More

    ಕೋವಿಡ್ ಹರಡದಂತೆ ಜಾಗ್ರತೆ ವಹಿಸಿ

    ನಿಡಗುಂದಿ: ಪಟ್ಟಣದಲ್ಲಿ ಕರೊನಾ ಯೋಧರಿಂದ ಕೋವಿಡ್ ಜಾಗೃತಿ ಅಭಿಯಾನ ನಡೆಸಲಾಯಿತು. ಕಂದಾಯ, ಪೊಲೀಸ್, ಪಂಚಾಯತ್, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕರೊನಾ ಯೋಧರು ಪಟ್ಟಣದಲ್ಲಿ ಶನಿವಾರ ಜಾಗೃತಿ ಅಭಿಯಾನ ನಡೆಸಿದರು.

    ಗ್ರಾಮದೇವತೆ ದೇವಸ್ಥಾನದಿಂದ ಆರಂಭವಾದ ಅಭಿಯಾನ ಕಾಲೇಜು ರಸ್ತೆ, ಬಸ್ ನಿಲ್ದಾಣ, ಮುದ್ದೇಬಿಹಾಳ ಕ್ರಾಸ್ ಸೇರಿದಂತೆ ಪಟ್ಟಣದ ವಿವಿಧೆಡೆ ಸಂಚರಿಸಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು.

    ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕರೊನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಕರೊನಾ ಲಕ್ಷಣಗಳು ಬದಲಾಗಿದ್ದು, ಜನತೆ ಎಚ್ಚರದಿಂದ ಇರಬೇಕು. ಲಕ್ಷಣಗಳಿಲ್ಲದೆ ರೋಗ ಹರಡುತ್ತಿದ್ದು, ಸದ್ಯದಲ್ಲಿ ಎರಡನೇ ಅಲೆ ಆರಂಭದ ಭೀತಿಯಲ್ಲಿ ಸಾಗುತ್ತಿದ್ದೇವೆ. ಆದ್ದರಿಂದ ಜನರು ಅವಶ್ಯಕತೆಗೆ ಮಾತ್ರ ಹೊರಬರಬೇಕು. ಬೇಕಾಬಿಟ್ಟಿ ಕಾರ್ಯಕ್ರಮ ಸೇರಿದಂತೆ ಮುಂತಾದವುಗಳನ್ನು ನಡೆಸಬಾರದು. ಸರ್ಕಾರದ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಿ ರೋಗದಿಂದ ದೂರವಿರಬೇಕು. ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿ ಬಳಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷೃ ವಹಿಸಬಾರದು ಎಂದು ಹೇಳಿದರು.

    ಪಿಎಸ್‌ಐ ಚಂದ್ರಶೇಖರ ಚಿಕ್ಕೋಡಿ ಮಾತನಾಡಿ, ಕೋವಿಡ್ ಹೆಮ್ಮಾರಿ ವಿರುದ್ಧ ನಾವೆಲ್ಲ ಹೋರಾಡುವುದು ಅನಿವಾರ್ಯವಾಗಿದ್ದು, ದೈಹಿಕ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ತಜ್ಞರ ಸಲಹೆಗಳನ್ನು ಪಾಲಿಸುತ್ತ ರೋಗ ಆವರಿಸದಂತೆ ಎಚ್ಚರವಹಿಸಬೇಕು. ಕೆಲ ರಾಜ್ಯಗಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾಗಿದ್ದು, ನಮ್ಮಲ್ಲಿ ಆರಂಭದ ಭೀತಿ ಹೆಚ್ಚಾಗಿದೆ. ಈಗಲೇ ಜಾಗೃತರಾಗಬೇಕು ಎಂದರು.

    ಕರೊನಾ ಯೋಧರಾದ ಮಂಜುಳಾ ತಳವಾರ, ರೆೇಣುಕಾ ಕುಂಬಾರ, ಶೇಖಪ್ಪ ಸಕ್ರಿ, ಮುದುಕು ಚಾವುಂಡಿ, ಸಿದ್ದು ಗೌಡರ, ಮುಸ್ತಾಕ್ ಹಣಗಿ, ಸಿಕಂದರ್ ರೇಶ್ಮಿ, ನಿಂಗಪ್ಪ ಹಡಪದ, ನಾರಾಯಣ ಕೂಚಬಾಳ, ಕುಮಾರ ಸುರಪುರ ಸೇರಿದಂತೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts