More

    “ಕರೊನಾ ತಡೆಯಲ್ಲಿ ಮುಂದಿನ 125 ದಿನಗಳು ಭಾರೀ ಮಹತ್ವದ್ದಾಗಿವೆ”

    ನವದೆಹಲಿ : ಕೋವಿಡ್ 19 ವಿರುದ್ಧ ಭಾರತ ಇನ್ನೂ ಸಾಮೂಹಿಕ ರೋಗನಿರೋಧಕತೆ(ಹರ್ಡ್​ ಇಮ್ಯುನಿಟಿ) ಸಾಧಿಸಿಲ್ಲ. ವೈರಸ್​ ಸೋಂಕಿನ ಹೊಸ ಅಲೆಗಳ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಖಾಯಿಲೆಯನ್ನು ನಿಯಂತ್ರಣದಲ್ಲಿಡುವಲ್ಲಿ ಮುಂದಿನ 125 ದಿನಗಳು ತುಂಬಾ ಮಹತ್ವದ್ದಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಕೇಂದ್ರ ಆರೋಗ್ಯ ಸಚಿವಾಲಯದ ಪತ್ರಿಕಾ ಗೋಷ್ಠಿಯಲ್ಲಿ ಇಂದು ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್​ ಅವರು, “ಈಗ ಸೋಂಕು ಹರಡದಂತೆ ತಡೆಗಟ್ಟುವುದು ಬಹಳ ಮುಖ್ಯ ಮತ್ತು ಇದು ಕೋವಿಡ್​-ಸೂಕ್ತ ನಡವಳಿಕೆಯನ್ನು ಅಳವಡಿಸಿಕೊಂಡರೆ ಮಾತ್ರ ಸಾಧ್ಯ” ಎಂದಿದ್ದಾರೆ.

    ಇದನ್ನೂ ಓದಿ: ನಿಂತಿಲ್ಲ ಚೀನಾ ಹೂಡಿಕೆ ಆ್ಯಪ್ ಹಾವಳಿ; ಅಧಿಕ ಲಾಭಾಂಶದ ಹೆಸರಿನಲ್ಲಿ 1.75 ಲಕ್ಷ ರೂ. ವಂಚನೆ

    ಮುಂದಿನ 125 ದಿನಗಳು ಭಾರತದ ಕರೊನಾ ವಿರುದ್ಧದ ಹೋರಾಟದಲ್ಲಿ ಬಹಳ ಮಹತ್ವದ್ದಾಗಿದೆ. ಸೋಂಕು ಹರಡದಂತೆ ತಡೆಯಬೇಕು. ಕೋವಿಡ್​ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ವಲಯದಲ್ಲಿ ಉಳಿಯಬೇಕು ಎಂದು ಡಾ. ಪೌಲ್ ಹೇಳಿದ್ದಾರೆ. (ಏಜೆನ್ಸೀಸ್)

    ಕರೊನಾ ಆತಂಕದಲ್ಲಿ ಕನ್ವರ್ ಯಾತ್ರೆ: ಆರೋಗ್ಯ, ಬದುಕುವ ಹಕ್ಕು ಪರಮೋಚ್ಛ ಎಂದ ಸುಪ್ರೀಂ ಕೋರ್ಟ್​

    ಮಕ್ಕಳಿಗೆ ಕರೊನಾ ಲಸಿಕೆ : ‘ಮುಗಿಯುವ ಹಂತದಲ್ಲಿ ಕ್ಲಿನಿಕಲ್ ಟ್ರಯಲ್ಸ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts