More

    ಎಲ್​ಜಿ ಪಾಲಿಮರ್ಸ್​ಗೆ 50 ಕೋಟಿ ರೂಪಾಯಿ ಮಧ್ಯಂತರ ಜುಲ್ಮಾನೆ

    ನವದೆಹಲಿ: ವಿಶಾಖಪಟ್ಟಣದಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆಗೆ ಕಾರಣವಾದ ಹಿನ್ನೆಲೆಯಲ್ಲಿ ಎಲ್​ಜಿ ಪಾಲಿಮರ್ಸ್​ ಇಂಡಿಯಾಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 50 ಕೋಟಿ ರೂ. ಮಧ್ಯಂತರ ಜುಲ್ಮಾನೆ ವಿಧಿಸಿದೆ. ಜತೆಗೆ ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಮತ್ತಿತರರಿಗೆ ನಿರ್ದೇಶನ ನೀಡಿದೆ.

    ಪರಿಸರ ಮತ್ತು ಮಾನವ ಪ್ರಾಣಹಾನಿ ತಡೆಗಟ್ಟಲು ಅಗತ್ಯವಾದ ಕ್ರಮ ಕೈಗೊಳ್ಳುವ ವಿಷಯದಲ್ಲಿ ನಿಯಮಗಳು ಮತ್ತು ಶಾಸನಬದ್ಧ ಕಾಯ್ದೆಗಳ ಉಲ್ಲಂಘೆನಯಾಗಿರುವುದು ಮೇಲ್ನೋಟಕ್ಕೇ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ಮಧ್ಯಂತರ ಜುಲ್ಮಾನೆ ವಿಧಿಸಲಾಗುತ್ತಿದ್ದು, ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಬಯಸಲಾಗುತ್ತಿದೆ ಎಂದು ಹಸಿರು ನ್ಯಾಯಾಧಿಕರಣ ಹೇಳಿದೆ.

    ಇದನ್ನೂ ಓದಿ: ವೈಜಾಗ್​ ವಿಷಾನಿಲ ದುರಂತ: ಸದ್ಯ ತಮ್ಮ ಮನೆಗಳಿಗೆ ಹೋಗುವಂತಿಲ್ಲ ಕಾರ್ಖಾನೆ ಸಮೀಪದ ಗ್ರಾಮಸ್ಥರು!

    ವಿಷಾನಿಲ ಸೋರಿಕೆಯಿಂದ ಆಗಿರುವ ಪ್ರಾಣಹಾನಿ ಮತ್ತು ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಧಕ್ಕೆಯಾಗಿದೆ. ಇದಕ್ಕೆ ಕಂಪನಿಯ ನಿರ್ಲಕ್ಷ್ಯ ಕಾರಣ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಆದ್ದರಿಂದ ವಿಶಾಖಪಟ್ಟಣದ ಜಿಲ್ಲಾಧಿಕಾರಿ ಅವರ ಬಳಿ 50 ಕೋಟಿ ರೂ. ಮಧ್ಯಂತರ ಜುಲ್ಮಾನೆ ಮೊತ್ತವನ್ನು ತಕ್ಷಣವೇ ಜಮೆ ಮಾಡಬೇಕು ಎಂದು ನ್ಯಾಯಾಧಿಕರಣ ಎಲ್​ಜಿ ಪಾಲಿಮರ್ಸ್​ ಸಂಸ್ಥೆಗೆ ಸೂಚಿಸಿದೆ.

    ಸಮಿತಿ ರಚನೆ: ಇದೇ ಸಂದರ್ಭದಲ್ಲಿ ಘಟನೆಯ ಕುರಿತು ತನಿಖೆಗಾಗಿ ಎನ್​ಜಿಟಿ ಚೇರ್​ಪರ್ಸನ್​ ಆದರ್ಶ್​ ಕುಮಾರ್​ ಗೋಯೆಲ್​ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನೂ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಚಿಸಿದೆ. ಈ ಸಮಿತಿಯು 11 ಜನರ ಸಾವಿಗೆ ಕಾರಣವಾಗಿದ್ದಲ್ಲದೆ, ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆಯ ಕುರಿತು ತನಿಖೆ ನಡೆಸಿ ಮೇ.18ರೊಳಗೆ ನ್ಯಾಯಾಧಿಕರಣಕ್ಕೆ ವರದಿ ಸಲ್ಲಿಸಲಿದೆ.

    ಇದನ್ನೂ ಓದಿ: ವಿಚಿತ್ರ ಕಾಯಿಲೆಯಿಂದ ಪ್ರತಿನಿತ್ಯ ನೋವುಂಡು ಬದುಕುತ್ತಿರೋ ವ್ಯಕ್ತಿಯ ಕಣ್ಣೀರ ಕತೆಯಿದು!

    ಆಂಧ್ರಪ್ರದೇಶ ಹೈಕೋರ್ಟ್​ನ ನ್ಯಾಯಮೂರ್ತಿ ಬಿ. ಶೇಷಾಯನ ರೆಡ್ಡಿ, ವಿಶಾಖಪಟ್ಟಣದ ಆಂಧ್ರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ವಿ. ರಾಮಚಂದ್ರಮೂರ್ತಿ, ಆಂಧ್ರ ವಿಶ್ವವಿದ್ಯಾಲಯದ ರಾಸಾಯನಿಕ ಇಂಜಿನಿಯರಿಂಗ್​ ವಿಭಾಗದ ಮುಖ್ಯಸ್ಥ ಪ್ರೊ. ಪುಲಿಪತಿ ಕಿಂಗ್​, ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ, ಸಿಎಸ್​ಐಆರ್​ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಕೆಮಿಕಲ್​ ಟೆಕ್ನಾಲಜಿಯ ನಿರ್ದೇಶಕ ಹಾಗೂ ವಿಶಾಖಪಟ್ಟಣದ ಎನ್​ಇಇಆರ್​ಐನ ಮುಖ್ಯಸ್ಥರು ಈ ಸಮತಿಯ ಇತರೆ ಸದಸ್ಯರಾಗಿರುತ್ತಾರೆ.

    ಘಟನೆ ಕುರಿತು ತನಿಖೆ ನಡೆಸಲು ಸಮಿತಿಯ ಸದಸ್ಯರಿಗೆ ಅಗತ್ಯವಾದ ಸಾರಿಗೆ ಮತ್ತಿತರ ಸೌಲಭ್ಯಗಳನ್ನು ಒದಗಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಸಿರು ನ್ಯಾಯಾಧಿಕರಣ ನಿರ್ದೇಶನ ನೀಡಿದೆ.

    ಇವರಲ್ಲಿ ನಿಜವಾದ ಮಾಧುರಿ ದೀಕ್ಷಿತ್​ ಯಾರು ಎಂದು ಹೇಳಬಲ್ಲಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts