More

    ವಶಕ್ಕೆ ಪಡೆದಿದ್ದ ಸಹೋದರರು ಮತ್ತು ವಿದ್ಯಾರ್ಥಿಯೊಬ್ಬನನ್ನು ಬಿಟ್ಟುಕಳಿಸಿದ ಎನ್​ಐಎ; ಕಾರಣವಿದು..

    ಉತ್ತರಕನ್ನಡ/ತುಮಕೂರು: ಭಟ್ಕಳದ ಇಬ್ಬರು ಸಹೋದರರು ಹಾಗೂ ತುಮಕೂರಿನ ಒಬ್ಬ ವಿದ್ಯಾರ್ಥಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಇಂದು ವಶಕ್ಕೆ ಪಡೆದಿದ್ದು, ಮೂವರನ್ನೂ ಇವತ್ತೇ ಬಿಟ್ಟು ಕಳುಹಿಸಿದೆ.

    ಭಯೋತ್ಪಾದಕ ಸಂಘಟನೆ ಜತೆ ನಂಟಿರುವ ಶಂಕೆಯ ಮೇರೆಗೆ ಭಟ್ಕಳದ ಅಬ್ದುಲ್ ಮುಖ್ತದೀರ್ ಮತ್ತು ಆತನ ಸಹೋದರನನ್ನು ಇಂದು ಬೆಳಗಿನ ಜಾವ ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮತ್ತೊಂದೆಡೆ ತುಮಕೂರಿನ ಹೆಚ್ಎಂಎಸ್ ಯುನಾನಿ ಮೆಡಿಕಲ್ ಕಾಲೇಜ್ ವಿದ್ಯಾರ್ಥಿ ಸಾಜೀನ್ ಎಂಬಾತನನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ದೆಹಲಿ ಹಾಗೂ ಬೆಂಗಳೂರಿನ ಎನ್‌ಐಎ ತಂಡ ಇವರನ್ನು ವಶಕ್ಕೆ ಪಡೆದಿತ್ತು.

    ಬೆಳಗ್ಗೆಯಿಂದ ಈವರೆಗೆ ಇವರನ್ನು ಗೌಪ್ಯಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಮುಖ್ತದೀರ್‌ನ ಮೊಬೈಲ್​ಫೋನ್​ ಡೇಟಾ ಹಾಗೂ ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಹಾಗೆಯೇ ಸಾಜಿದ್​ಗೆ ಸೇರಿದ್ದ ಮೊಬೈಲ್​ಫೋನ್​ ಮತ್ತು ಲ್ಯಾಪ್​ಟಾಪ್ ವಶಕ್ಕೆ ಪಡೆದಿದ್ದರು. ಆದರೆ ಶಂಕೆಗೆ ಪೂರಕ ಅಂಶ ಸಿಗದ ಕಾರಣದಿಂದ ಮೂವರನ್ನೂ ಬಿಟ್ಟು ಕಳುಹಿಸಿದ್ದಾರೆ.

    ಪ್ರೇಮಿಯೇ ಪ್ರೇಯಸಿಯ ರುಂಡ ಕಡಿದ ಪ್ರಕರಣ; ಕೊಲೆಗೆ ಸಹಕರಿಸಿದ್ದ ತಂದೆ, ಮದ್ವೆ ಮಾಡಿಸಿದ್ದ ತಾಯಿಯ ಬಂಧನ..

    ಬುಲೆಟ್​​ನ ಹಿಂದೊಂದು ನಂಬರ್, ಮುಂದೊಂದು ನಂಬರ್; 29 ಸಾವಿರ ರೂ. ದಂಡ, ಬೈಕ್ ಸವಾರ ಅಂದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts