More

    ಇನ್ನೆಷ್ಟು ದಿನ ನೈಟ್​ ಕರ್ಫ್ಯೂ?; ಇಲ್ಲಿದೆ ನೋಡಿ ಪೊಲೀಸ್ ಕಮಿಷನರ್ ಅವರ ಹೊಸ ಆದೇಶ..

    ಬೆಂಗಳೂರು: ಕೋವಿಡ್-19 ಸೋಂಕು ತಡೆ ಹಾಗೂ ನಿಯಂತ್ರಣ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ರಾತ್ರಿ ಕರ್ಫ್ಯೂ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮುಂದುವರಿಕೆ ಆಗಿದ್ದು, ಆ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ಆದೇಶ ಹೊರಡಿಸಿದ್ದಾರೆ.

    ರಾತ್ರಿ ಕರ್ಫ್ಯೂ ಜತೆಗೆ 144 ಸೆಕ್ಷನ್ (ನಿಷೇಧಾಜ್ಞೆ) ಸಹ ಜಾರಿಯಲ್ಲಿರಲಿದೆ. ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಆದರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ಇದಕ್ಕೆ ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ಮೂರು ದಿನ ಮನೆಯೊಳಗೇ ಇತ್ತು ಕಾಳಿಂಗ ಸರ್ಪ!; ಬರೋಬ್ಬರಿ 7 ಅಡಿ ಉದ್ದದ ಉರಗ..

    ಉಳಿದಂತೆ ಕರ್ಫ್ಯೂ ವೇಳೆ ಅನವಶ್ಯಕವಾಗಿ ಜನರು ಓಡಾಡುತ್ತಿರುವುದು ಕಂಡು ಬಂದರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದಿರುವ ಕಮಲ್ ಪಂತ್​, ನೈಟ್​ ಕರ್ಫ್ಯೂ ಸೆ. 27ರ ವರೆಗೂ ವಿಸ್ತರಣೆ ಮಾಡಲಾಗಿದೆ. ರಾತ್ರಿ 9ರಿಂದ ಬೆಳಗ್ಗೆ 5 ಗಂಟೆ ವರೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.

    ಗುದ್ದಿದವನಿಗೆ ಬಂದು ಮತ್ತೊಬ್ಬ ಗುದ್ದಿದ; ಹೆದ್ದಾರಿಯಲ್ಲಿ ಸರಣಿ ಅಪಘಾತ, ನಜ್ಜುಗುಜ್ಜಾದ ಕಾರು..

    ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ; ಹೆಂಡ್ತಿಯನ್ನು ಉಸಿರುಗಟ್ಟಿಸಿ ಕೊಂದ ಗಂಡ ತಾನು ನೇಣು ಬಿಗಿದುಕೊಂಡ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts