More

    ರಾಮಾಯಣ ಕೃತಿ ಸಮಾಜಕ್ಕೆ ದಾರಿದೀಪ

    ನಿಡಗುಂದಿ: ರಾಮಾಯಣ ಎನ್ನುವ ಅದ್ಭುತ ಕೃತಿಯನ್ನು ರಚಿಸುವ ಮೂಲಕ ಮಹರ್ಷಿ ವಾಲ್ಮೀಕಿಯವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶಾಸಕ, ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
    ಪಟ್ಟಣದ ವಾಲ್ಮೀಕಿ ಭವನದಲ್ಲಿ ಟಿಎಸ್‌ಪಿ ಯೋಜನೆಯ 55 ಲಕ್ಷ ಉಳಿತಾಯ ಮೊತ್ತದಲ್ಲಿ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸಮಾಜಕ್ಕೆ ಉತ್ತಮ ಮಾರ್ಗದರ್ಶನವಾಗುವ ಮಹತ್ವದ ಕೃತಿಯನ್ನು ದೇಶಕ್ಕೆ ಕೊಡುಗೆ ನೀಡಿದ ಮಹರ್ಷಿ ವಾಲ್ಮೀಕಿಯನ್ನು ನಾವೆಂದು ಮರೆಯಲು ಸಾಧ್ಯವಿಲ್ಲ. ಅವರ ಕೃತಿ ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿದೆ ಎಂದರು.
    ಜಿಲ್ಲೆಯಲ್ಲಿ ನಿಡಗುಂದಿ ಅತಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದೆ. ತಾಲೂಕು ಕೇಂದ್ರವಾದ ನಿಡಗುಂದಿಯಲ್ಲಿ ಕಚೇರಿಗಳ ಸ್ಥಾಪನೆಗೆ ಜಾಗೆ ಹುಡುಕುವ ಕಾರ್ಯ ನಡೆದಿದೆ ಎಂದರು.

    ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಶ್ರೀಗಳು ಮಾತನಾಡಿ, ತ್ಯಾಗದಿಂದ ಧರ್ಮ ಕಟ್ಟಲು ಸಾಧ್ಯವಿದೆ. ಬೇಡ ಸಮುದಾಯದವರು ಹುಟ್ಟಿನಿಂದಲೇ ನಾಯಕರಾಗಿದ್ದಾರೆ. ಆದರೆ, ಸಹವಾಸ ದೋಷದಿಂದ ಮೈಮರೆತು ಬದುಕುತ್ತಿದ್ದಾರೆ. ಶಿಕ್ಷಣ ಹಾಗೂ ಹೋರಾಟದಿಂದ ಜೀವನ ಬದಲಾಯಿಸಿಕೊಳ್ಳಬೇಕು. ನಾಯಕ ಜನಾಂಗದ ಇತಿಹಾಸ ಅರಿತು ಬದುಕಬೇಕು ಎಂದರು.

    ಪಪಂ ಅಧ್ಯಕ್ಷೆ ನೀಲಮ್ಮ ದೊಡಮನಿ, ಉಪಾಧ್ಯಕ್ಷ ಎಸ್.ಕೆ. ಗೌಡರ, ವಾಲ್ಮೀಕಿ ಸಮಾಜದ ಮುಖಂಡರಾದ ಅರ್ಜುನ ವಾಲಿಕಾರ, ಬಿ.ಜಿ. ಬಿರಾದಾರ, ಎನ್.ಆರ್. ಜಾಲಿಬೆಂಚಿ, ಶಾಂತಪ್ಪ ಓಲೇಕಾರ, ಪರಸಪ್ಪ ಸುರೇಶ ಸಣ್ಣಮಣಿ, ಪಂಚಪ್ಪ ನಾಯಕ, ಯಲಗೂರದಪ್ಪ ನಾಯಕ, ತಿಪ್ಪಣ್ಣ ತಳವಾರ, ಬಾಲಚಂದ್ರ ನಾಗರಾಳ, ವೈ.ಬಿ. ಬೆಳ್ಳಕ್ಕಿ, ಮುದಕಪ್ಪ ಬೇವೂರ, ಚಂದಪ್ಪ ನಾಯಕ, ಸೋಮಪ್ಪ ಓಲೇಕಾರ, ಚಂದಪ್ಪ ನಾಯಕ, ಪಾಂಡು ನಾಯಕ, ಗಂಗಪ್ಪ ನಾಯಕ, ಎಲ್.ಆರ್. ನಾಯಕ, ಶಂಕರ ರೇವಡಿ, ಎಸ್.ಎಸ್. ಬಳಿಗಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts