More

    ನದಾಫ್​, ಪಿಂಜಾರ್ ನಿಗಮ ಸ್ಥಾಪಿಸಿ

    ನಿಡಗುಂದಿ: ರಾಜ್ಯ ನದಾಫ್/ ಪಿಂಜಾರ್ ಸಂಘದ ನಿಡಗುಂದಿ ತಾಲೂಕು ಘಟಕದವರು ಸಮಾಜದ ಪ್ರತ್ಯೇಕ ನಿಗಮ ಸ್ಥಾಪನೆಗೆ ಆಗ್ರಹಿಸಿ ಸ್ಥಳೀಯ ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ ಅವರ ಮೂಲಕ ಮಂಗಳವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ದಾವಲಮಲೀಕ ನದಾಫ್ ಮಾತನಾಡಿ, ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ನದಾಫ್/ ಪಿಂಜಾರ್ ಜನಾಂಗವಿದ್ದು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುವಂತಾಗಿದೆ. ಜನಾಂಗದ ಮೂಲ ವೃತ್ತಿ ಗಾದಿ, ಹಗ್ಗ, ಕಂಣಿ ತಯಾರಿಕೆ ಮಾಡುವುದಾಗಿದ್ದು ಅತ್ಯಂತ ಬಡವರಿದ್ದಾರೆ. ಬೃಹತ್ ಕೈಗಾರಿಕೆ ಅಬ್ಬರದಲ್ಲಿ ಗುಡಿ ಕೈಗಾರಿಕೆಗಳು ಸೇರಿ ಮೂಲ ಕಸಬು ನಡೆಸಿ ಜೀವನ ಸಾಗಿಸುವವರ ಬದುಕು ಬೀದಿಗೆ ಬಿದ್ದಿದೆ. ಆರ್ಥಿಕವಾಗಿ ದುರ್ಬಲವಾದ ನಾವು ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದು ಮರೀಚಿಕೆಯಾಗಿದೆ ಎಂದು ಹೇಳಿದರು.
    ನಮ್ಮ ಸಮಸ್ಯೆಗಳ ಕುರಿತು ಸಿಎಂ ಅವರನ್ನು ಭೇಟಿಯಾಗಿ ಎರಡು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.
    ಸಮಾಜದ ಮುಖಂಡರಾದ ಪೀರಸಾಬ ನದ್ಾ, ಸಾಬು ನದ್ಾ, ಬಾವಾಸಾಹೇಬ ನದ್ಾ, ರಾಜಾಬಕ್ಷ ನದ್ಾ, ಸಾಜೀಮಸ್ತಾನ ನದಾಫ್, ಕಾಶೀಂಸಾಬ್ ನದ್ಾ, ಹಸನಸಾಬ ನದ್ಾ, ರಮಜಾನ ನದ್ಾ, ಶಬ್ಬೀರ ನದ್ಾ, ನಜೀರಾಬೇಗಂ ನದ್ಾ, ಹುಸೇನಬಿ ನದಾಫ್, ರೇಷ್ಮಾ ನದ್ಾ ಸೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts