More

    ಮೂರನೇ ದಿನದ ವಹಿವಾಟಿನಲ್ಲಿ ಕುಸಿತ ಕಂಡ ಷೇರುಪೇಟೆ; ತೈಲ ಮತ್ತು ಅನಿಲ, ಹಣಕಾಸು ಷೇರುಗಳಲ್ಲೇ ನಷ್ಟ

    ಮುಂಬೈ: ಭಾರತದ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಚ್(ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಸತತ ಮೂರನೇ ದಿನದ ವಹಿವಾಟಿನಲ್ಲೂ ಕುಸಿತ ಕಂಡಿವೆ. ಸೋಮವಾರದ ಕುಸಿತಕ್ಕೆ ತೈಲ ಮತ್ತು ಅನಿಲ ಕಂಪನಿಗಳ ಷೇರುಗಳು ಮತ್ತು ಹಣಕಾಸು ಕ್ಷೇತ್ರದ ಕಂಪನಿಗಳ ಷೇರುಗಳ ನಷ್ಟವೇ ಕಾರಣ. ಇವುಗಳ ಮಾರಾಟ ಹೆಚ್ಚಿನ ಪ್ರಮಾಣದಲ್ಲಿ ನಡೆದ ಕಾರಣ, ಪೇಟೆಯ ಸೂಚ್ಯಂಕಗಳು ಕುಸಿತ ಕಂಡಿವೆ.

    ಸೋಮವಾರದ ವಹಿವಾಟಿನಲ್ಲಿ ಮೂವತ್ತು ಷೇರುಗಳ ಸೆನ್ಸೆಕ್ಸ್​ 202.05 ಅಂಶ(0.49%) ಕುಸಿತದೊಂದಿಗೆ 41,055.69 ರಲ್ಲೂ ನಿಫ್ಟಿ 67.75 ಅಂಶ (0.56%) ಕುಸಿದು 12,045.80ಯಲ್ಲೂ ದಿನದ ವಹಿವಾಟು ಮುಗಿಸಿವೆ. ಸೆನ್ಸೆಕ್ಸ್ ಪಟ್ಟಿಯಲ್ಲಿರುವ 30 ಷೇರುಗಳ ಪೈಕಿ 19 ನಷ್ಟದಲ್ಲೂ, 11 ಲಾಭದಲ್ಲೂ ಸೋಮವಾರದ ವಹಿವಾಟು ಕೊನೆಗೊಳಿಸಿವೆ.

    ಸೆನ್ಸೆಕ್ಸ್ ಪಟ್ಟಿಯಲ್ಲಿ ಒಎನ್​ಜಿಸಿ, ಸನ್​ಫಾರ್ಮಾ, ಎನ್​ಟಿಪಿಸಿ, ಬಜಾಜ್ ಆಟೋ, ಎಚ್​ಡಿಎಫ್​ಸಿ ಷೇರುಗಳು ಹೆಚ್ಚಿನ ನಷ್ಟ ಅನುಭವಿಸಿವೆ. ಇದೇ ರೀತಿ, ಟೈಟಾನ್​, ನೆಸ್ಟ್ಲೆ, ಟಿಸಿಎಸ್​, ಕೊಟಾಕ್ ಬ್ಯಾಂಕ್​, ಟಾಟಾ ಸ್ಟೀಲ್​ ಷೇರುಗಳು ಲಾಭಗಳಿಸಿವೆ. ಇದೇ ವೇಳೆ, ಏಷ್ಯನ್ ಮಾರುಕಟ್ಟೆ ಮಿಶ್ರ ಟಿಪ್ಪಣಿಯೊಂದಿಗೆ ವಹಿವಾಟು ಮುಗಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts