More

    VIDEO| ಪುರುಷರ ಮರ್ಮಾಂಗ ಮಾದರಿಯ ಕೇಕ್​ ಕತ್ತರಿಸಿದ ಬಾಲಿವುಡ್​ ನಟಿಗೆ ನೆಟ್ಟಿಗರ ತರಾಟೆ!

    ಮುಂಬೈ: ಸಿನಿಮಾ ನಟಿಯ ಹುಟ್ಟುಹಬ್ಬವೆಂದರೆ ಸಾಕಷ್ಟು ಶುಭಾಶಯಗಳು ಹರಿದು ಬರುವುದು ಸಾಮಾನ್ಯ. ಆದರೆ, ಇಲ್ಲೊರ್ವ​ ನಟಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಬರ್ತಡೇ ಆಚರಿಸಿಕೊಂಡ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಬಾಲಿವುಡ್​ ನಟಿ ನಿಯಾ ಶರ್ಮಾ ಗುರುವಾರವಷ್ಟೇ ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಕೆಲವೇ ಆಪ್ತರೊಟ್ಟಿಗೆ ಸಂಭ್ರಮಾಚರಣೆ ಮಾಡಿದರು. ಕೇಕ್​ ಕತ್ತರಿಸಿದ ವಿಡಿಯೋ ಸಹ ವೈರಲ್​ ಆಗಿದ್ದು, ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ. ಆದರೆ, ಅದೇ ವಿಡಿಯೋ ಅಭಿಮಾನಿಗಳ ಮುಜುಗರಕ್ಕೂ ಕಾರಣವಾಗಿದ್ದು, ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸೆಪ್ಟೆಂಬರ್​ 17ರ ರಾತ್ರಿ ನಿಯಾ, 18 ಕೇಕ್​ ಕತ್ತರಿಸಿ ಬರ್ತಡೇ ಆಚರಿಸಿಕೊಂಡರ. ಅದರಲ್ಲಿ ಒಂದು ಕೇಕ್​ ಪುರುಷರ ಮರ್ಮಾಂಗದ ಮಾದರಿಯಲ್ಲಿತ್ತು. ಇದಕ್ಕೆ ಸಂಬಂಧಸಿದ ವಿಡಿಯೋವನ್ನು ಸಹ ನಿಯಾ ಪೋಸ್ಟ್​ ಮಾಡಿಕೊಂಡಿದ್ದಾರೆ. ಕೇಕ್​ ಕತ್ತರಿಸುವಾಗ ಮುಜುಗರ ಅನುಭವಿಸಿದ ದೃಶ್ಯವು ವಿಡಿಯೋದಲ್ಲಿದೆ. ಇದೀಗ ಇದೇ ವಿಡಿಯೋ ಅಭಿಮಾನಿಗಳನ್ನು ಮುಜುಗರಕ್ಕೀಡುಮಾಡಿದ್ದು ನಟಿಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ನೀವು ಬರ್ತಡೇ ಆಚರಿಸಿಕೊಂಡಿರುವುದೇನೋ ಸರಿ. ಆದರೆ, ಇಂತಹ ವಿಡಿಯೋ ಮತ್ತು ಫೋಟೋಗಳನ್ನು ಜಾಲತಾಣಗಳಲ್ಲಿ ಪೋಸ್ಟ್​ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಡಿಯೋ ಪೋಸ್ಟ್​ ಮಾಡಿರುವ ನಿಯಾ ಇದು ನನ್ನ 30ನೇ ವರ್ಷದ ಡರ್ಟಿ (ಕೊಳಕು) ಬರ್ತಡೇ ಎಂದು ಅಡಿಬರಹ ಬರೆದುಕೊಂಡಿದ್ದಾರೆ. ನಿಜಕ್ಕೂ ಬೇಸರದ ಸಂಗತಿಯಾಗಿದೆ. ನೀವು ಈ ರೀತಿಯ ಅಶ್ಲೀಲ ಕೇಕ್​ ಚಿತ್ರಗಳನ್ನು ಪೋಸ್ಟ್​ ಮಾಡಬಾರದಿತ್ತು ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.

    ಟ್ರೋಲ್​ ಆಗುತ್ತಿದ್ದಂತೆ ಇತ್ತ ಎಚ್ಚರವಹಿಸಿರುವ ನಿಯಾ, ವಿಲಕ್ಷಣ ಅಥವಾ ಯಾವುದೇ ಇರಲಿ. ಅದನ್ನು ಅಲ್ಲಿಯೇ ಬಿಟ್ಟು ಶಾಂತವಾಗಿ ಮುನ್ನಡೆಯುತ್ತಿರಿ ಎಂದು ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಜತೆಗೆ ಪೋಸ್ಟ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts