More

    PHOTOS| ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಪ್ರೇಮಿಗಳ ದಿನ ಆಚರಿಸಿದ ನಿಖಿಲ್​-ರೇವತಿ!

    ಬೆಂಗಳೂರು: ಸಿನಿಮಾ ಮತ್ತು ರಾಜಕೀಯದಿಂದ ಕೊಂಚ ವಿರಾಮ ಪಡೆದುಕೊಂಡು ಮದುವೆ ತಯಾರಿಯಲ್ಲಿರುವ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರಸ್ವಾಮಿ ನಿಶ್ಚಿತಾರ್ಥದ ಬಳಿಕ ಭಾವಿ ಪತ್ನಿ ರೇವತಿಯೊಂದಿಗೆ ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸಿದರು.

    ಇದನ್ನೂ ಓದಿ: ರೇವತಿಯಂತಹ ಹುಡುಗಿ ಸಿಗಲು ನಾನು ಪುಣ್ಯ ಮಾಡಿದ್ದೆ, ಅವರು ಖಂಡಿತ ಹೊಂದಿಕೊಂಡು ಹೋಗುತ್ತಾರೆ: ನಿಖಿಲ್​ ಕುಮಾರಸ್ವಾಮಿ

    ರಾಜರಾಜೇಶ್ವರಿ ನಗರದ ದೇವಸ್ಥಾನಕ್ಕೆ ಭೇಟಿ ನೀಡಿದ ನೂತನ ಜೋಡಿ ವಿಶೇಷವಾದ ಪೂಜೆಯನ್ನು ಸಲ್ಲಿಸಿದರು. ಈ ಮೂಲಕ ತಮ್ಮ ಮೊದಲ ಪ್ರೇಮಿಗಳ ದಿನವನ್ನು ಸಾಂಪ್ರದಾಯಿಕವಾಗಿಯೇ ಆಚರಿಸಿಕೊಂಡರು. ಬಳಿಕ ದೇವಸ್ಥಾನದಲ್ಲಿ ಸಾಮಾನ್ಯರಂತೆ ಸಾಲಿನಲ್ಲಿ ಕುಳಿತು ಬಾಳೆ ಎಲೆಯಲ್ಲಿ ಪ್ರಸಾದವನ್ನು ಸೇವಿಸಿದರು.

    ಇದೇ ವೇಳೆ ನೂತನ ಜೋಡಿಯೊಂದಿಗೆ ಕುಟುಂಬದ ಸದಸ್ಯರು ಕೂಡ ಜತೆಯಾಗಿದ್ದರು. ವಿಶೇಷ ಭೇಟಿಯ ಫೋಟೋಗಳನ್ನು ನಿಖಿಲ್​ ತಮ್ಮ ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ವಿಶ್ವ ಪ್ರೇಮಿ ದಿನಾಚರಣೆಯ ಈ ದಿನದಂದು ಆ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಾನು ಹಾಗು ರೇವತಿಯವರು ಅಮ್ಮನ ಆಶೀರ್ವಾದ ಪಡೆದ ಸುಂದರ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: PHOTOS| ಬೆಂಗಳೂರಿನಲ್ಲಿ ನಡೆದ ನಿಖಿಲ್​ ಕುಮಾರಸ್ವಾಮಿ ರೇವತಿ ನಿಶ್ಚಿತಾರ್ಥದ ಫೋಟೋಗಳ ಝಲಕ್​ ಇದು…

    ಫೆ. 10ರಂದು ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ನೇರಿವೇರಿಸಿಕೊಂಡು ಜೋಡಿ ಏಪ್ರಿಲ್​ ತಿಂಗಳಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಇದಕ್ಕಾಗಿ ಈಗಾಗಲೇ ಎರಡು ಕುಟುಂಬಗಳಿಂದ ತಯಾರಿ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​)

    Nikhil Gowda ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಫೆಬ್ರವರಿ 14, 2020

    Nikhil Gowda ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಫೆಬ್ರವರಿ 14, 2020

    Nikhil Gowda ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಫೆಬ್ರವರಿ 14, 2020

    Nikhil Gowda ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಫೆಬ್ರವರಿ 14, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts