಇದನ್ನೂ ಓದಿ: ಕೆರಗೋಡಿನಲ್ಲಿ ಲಾಠಿಚಾರ್ಜ್ ಪ್ರಕರಣ: ಸಿಎಂಗೆ ರಾಷ್ಟ್ರಧ್ವಜದ ಪಾಠ ಮಾಡಿದ ಪಿಟಿ ಮಾಸ್ಟರ್

    ಗುರುವಾರ ಸಂಸತ್ತಿನಲ್ಲಿ 2024-25ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ ಹಣಕಾಸು ಸಚಿವರು 58 ನಿಮಿಷಗಳ ಭಾಷಣ ಮುಗಿಸಿ ಎಲ್ಲರಿಗೂ ಶಾಕ್ ನೀಡಿದರು. ಬೆಳಗ್ಗೆ 11 ಗಂಟೆಗೆ ತಮ್ಮ ಭಾಷಣ ಪ್ರಾರಂಭಿಸಿದ ಸಚಿವರು 11:58ಕ್ಕೆ ಸರಿಯಾಗಿ ಅಂತ್ಯಗೊಳಿಸಿದರು. ಈ ಮೂಲಕ ದಾಖಲೆ ನಿರ್ಮಿಸಿದ ನಿರ್ಮಲಾ ಸೀತಾರಾಮನ್​, ಇಂದು ತಮ್ಮ ಆರನೇ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು.

    ಪ್ರಧಾನಿ ಮೋದಿ ಅವರ ಎರಡನೇ ಅವಧಿಯ ಕೊನೆಯ ಬಜೆಟ್ ಇದಾಗಿದ್ದು, 17ನೇ ಲೋಕಸಭೆಯ ಅಧಿಕಾರಾವಧಿಯು ಜೂನ್ 16, 2024 ರಂದು ಕೊನೆಗೊಳ್ಳಲಿದೆ ಮತ್ತು 2024ರ ಲೋಕಸಭಾ ಚುನಾವಣೆಯು ಈ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯಲಿದೆ ಎಂಬುದು ವರದಿ. ಇಲ್ಲಿಯವರೆಗೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಅಷ್ಟು ಬಜೆಟ್ ಭಾಷಣದ ದಾಖಲೆಯ ವಿವರ ಹೀಗಿದೆ.

    ಇದನ್ನೂ ಓದಿ:  ಸ್ಟಾರ್​ ನಿರ್ದೇಶಕನ ಚಿತ್ರದಲ್ಲಿ ’12 ಫೇಲ್’​ ನಟ! ಇದು ಖಂಡಿತ ಸಿನಿಮಾ ಅಲ್ಲ?

    2024: 58 ನಿಮಿಷ
    2023: 1 ಗಂಟೆ 27 ನಿಮಿಷ
    2022: 1 ಗಂಟೆ 30 ನಿಮಿಷ
    2021: 1 ಗಂಟೆ 50 ನಿಮಿಷ
    2020: 2 ಗಂಟೆ 42 ನಿಮಿಷ
    2019: 2 ಗಂಟೆ 15 ನಿಮಿಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts