More

    ಮೊದಲ ವಿವಾಹ ವಾರ್ಷಿಕೋತ್ಸವ ದಿನದಂದೇ ವಿವಾಹಿತೆ ನೇಣಿಗೆ ಶರಣು..!

    ಬೆಂಗಳೂರು: ವಿವಾಹಿತೆಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಹೆಸರುಘಟ್ಟದಲ್ಲಿ ನಡೆದಿದೆ.

    ರೋಜಾ (24) ಮೃತ ದುರ್ದೈವಿ. ಹೆಸರುಘಟ್ಟ ಮುಖ್ಯರಸ್ತೆಯ ಗೃಹಲಕ್ಷ್ಮೀ ಲೇಔಟ್​ ನಿವಾಸದಲ್ಲಿ ಶವ ಪತ್ತೆಯಾಗಿದೆ. ವಿಕಾಸ್ ಹಾಗೂ ರೋಜಾ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಇಂದು ಇಬ್ಬರ ವಿವಾಹ ವಾರ್ಷಿಕೋತ್ಸವವು ಇತ್ತು. ಆದರೆ, ಇಂದೇ ವಿವಾಹಿತೆ ಮೃತರಾಗಿದ್ದು, ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

    ಇದನ್ನೂ ಓದಿ: ಪತ್ನಿ ಕೊಂದು ಶವದ ಜತೆ ಕುಳಿತಿದ್ದ ಪತಿ! ಭೀಕರ ದೃಶ್ಯ ಕಂಡು ಬೆಚ್ಚಿಬಿದ್ದ ಮಗ

    ಮೊದಲ ವಿವಾಹ ವಾರ್ಷಿಕೋತ್ಸವ ದಿನದಂದೇ ವಿವಾಹಿತೆ ನೇಣಿಗೆ ಶರಣು..!

    ಆತ್ಮಹತ್ಯೆಗೆ ಗಂಡನ ಕಿರುಕುಳವೇ ಕಾರಣ ಎಂದು ರೋಜಾ ಪಾಲಕರು ಆರೋಪಿಸಿದ್ದಾರೆ. ಈ ಬಗ್ಗೆ ಮೊದಲೇ ಕುಟುಂಬಸ್ಥರ ಬಳಿ ರೋಜಾ ಹೇಳಿಕೊಂಡಿದ್ದರಂತೆ. ಗಂಡ ವಿಕಾಸ್ ಹಾಗೂ ಮತ್ತವನ ಕುಟುಂಬಸ್ಥರ ಮೇಲೆ ರೋಜಾ ಕುಟುಂಬಸ್ಥರು ಇದೀಗ ಪೀಣ್ಯಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮನೆಗೆ ಮರಳಿದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ದುಷ್ಟರು: ತಂದೆ ಕಣ್ಣೆದುರಲ್ಲೇ ನಡೆಯಿತು ದುರಂತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts