More

    ನಿಕ್ಕಿ ಗಲ್ರಾನಿಗೆ ಕರೊನಾ ಪಾಸಿಟಿವ್​!; ವಾರದ ಬಳಿಕ ಹೇಳಿಕೊಂಡ ನಟಿ

    ಈಗಾಗಲೇ ಸಿನಿಮಾ ಮಂದಿಯನ್ನೂ ಕರೊನಾ ಬಿಡುತ್ತಿಲ್ಲ. ಎಷ್ಟೇ ಜಾಗೃತೆ ವಹಿಸಿದರೂ ಯಾವುದೋ ಒಂದು ಮಾಯೆಯಲ್ಲಿ ಒಂದು ಅಂಟಿಕೊಳ್ಳುತ್ತಿದೆ. ಈಗಾಗಲೇ ಭಾರತೀಯ ಚಿತ್ರರಂಗದ ಘಟಾನುಘಟಿಗಳು ಈ ಸೋಂಕಿಗೆ ತುತ್ತಾಗಿ, ಬಳಿಕ ಗುಣಮುಖರಾಗಿ ಮರಳಿದ್ದಾರೆ. ಇದೀಗ ಸ್ಯಾಂಡಲ್​ವುಡ್​ ನಟಿ, ಟಾಲಿವುಡ್​, ಕಾಲಿವುಡ್​ನಲ್ಲಿಯೂ ಹೆಚ್ಚು ಗುರುತಿಸಿಕೊಂಡಿರುವ ನಟಿ ನಿಕ್ಕಿ ಗಲ್ರಾನಿಗೂ ಕರೊನಾ ಪಾಸಿಟಿವ್​ ಇರುವುದು ಖಚಿತವಾಗಿದೆ.

    ಇದನ್ನೂ ಓದಿ: ಚಿಕ್ಕಪ್ಪ-ಚಿಕ್ಕಮ್ಮ ಬಿಡುಗಡೆ ಮಾಡ್ತಾರೆ ನಿರಂಜನ್​ ಹೊಸ ಚಿತ್ರದ ಟೈಟಲ್​

    ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ನಿಕ್ಕಿ, ‘ಕಳೆದ ಒಂದು ವಾರದ ಹಿಂದೆಯೇ ನನಗೆ ಕರೊನಾ ಸೋಂಕು ತಗುಲಿದೆ. ಆರೋಗ್ಯದಲ್ಲಿ ಮೊದಲಿಗಿಂತ ಚೇತರಿಕೆ ಕಂಡುಬಂದಿದೆ. ನನ್ನ ಚೇತರಿಕೆಗೆ ಪ್ರಾರ್ಥಿಸಿದ ಎಲ್ಲರಿಗೂ ಮತ್ತು ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.

    ಇದನ್ನೂ ಓದಿ: ಏಳು ವರ್ಷಗಳ ನಂತರ ಮತ್ತೆ ಪ್ರತ್ಯಕ್ಷವಾದ ‘ಗೂಗ್ಲಿ’ ಟೈಟಲ್​ ಟೀಸರ್​

    ‘ಎಲ್ಲರಂತೆ ಜ್ವರ, ಶೀತ, ಗಂಟಲು ನೋವು ಸೇರಿ ಕರೊನಾ ಲಕ್ಷಣಗಳು ಕಂಡು ಬಂದಿದ್ದರ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದೆ. ಇದೀಗ ಬಹುತೇಕ ಗುಣಮುಖಳಾಗಿದ್ದೇನೆ. ಮನೆಯಲ್ಲಿಯೇ ಹೋಮ್​ ಕ್ವಾರಂಟೈನ್​ ಆಗಿದ್ದೇನೆ. ಆದರೂ ಮನೆಯಲ್ಲಿ ಹಿರಿಯರು ಇದ್ದ ಕಾರಣ ಕೊಂಚ ಭಯವಾಗಿತ್ತು. ಸಾಧ್ಯವಾದಷ್ಟು ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ’ ಎಂದು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

    ವಿಜಯ್​ ಮಲ್ಯ ಕುರಿತ ವೆಬ್​ಸಿರೀಸ್​ಗೆ ನಡೆದಿದೆ ತಯಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts