ಕೇಕ್ ಶಾಪ್‌ಗೆ ಕರೆದೊಯ್ದು ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್! ಆಮೇಲೆ ನಡೆದಿದ್ದೇನು?Kidnapping

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಾಡಿದ ಹೂಡಿಕೆಯ ಹಣ ವಾಪಸ್ ನೀಡುವಂತೆ ಒತ್ತಾಯಿಸಿ 57 ವರ್ಷದ ರಿಯಲ್ ಎಸ್ಟೇಟ್ ಸಲಹೆಗಾರನನ್ನೇ ಅಪಹರಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಮುಂಬೈನ ಬಾಂದ್ರಾ ಪಶ್ಚಿಮದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಉದ್ಯಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹೂಡಿಕೆ ವಿವಾದದಿಂದ ಆರಂಭವಾದ ಗಲಾಟೆ ಅಪಹರಣ, ಹಲ್ಲೆ ಮತ್ತು ಬಲವಂತದ ಹಣ ವರ್ಗಾವಣೆಯವರೆಗೆ ತಲುಪಿದೆ.Kidnapping
ಕೇಕ್ ಶಾಪ್‌ಗೆ ಕರೆದೊಯ್ದು ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್
ಕೇಕ್ ಶಾಪ್‌ಗೆ ಕರೆದೊಯ್ದು ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್WEB
Published on: 

ಮುಂಬೈ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಮಾಡಿದ ಹೂಡಿಕೆಯ ಹಣ ವಾಪಸ್ ನೀಡುವಂತೆ ಒತ್ತಾಯಿಸಿ 57 ವರ್ಷದ ರಿಯಲ್ ಎಸ್ಟೇಟ್ ಸಲಹೆಗಾರನನ್ನೇ ಅಪಹರಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಮುಂಬೈನ ಬಾಂದ್ರಾ ಪಶ್ಚಿಮದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಉದ್ಯಮಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹೂಡಿಕೆ ವಿವಾದದಿಂದ ಆರಂಭವಾದ ಗಲಾಟೆ ಅಪಹರಣ, ಹಲ್ಲೆ ಮತ್ತು ಬಲವಂತದ ಹಣ ವರ್ಗಾವಣೆಯವರೆಗೆ ತಲುಪಿದೆ.

ಪೊಲೀಸರ ಪ್ರಕಾರ, ಸಂತ್ರಸ್ತ ಹಿಮಾಂಶು ಮೆಹ್ತಾ ಚೆಂಬೂರಿನ ತಿಲಕ್ ನಗರದ ನಿವಾಸಿಯಾಗಿದ್ದು, ರಿಯಲ್ ಎಸ್ಟೇಟ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ವಿರಾರ್ ಪೂರ್ವದ ನಿವಾಸಿ ಶೈಲೇಶ್ ಸಾವರ್ಡೇಕರ್ (52) ಅವರೊಂದಿಗೆ 2025ರ ಸೆಪ್ಟೆಂಬರ್‌ನಲ್ಲಿ ರಿಯಲ್ ಎಸ್ಟೇಟ್ ಯೋಜನೆಯೊಂದರಲ್ಲಿ ಜಂಟಿಯಾಗಿ ಹಣ ಹೂಡಿಕೆ ಮಾಡಿದ್ದರು. ಮೆಹ್ತಾ 6 ಲಕ್ಷ ಹಾಗೂ ಸಾವರ್ಡೇಕರ್ 8 ಲಕ್ಷ ಹೂಡಿಕೆ ಮಾಡಿದ್ದರು. ಆದರೆ ಅಗತ್ಯ ದಾಖಲೆಗಳ ಕೊರತೆಯಿಂದ ಯೋಜನೆ ವಿಳಂಬವಾಗಿತ್ತು.

8 ಲಕ್ಷ ಹೂಡಿಕೆ ಹಣಕ್ಕಾಗಿ ಆರಂಭವಾದ ಕಿರಿಕ್

ಯೋಜನೆ ವಿಳಂಬವಾದ ಹಿನ್ನೆಲೆಯಲ್ಲಿ ಸಾವರ್ಡೇಕರ್ ತಮ್ಮ ಹೂಡಿಕೆಯಲ್ಲಿನ 4 ಲಕ್ಷವನ್ನು ವಾಪಸ್ ನೀಡುವಂತೆ ಮೆಹ್ತಾ ಅವರನ್ನು ಒತ್ತಾಯಿಸಲು ಆರಂಭಿಸಿದ್ದರು. ಮೆಹ್ತಾ ಕೂಡ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದರಿಂದ ಹಾಗೂ ತಮ್ಮ ಸಲಹೆಯ ಮೇರೆಗೆ ಸ್ನೇಹಿತ ಹಣ ಹೂಡಿದ್ದರಿಂದ ಹಂತ ಹಂತವಾಗಿ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು.

Also Read
ಬೆದರಿಕೆ ನಡುವೆಯೂ ದಿಲ್ಜಿತ್ ದೋಸಾಂಜ್ ದಿಟ್ಟ ಪ್ರತಿಕ್ರಿಯೆ! ಅಭಿಮಾನಿಗಳಿಂದ ಭಾರಿ ಮೆಚ್ಚುಗೆ | Diljit Dosanjh
ಕೇಕ್ ಶಾಪ್‌ಗೆ ಕರೆದೊಯ್ದು ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್

2026ರ ಮಾರ್ಚ್‌ನಿಂದ ಆಗಸ್ಟ್‌ವರೆಗೆ ಕಂತುಗಳಲ್ಲಿ 2 ಲಕ್ಷ ಪಾವತಿಸಿದ್ದರು. ಉಳಿದ ಹಣಕ್ಕಾಗಿ ಸಾವರ್ಡೇಕರ್, ಸುಜಿತ್ ಮಂಜ್ರೇಕರ್ ಮತ್ತು ಇತರರು ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಮೆಹ್ತಾ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಮಂಜ್ರೇಕರ್ ವಿರುದ್ಧ ಎನ್‌ಸಿಆರ್ ದೂರು ದಾಖಲಿಸಿದ್ದರು.

ಆಟೋದಲ್ಲಿ ಬಲವಂತವಾಗಿ ಕರೆದೊಯ್ದು ಹಲ್ಲೆ

ನವೆಂಬರ್ 19ರಂದು ಸಂಜೆ 6.10ರಿಂದ ರಾತ್ರಿ 11.15ರ ನಡುವಿನ ಅವಧಿಯಲ್ಲಿ ಬಾಂದ್ರಾ ಪಶ್ಚಿಮದ ಬೋರನ್ ರಸ್ತೆಯಲ್ಲಿರುವ ದ್ರಾವಿಡಿಯನ್ ಹೋಟೆಲ್ ಸಮೀಪ ಮೆಹ್ತಾ ಅವರನ್ನು ಆರೋಪಿಗಳು ಅಡ್ಡಗಟ್ಟಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ, ಬಲವಂತವಾಗಿ ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ವಿಲೇ ಪಾರ್ಲೆ ಪೂರ್ವದ ಕಡೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರ ಜೇಬಿನಲ್ಲಿದ್ದ 7,000 ನಗದನ್ನೂ ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇಷ್ಟಕ್ಕೇ ನಿಲ್ಲದ ಆರೋಪಿಗಳು ಮೆಹ್ತಾ ಅವರ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ. ಬಳಿಕ ಗೂಗಲ್ ಪೇ ಮೂಲಕ 67,000 ಹಣವನ್ನು ಸಾವರ್ಡೇಕರ್ ಅವರ ಮೊಬೈಲ್ ಸಂಖ್ಯೆಗೆ ವರ್ಗಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Also Read
ಮುಂಬೈ ರೈಲು ನಿಲ್ದಾಣದಲ್ಲಿ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ: ಯುವಕ ಅರೆಸ್ಟ್! Mumbai crime
ಕೇಕ್ ಶಾಪ್‌ಗೆ ಕರೆದೊಯ್ದು ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್

ಕೇಕ್ ಶಾಪ್‌ನಲ್ಲಿ ಕೂಡಿಹಾಕಿ ಕ್ರೆಡಿಟ್ ಕಾರ್ಡ್‌ನಿಂದ ಹಣ ವರ್ಗಾವಣೆ

ಮೆಹ್ತಾ ಅವರನ್ನು ಜೋಗೇಶ್ವರಿ ಪೂರ್ವದಲ್ಲಿರುವ 7 ಹೆವನ್ ಕೇಕ್ ಶಾಪ್‌ಗೆ ಕರೆದೊಯ್ದು ಅವರ ಇಚ್ಛೆಗೆ ವಿರುದ್ಧವಾಗಿ ಅಲ್ಲಿಯೇ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಅವರ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಒಟ್ಟು 1.52 ಲಕ್ಷ ಹಣವನ್ನು ವರ್ಗಾಯಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಆರೋಪಿಗಳ ಹಿಡಿತದಿಂದ ಬಿಡುಗಡೆಯಾದ ಮೆಹ್ತಾ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಬಾಂದ್ರಾ ಪೊಲೀಸರು ಸಾವರ್ಡೇಕರ್, ಮಂಜ್ರೇಕರ್ ಮತ್ತು ಮತ್ತೊಬ್ಬ ಸಹಚರನ ವಿರುದ್ಧ ಅಪಹರಣ ಹಾಗೂ ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಶುಕ್ರವಾರ ಸಾವರ್ಡೇಕರ್ ಅವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ. ರಿಯಲ್ ಎಸ್ಟೇಟ್ ಹೂಡಿಕೆಯ ಹಣಕಾಸಿನ ವಿವಾದವೊಂದು ವ್ಯಕ್ತಿಯ ಅಪಹರಣ ಮತ್ತು ಬಲವಂತದ ಹಣ ವರ್ಗಾವಣೆಯ ಆರೋಪದವರೆಗೆ ತಲುಪಿರುವುದು ಮುಂಬೈನಲ್ಲಿ ಚರ್ಚೆಗೆ ಕಾರಣವಾಗಿದೆ.