More

    ರಾಮನಗರದಲ್ಲಿ ನಿಖಿಲ್-ರೇವತಿ ಮದುವೆ … ತೋಟದ ಮನೆಯಲ್ಲಿ ನಡೆಯಲಿದೆ ಸರಳ ವಿವಾಹ

    ಬೆಂಗಳೂರಿನಲ್ಲಿ ಏಪ್ರಿಲ್ 17ರಂದು ನಡೆಯಬೇಕಿದ್ದ ನಿಖಿಲ್ ಕುಮಾರ್ ಮತ್ತು ರೇವತಿ ಅವರ ವಿವಾಹ ಇದೀಗ ರಾಮನಗರಕ್ಕೆ ಶ್‌ಟಿ ಆಗಿದೆ. ರಾಮನಗರದ ತಮ್ಮ ತೋಟದ ಮನೆಯಲ್ಲಿ ಸರಳ ರೀತಿಯಲ್ಲಿ ವಿವಾಹ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ನಿಖಿಲ್ ತಂದೆ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ಇದಕ್ಕೂ ಮುನ್ನ ನಿಖಿಲ್ ಮತ್ತು ರೇವತಿ ಅವರ ಮದುವೆ ನಡೆಸಲು ರಾಮನಗರದಲ್ಲಿ ದೊಡ್ಡ ಮಟ್ಟದ ತಯಾರಿ ನಡೆದಿತ್ತು. ಆದರೆ, ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ, ಅಷ್ಟೊಂದು ಜನ ಸೇರುವುದು ಸರಿಯಲ್ಲ ಎಂದು ಮದುವೆಯನ್ನು ಬೆಂಗಳೂರಿಗೆ ಶ್‌ಟಿ ಮಾಡಲಾಯಿತು. ಇದೀಗ ಬೆಂಗಳೂರನ್ನು ರೆಡ್ ಜೋನ್ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಮದುವೆ ಮತ್ತೊಮ್ಮೆ ರಾಮನಗರಕ್ಕೆ ಶ್‌ಟಿ ಆಗಿದೆ.

    ಈ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ಸರ್ಕಾರದ ನಿಯಮದ ಪ್ರಕಾರ ಬೆಂಗಳೂರಿನಲ್ಲಿ ಮದುವೆ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ರಾಮನಗರದಲ್ಲೇ ಮದುವೆ ಮಾಡಬೇಕು ಅಂದುಕೊಂಡಿದ್ದೆವು. ಅದೇ ರೀತಿ ನಮ್ಮ ತೋಟದ ಮನೆಯಲ್ಲಿ ಸರಳವಾದಿ ಮದುವೆ ಮಾಡಲಾಗುತ್ತಿದೆ. ನಮ್ಮ ಕುಟುಂಬದ ಆಪ್ತು ಮಾತ್ರ ಮದುವೆ ಕಾರ್ಯದಲ್ಲಿ ಭಾಗಿಯಾಗುತ್ತಾರೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಮದುವೆಗೆ ಬರಬೇಡಿ ಎಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ವಿನಂತಿ ಮಾಡಿರುವ ಕುಮಾರಸ್ವಾಮಿ, ‘ನಮ್ಮ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರಲ್ಲಿ ಕೈ ಮುಗಿದು ಪ್ರಾರ್ಥಿಸುತ್ತೇನೆ. ಯಾರು ಸಹ ಮದುವೆಗೆ ಬರಬೇಡಿ. ನಿಮ್ಮೆಲ್ಲರ ಸಮ್ಮುಖದಲ್ಲಿ ಮದುವೆ ಮಾಡಲಾಗುತ್ತಿಲ್ಲ ಎಂಬ ನೋವು ನನಗೂ ಇದೆ. ಎಲ್ಲರೂ ಮದುವೆಗೆ ಬಂದರೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಹಾಗಾಗುತ್ತದೆ. ಹಾಗಾಗಿ ಎಲ್ಲರೂ ಮನೆಯಲ್ಲೇ ಇದ್ದು ನಿಖಿಲ್-ರೇವತಿಗೆ ಆಶೀರ್ವಾದ ಮಾಡಿ’ ಎಂದು ಮನವಿ ಮಾಡಿದ್ದಾರೆ.

    ರಾಮನಗರ ಜಿಲ್ಲೆಯಲ್ಲಿ ಒಂದೇ ಒಂದು ಕರೊನಾ ಪಾಸಿಟಿವ್ ಕೇಸ್ ದಾಖಲಾಗಿಲ್ಲ ಎಂದಿರುವ ಅವರು, ‘ನಿಜಕ್ಕೂ ಅದು ನನ್ನ ಅದೃಷ್ಟ. ನಾನು ಸರ್ಕಾರಿದಂದ ಮದುವೆ ನಡೆಸಲು ಅನುಮತಿ ಪಡೆದಿದ್ದೇನೆ. ವೈದ್ಯರ ಸಲಹೆ ಪಡೆದುಕೊಂಡೇ ನಾನು ಈ ರೀತಿ ನಿರ್ಧಾರ ಮಾಡಿದ್ದೇನೆ. ದಯವಿಟ್ಟು ಕಾರ್ಯಕರ್ತರು ಬಂದು ಗೊಂದಲ ಸೃಷ್ಟಿ ಮಾಡುವುದು ಬೇಡ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಮ್ಮುಖದಲ್ಲೇ ಆರತಕ್ಷತೆ ಮಾಡುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ದುಡ್ಡು ಉಳಿಸಲು ರೊಮ್ಯಾನ್ಸ್ ಕಟ್ … ‘ವಕೀಲ್ ಸಾಬ್’ನ ಹೊಸ ಸ್ಟ್ರಾಟಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts