More

    ಜಾಲತಾಣದಲ್ಲಿ ಮೊದಲ ಬಾರಿಗೆ ಭಾವಿ ಪತ್ನಿಯ ಫೋಟೋ ಶೇರ್​ ಮಾಡಿಕೊಂಡು ನಿಖಿಲ್​ ಕುಮಾರಸ್ವಾಮಿ ಹೇಳಿದ್ದೇನು?

    ಬೆಂಗಳೂರು: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಮೊಮ್ಮೊಗ ಹಾಗೂ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ವಿಚಾರ ಇದೀಗ ಹೆಚ್ಚು ಸದ್ದು ಮಾಡುತ್ತಿದೆ.

    ನಿಖಿಲ್​ ರಾಜಕೀಯ ಮಾತ್ರವಲ್ಲದೇ ಸ್ಯಾಂಡಲ್​ವುಡ್​ನಲ್ಲಿ ಹೆಚ್ಚಾಗಿ ತೊಡಗಿಕೊಂಡಿರುವುದರಿಂದ ಅಭಿಮಾನಿಗಳಲ್ಲೂ ಸಹಜವಾಗಿಯೇ ನಿಖಿಲ್ ಮದುವೆ ಬಗ್ಗೆ ವಿಶೇಷ ಕುತೂಹಲವಿದೆ. ಹೀಗಾಗಿ ನಿಖಿಲ್​ ನೀಡುವ ಪ್ರತಿಯೊಂದು ಅಪ್ಡೇಟ್​ಗಳಿಗೂ ಅಭಿಮಾನಿಗಳು ಕಾದುಕುಳಿತಿದ್ದಾರೆ.

    ಇದೀಗ ಅಭಿಮಾನಿಗಳಿಗಾಗಿ ಸ್ಯಾಂಡಲ್​ವುಡ್​ ಯುವರಾಜ ನಿಖಿಲ್​ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಮೊದಲ ಬಾರಿಗೆ ಭಾವಿ ಪತ್ನಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ನಿಖಿಲ್​, ನನ್ನ ಸಂಗಾತಿ ಆಗುವವರ ಜತೆಗಿನ ಮೊದಲ ಫೋಟೊವನ್ನು ಶೇರ್ ಮಾಡುವುದಕ್ಕೆ ಖುಷಿ ಆಗುತ್ತಿದೆ. ಎಂದಿನಂತೆ ನನ್ನ ಮೇಲಿನ ನಿಮ್ಮ ಪ್ರೀತಿ ಹಾಗೂ ಹಾರೈಕೆಗಳು ಇನ್ನು ಮುಂದೆ ನಮ್ಮಿಬ್ಬರ ಮೇಲೂ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

    ಫೋಟೋ ಕಣ್ತುಂಬಿಕೊಂಡ ಅನೇಕ ಅಭಿಮಾನಿಗಳು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಫೋಟೋವನ್ನು ಲೈಕ್ಸ್​ ಮಾಡಿದ್ದು, ಒಳ್ಳೆಯ ಜೋಡಿ. ದೇವರು ನಿಮಗೆ ಆಶೀರ್ವದಿಸಲಿ ಎಂದೆಲ್ಲಾ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

    ಕಾಂಗ್ರೆಸ್​ ಶಾಸಕ ಎಂ.ಕೃಷ್ಣಪ್ಪ ಅವರ ಅಣ್ಣನ ಮೊಮ್ಮಗಳಾದ ರೇವತಿ ಅವರನ್ನು ನಿಖಿಲ್​ ವರಿಸಲಿದ್ದಾರೆ. ಈಗಾಗಲೇ ಹೆಣ್ಣು ನೋಡುವ ಶಾಸ್ತ್ರವನ್ನು ನಿಖಿಲ್​ ಕುಟುಂಬ ಮುಗಿಸಿದೆ. ಅದಕ್ಕೆ ಪ್ರತಿಯಾಗಿ ನಿಖಿಲ್ ಮನೆಗೆ ರೇವತಿ ಕುಟುಂಬವೂ ಭೇಟಿ ನೀಡಿ, ಶಾಸ್ತ್ರ, ಸಂಪ್ರದಾಯ ನಡೆಸಿದೆ. ನವಜೋಡಿಯ ನಿಶ್ಚಿತಾರ್ಥ ಫೆ.10 ರಂದು ನಡೆಯಲಿದ್ದು, ಮದುವೆ ಸಮಾರಂಭ ಏಪ್ರಿಲ್ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ನನ್ನ ಸಂಗಾತಿಯಾಗುವವರ ಜೊತೆಗಿನ ಮೊದಲ ಫೋಟೊವನ್ನ ಶೇರ್ ಮಾಡ್ಕೊಳೋಕೆ ಖುಷಿ ಆಗ್ತಿದೆ. ಎಂದಿನಂತೆ ನನ್ನ ಮೇಲಿನ ನಿಮ್ಮ ಪ್ರೀತಿ ಹಾಗೂ ಹಾರೈಕೆಗಳು ಇನ್ನು ಮುಂದೆ ನಮ್ಮಿಬ್ಬರ ಮೇಲೂ ಇರಲಿ ಎಂದು ಕೇಳಿಕೊಳ್ಳುತ್ತೇನೆ.

    Nikhil Gowda ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಫೆಬ್ರವರಿ 6, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts