ಬೆಂಗಳೂರು: ‘ರೈಡರ್’ ಸಿನಿಮಾ ಗುಂಗಿನಲ್ಲಿದ್ದ ನಟ ನಿಖಿಲ್ ಕುಮಾರಸ್ವಾಮಿ ಅದರಿಂದ ಆಚೆ ಬಂದು, ಈಗಾಗಲೇ ಹೊಸ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಶನಿವಾರ, ನಿಖಿಲ್ ಹುಟ್ಟುಹಬ್ಬದ ಪ್ರಯುಕ್ತ ಈ ಹೊಸ ಚಿತ್ರದ ಫಸ್ಟ್ ಲುಕ್ ಅನಾವರಣವಾಗಿದ್ದು, ಚಿತ್ರಕ್ಕೆ ‘ಯದುವೀರ’ ಎಂಬ ಶೀರ್ಷಿಕೆ ಇಡಲಾಗಿದೆ.
ಈ ಹಿಂದೆ ‘ಮಫ್ತಿ’, ‘ಮಾಸ್ಟರ್ ಪೀಸ್’ ಸೇರಿ ಹಲವು ಚಿತ್ರಗಳಿಗೆ ಅಸೋಸಿಯೇಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಂಜು ಅಥರ್ವ ‘ಯದುವೀರ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದುವರೆಗೂ ಫ್ಯಾಮಿಲಿ ಚಿತ್ರಗಳಲ್ಲೇ ಹೆಚ್ಚು ಗುರುತಿಸಿಕೊಂಡಿದ್ದ ನಿಖಿಲ್, ಈ ಚಿತ್ರದಲ್ಲಿ ಪಕ್ಕಾ ಮಾಸ್ ಮತ್ತು ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಸದ್ದಿಲ್ಲದೆ ಶೂಟಿಂಗ್ ಸಹ ಶುರುವಾಗಿದ್ದು, ಇನ್ನುಳಿದ ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಈಗಾಗಲೇ ‘ಸಖತ್’ ಸಿನಿಮಾ ನಿರ್ಮಾಣ ಮಾಡಿರುವ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಡಿ ನಿಶಾ ವೆಂಕಟ್ ಕೋನಂಕಿ ಮತ್ತು ಸುಪ್ರಿತ್ ಚಿತ್ರ ನಿರ್ವಿುಸುತ್ತಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ.
ಇವ ಸೆಂಟಿಮೆಂಟಲ್ ಕಳ್ಳ; ಅಬ್ಬಬ್ಬಾ.. ಕದಿಯೋದ್ರಲ್ಲೂ ಏನ್ ಶಿಸ್ತು!: ಈತ ಅಂಥ ವಾಹನ ಕದಿಯುತ್ತಿರಲಿಲ್ಲ, ಕದ್ದಿದ್ದನ್ನು ಮಾರುತ್ತಿರಲಿಲ್ಲ..!