More

    ನಿಖಿಲ್ ಬೆವರಿಳಿಸಿದ ಕಾರ್ಯಕರ್ತರು: ಶಾಸಕರು ಭೇಟಿ ಕುರಿತು ಅಸಮಾಧಾನ

    ಹಾರೋಹಳ್ಳಿ: ಯಾವುದೇ ಕೆಲಸಗಳು ಆಗುತ್ತಿಲ್ಲ. ಚುನಾವಣೆ ವೇಳೆ ಮಾತ್ರ ಕ್ಷೇತ್ರ ನೆನಪಾಗುತ್ತದೆ.. ಹೀಗೇ ಹಲವಾರು ಪ್ರಶ್ನೆಗಳ ಸುರಿಮಳೆಗೈದ ಕಾರ್ಯಕರ್ತರು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಪೇಚಿಗೆ ಸಿಲುಕಿಸಿದರು.

    ಸೋಮವಾರ ಮರಳವಾಡಿಯ ಹಲವು ಗ್ರಾಮಗಳಿಗೆ ಭೇಟಿ ನೀಡಿದ್ದ ವೇಳೆ ನಿಖಿಲ್ ಕುಮಾರಸ್ವಾಮಿ ಎದುರು ಆಕ್ರೋಶ ವ್ಯಕ್ತಪಡಿಸಿದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಯ ಜೆಡಿಎಸ್ ಕಾರ್ಯಕರ್ತರು, ಶಾಸಕರು ನಮ್ಮವರೇ ಇದ್ದರೂ ಕೆಲಸವನ್ನು ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಗುವಳಿ ಚೀಟಿ ವಿತರಿಸಿಲ್ಲ, ನೀವು ಕೂಡ ಕ್ಷೇತ್ರವನ್ನು ಮರೆತಂತಿದೆ. ಜೆಡಿಎಸ್ ಕಾರ್ಯಕರ್ತರೆಂದರೆ ಅಧಿಕಾರಿಗಳಿಗೆ ಅಸಡ್ಡೆಯಾಗಿದ್ದು, ನಿಮ್ಮ ನಂಬಿದ್ದಕ್ಕೆ ನಾವು ಮೂಲೆಗುಂಪಾಗಿದ್ದೇವೆ ಎಂದು ಎಂದು ಹರಿಹಾಯ್ದರು.

    ಕರೊನಾ ಸಂಕಷ್ಟದ ಸಮಯದಲ್ಲಿಯೂ ಶಾಸಕರು ಕ್ಷೇತ್ರದತ್ತ ಮುಖ ಮಾಡಲಿಲ್ಲ. ಹಾರೋಹಳ್ಳಿ ತಾಲೂಕು ಕೇವಲ ಘೋಷಣೆಯಾಗಿಯೇ ಉಳಿದಿದೆ ಎಂದು ದೂರಿದರು.

    ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಇನ್ನು ಮುಂದೆ ಇಂತಹ ಯಾವುದೇ ಘಟನೆಗಳು ಜರುಗುವುದಿಲ್ಲ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡಲಾಗುವುದು. ಇಲ್ಲಿಯೇ ಒಂದು ಕಚೇರಿ ತೆರಯಲಾಗುವುದು. ನಮ್ಮನ್ನು ದಂಡಿಸಿ ಕೇಳುವ ಹಕ್ಕು ನಿಮಗಿದೆ. ಸಮಸ್ಯೆಗಳನ್ನು ಗಮನಕ್ಕೆ ತಂದರೆ, ತಂದೆ ಎಚ್.ಡಿ. ಕುಮಾರಸ್ವಾಮಿ ಜತೆ ರ್ಚಚಿಸಿ ಪರಿಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

    ಜಿಪಂ ಮಾಜಿ ಸದಸ್ಯ ಭುಜಂಗಯ್ಯ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ , ತಾಪಂ ಸದಸ್ಯೆ ಶಿಲ್ಪಾ ಶಿವಾನಂದ್, ಕಾರ್ಯಕರ್ತರಾದ ಸೋಮಸುಂದರ್, ತಮ್ಮಯ್ಯಣ್ಣ, ಶಂಕರಪ್ಪ, ಗುಂಡಪ್ಪ, ಪ್ರದೀಪ್, ಕೊಳ್ಳಿಗನಹಳ್ಳಿ ಪ್ರದೀಪ್ ಆಗ್ರ ಗಣೇಶ್, ನಾಗೇಶ್, ಸಿದ್ದರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts